ಶೀಘ್ರವೇ ಮಂಡ್ಯದಲ್ಲಿ ಮತ್ತೊಂದು ಚುನಾವಣೆ

Published : Aug 24, 2019, 11:22 AM ISTUpdated : Aug 24, 2019, 11:32 AM IST
ಶೀಘ್ರವೇ ಮಂಡ್ಯದಲ್ಲಿ ಮತ್ತೊಂದು ಚುನಾವಣೆ

ಸಾರಾಂಶ

ಮಂಡ್ಯದಲ್ಲಿ ಶೀಘ್ರವೇ ಮತ್ತೊಂದು ಚುಣಾವಣೆ ನಡೆಯುತ್ತಿದೆ. ಈಗಾಗಲೇ ಚುನಾವಣೆಗೆ ದಿನಾಂಕವನ್ನೂ ನಿಗದಿ ಮಾಡಲಾಗಿದೆ. ಅಷ್ಟಕ್ಕೂ ಯಾವುದಕ್ಕೆ ಈ ಮತದಾನ? ಓದಿ ಈ ಸುದ್ದಿ....

ಮಂಡ್ಯ:  ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಸೆಪ್ಟೆಂಬರ್‌ 8 ರಂದು ಚುನಾವಣೆ ನಡೆಯಲಿದೆ. ಚುನಾವಣಾ ವೇಳಾಪಟ್ಟಿಪ್ರಕಟಕೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಆಗಸ್ವ್‌ 24 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಿಟರ್ನಿಂಗ್‌ ಅಧಿಕಾರಿಗಳಿಗೆ ಸಲ್ಲಿಸಬೇಕು.

ನಾಮಪತ್ರ ಸಲ್ಲಿಸಲು ಆಗಸ್ವ್‌ 31 ಕೊನೆ ದಿನ. ಸೆಪ್ಟೆಂಬರ್‌ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಿಟರ್ನಿಂಗ್‌ ಅಧಿಕಾರಿಗಳಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆ ನಂತರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಪ್ರಕಟವಾಗಲಿದೆ. ನಾಮಪತ್ರಗಳನ್ನು ವಾಪಸ್‌ ಪಡೆಯಲು ಸೆಪ್ಟೆಂಬರ್‌ 2ರ ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶವಿದೆ.

ವಿವಿಧ ಜಿಲ್ಲೆಗಳ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಮಧ್ಯಾಹ್ನ 3 ಗಂಟೆಯ ನಂತರ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಮನ್‌ಮುಲ್ ಕಚೇರಿಯ ನೋಟೀಸ್‌ ಬೋರ್ಡಿನಲ್ಲಿ ಅರ್ಹತೆ ಪಡೆದವರ ಅಂತಿಮ ಪಟ್ಟಿಪ್ರಕಟಿಸಲಾಗುವುದು. ಚುನಾವಣೆ ನಡೆಸಬೇಕಾದಲ್ಲಿ ಅರ್ಹತೆ ಪಡೆದವರಿಗೆ ನಂತರ ಚಿಹ್ನೆ ನೀಡಲಾಗುವುದು. ಸೆಪ್ಟೆಂಬರ್‌ 4 ರಂದು ಬೆಳಗ್ಗೆ 11 ಗಂಟೆಗೆ ಚುನಾವಣೆ ಸ್ಪರ್ಧಿಸಲು ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿಚಿಹ್ನೆ ಸಮೇತ ಪ್ರಕಟಿಸಲಾಗುತ್ತದೆ. 

ವಿದ್ಯಾನಗರದ ಶ್ರೀ ಲಕ್ಷ್ಮೀಜನಾರ್ಧನ ಶಾಲೆಯಲ್ಲಿ ಚುನಾವಣೆ ಮತದಾನವು ಸೆಪ್ಟೆಂಬರ್‌ 8 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ನಡೆಯಲಿದೆ. ಮತದಾನ ಮುಕ್ತಾಯವಾದ ನಂತರ ಮತ ಎಣಿಕೆ ನಡೆಯಲಿದೆ. ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ರಿಟರ್ನಿಂಗ್‌ ಅಧಿಕಾರಿಗಳಾದ, ಅಪರ ಜಿಲ್ಲಾಧಿಕಾರಿ ಟಿ.ಯೊಗೇಶ್‌ ತಿಳಿಸಿದ್ದಾರೆ.

PREV
click me!

Recommended Stories

ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ
ತಂತ್ರಜ್ಞಾನದ ನೆರವಿನಿಂದ ಜೈಲುಗಳಲ್ಲಿ ಸುಧಾರಣೆ ತರಲು ಅಲೋಕ್ ಕುಮಾರ್ ನೇತೃತ್ವ