ಡೆಲ್ಟಾಪ್ಲಸ್‌ ಆತಂಕ: ಗೋವಾ ಗಡಿ ಬಂದ್‌

Kannadaprabha News   | Asianet News
Published : Jun 30, 2021, 08:52 AM IST
ಡೆಲ್ಟಾಪ್ಲಸ್‌ ಆತಂಕ: ಗೋವಾ ಗಡಿ ಬಂದ್‌

ಸಾರಾಂಶ

* ಏಕಾಏಕಿ ಗಡಿ ಸಂಪೂರ್ಣ ಬಂದ್‌ ಮಾಡಿದ ಗೋವಾ ಸರ್ಕಾರ * ಕೆಲಸಕ್ಕೆ ತೆರಳುವ ಕಾರ್ಮಿಕರು ಹಾಗೂ ಉದ್ಯೋಗಿಗಳು ಪರದಾಟ  * ಕರ್ನಾಟಕ ಗೋವಾ ಗಡಿಭಾಗವಾದ ಮಾಜಾಳಿ ಚೆಕ್‌ ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ಕ್ರಮ

ಕಾರವಾರ(ಜೂ.30): ಡೆಲ್ಟಾಪ್ಲಸ್‌ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಗಡಿಯನ್ನು ಸಂಪೂರ್ಣ ಬಂದ್‌ ಮಾಡಿದ್ದು, ಕಾರವಾರದಿಂದ ನಿತ್ಯ ಗೋವಾಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಹಾಗೂ ಉದ್ಯೋಗಿಗಳು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರದಲ್ಲಿ ಡೆಲ್ಟಾಪ್ಲಸ್‌ ವೈರಸ್‌ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಗಡಿ ರಾಜ್ಯಗಳಾದ ಗೋವಾ ಮತ್ತು ಕರ್ನಾಟಕಕ್ಕೆ ಆತಂಕ ಸೃಷ್ಟಿಸಿದೆ. ಇದೇ ಕಾರಣಕ್ಕೆ ಗೋವಾ ಸರ್ಕಾರ ತನ್ನ ಗಡಿಯನ್ನು ಸಂಪೂರ್ಣ ಬಂದ್‌ ಮಾಡಿದೆ. ಇದರಿಂದಾಗಿ ಕರ್ನಾಟಕ ಗೋವಾ ಗಡಿಭಾಗವಾದ ಮಾಜಾಳಿ ಚೆಕ್‌ ಪೋಸ್ಟ್‌ನಲ್ಲಿ ಗೋವಾ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ದಿಢೀರ್‌ ನಿರ್ಧಾರದಿಂದಾಗಿ ಕಾರವಾರದಿಂದ ಗೋವಾಗೆ ನಿತ್ಯ ಕೆಲಸಕ್ಕೆ ತೆರಳಬೇಕಿದ್ದ ನೂರಾರು ಕಾರ್ಮಿಕರು ಹಾಗೂ ವಿವಿಧ ಕಂಪನಿ ಉದ್ಯೋಗಿಗಳು ಕೆಲಸಕ್ಕೆ ತೆರಳಲು ಸಾಧ್ಯವಾಗದೆ ವಾಪಸ್‌ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ಡೆಲ್ಟಾ+ ಪ್ರಕರಣ: ಮಹಾ ಗಡಿ ದಾಟಿ ಬರಲು ವ್ಯಾಕ್ಸೀನ್ ಸರ್ಟಿಫಿಕೇಟ್ ಮಸ್ಟ್

ಅಲ್ಲಿಗೆ ಉದ್ಯೋಗಿಗಳು ನಿತ್ಯ ಆರ್‌ಟಿಪಿಸಿರ್‌ ಟೆಸ್ಟ್‌ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ನಿತ್ಯ ಓಡಾಡುವ ಕಾರ್ಮಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
 

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ