ಚಾರ್ಮಾಡಿ ರಸ್ತೆ ಬಂದ್: ಆಹಾರವಿಲ್ಲದೇ ಮಂಗಗಳ ಪರದಾಟ!

By Web Desk  |  First Published Aug 24, 2019, 11:24 AM IST

ಚಾರ್ಮಾಡಿ ರಸ್ತೆ ಬಂದ್ ಮಂಗಗಳಿಗೆ ಆಹಾರ ಇಲ್ಲದೆ ಪರದಾಟ| ಪ್ರತಿದಿನ  ತನ್ನ ಮಕ್ಕಳೊಂದಿಗೆ ಆಹಾರಕ್ಕಾಗಿ ಮಂಗಗಳು ರಸ್ತೆಯಲ್ಲಿ ಕಾದು ಕುಳಿತಿರುವ ಕರಾಣಾಜನಕ ದ್ರಶ್ಯ| ಆಹಾರಕ್ಕಾಗಿ ಬಂದ ಮಂಗಗಳಿಗೆ ಬರೀ ಜಲಪಾತದ್ದೇ ಸದ್ದು| ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆ


ಕರ್ನಾಟಕದಲ್ಲಿ ತಲೆದೋರಿದ ಭೀಕರ ಪ್ರವಾಹ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯನ್ನೂ ಕಂಗೆಡಿಸಿತ್ತು. ವರುಣನ ಅಬ್ಬರಕ್ಕೆ ಒಂದೆಡೆ ಜನರು ಆಶ್ರಯ ಕಳೆದುಕೊಂಡಿದ್ದರೆ, ಮತ್ತೊಂದೆಡೆ ಗುಡ್ಡಗಳು ಕುಸಿದು ಬಿದ್ದಿದ್ದವು. ಮಳೆಯ ಆರ್ಭಟಕ್ಕೆ ಬೆಂಗಳೂರು- ಮಂಗಳೂರಿಗೆ ಸಂಪರ್ಕ ಕಲ್ಪಿಸುವ, ಚಿಕ್ಕಮಗಳೂರಿ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಮೂಲಕ ಹಾದು ಹೋಗುವ ರಸ್ತೆಗೂ ಹಾನಿಯಾಗಿದ್ದು, ಕೆಲ ದಿನಗಳಿಗೆ ಬಂದ್ ಮಾಡಲಾಗಿದೆ. ಹೀಗಿರುವಾಗ ಜನ ಸಂಚಾರವಿಲ್ಲದ ರಸ್ತೆಯಲ್ಲಿ ಮಂಗಗಳು ಆಹಾವಿಲ್ಲದೇ ಪರದಾಡುತ್ತಿರುವ ಕರುಣಾಜನಕ ದೃಶ್ಯ ಸಾಮಾನ್ಯವಾಗಿದೆ.

ಹೌದು ಕಳೆದ 10 ದಿನಗಳಿಂದ ಚಾರ್ಮಾಡಿ ರಸ್ತೆ ಬಂದ್ ಮಾಡಲಾಗಿದ್ದು, ಮಂಗಗಳಿಗೆ ಆಹಾರವೇ ಸಿಗುತ್ತಿಲ್ಲ. ಈ ಮೊದಲು ರಸ್ತೆಯಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಹಾಗೂ ಪ್ರವಸಿಗರು ಮಂಗಗಳಿಗೆ ಏನಾದರೂ ತಿನ್ನಲು ಕೊಡುತ್ತಿದ್ದರು. ಆದರೀಗ ರಸ್ತೆ ದುರಸ್ಥಿಯಿಂದಾಗಿ ರಸ್ತೆಯಲ್ಲಿ ಪ್ರಯಾಣಿಸುವವರೇ ಇಲ್ಲದಂತಾಗಿದೆ. ಆದರೆ ಇದನ್ನರಿಯದ ಮಂಗಗಳು ಪ್ರಯಾಣಿಕರು ಬರಬಹುದು ಎಂಬ ನಿರೀಕ್ಷೆಯಲ್ಲಿ ತನ್ನ ಮಕ್ಕಳೊಂದಿಗೆ ಆಹಾರಕ್ಕಾಗಿ ರಸ್ತೆಯಲ್ಲಿ ಕಾದು ಕುಳಿತುಕೊಳ್ಳಲಾರಂಭಿಸಿವೆ. ಆದರೆ ಅದೆಷ್ಟೇ ಕಾದರೂ ಜಲಪಾತದ ಸದ್ದು ಬಿಟ್ಟರೆ ಬೇರೇನೂ ಸಿಗದಂತಾಗಿದೆ.

Latest Videos

ಹಸಿವಿನಿಂದ ಕಂಗೆಟ್ಟು ಆಹಾರಕ್ಕಾಗಿ ರೋಧಿಸುತ್ತಿರುವ ಮಂಗಗಳ ಈ ಕರುಣಾಜನಕ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. 

click me!