ತವರು ಕ್ಷೇತ್ರ ಬಾದಾಮಿಯಲ್ಲೇ ಸಿದ್ದಾರಾಮಯ್ಯಗೆ ಮಹಿಳೆಯರಿಂದ ಘೇರಾವ್

By Web Desk  |  First Published Aug 19, 2019, 9:01 PM IST

ಮಾಜಿ ಸಿಎಂ ಸಿದ್ದರಾಮಯ್ಯ ಕಾರು ಅಡ್ಡ ಹಾಕಿದ ಮಹಿಳೆಯರು/ ಕಾಲೋನಿಗೆ ಭೇಟಿ ನೀಡದಕ್ಕೆ ಆಕ್ರೋಶ/ ತುರ್ತು ಪರಿಹಾರ ಒದಗಿಸಿಕೊಡಲು ಆಗ್ರಹ/ ತಕ್ಷಣವೇ ಸ್ಪಂದಿಸಿದ ಮಾಜಿ ಸಿಎಂ


ಬಾಗಲಕೋಟೆ[ಆ. 19]  ತಮ್ಮ ಕಾಲೋನಿಗೆ ಸಿದ್ದರಾಮಯ್ಯ ಭೇಟಿ ನೀಡಲ್ಲ ಎಂದು ಆರೋಪಿಸಿ  ಬಾದಾಮಿ ತಾಲೂಕಿನ ಸುಳ್ಳ ಗ್ರಾಮದ ಎಸ್ ಸಿ ಕಾಲೋನಿ ಗ್ರಾಮಸ್ಥರು ಸಿದ್ದರಾಮಯ್ಯ ಕಾರಿಗೆ ಘೇರಾವ್ ಹಾಕಿದ್ದಾರೆ.

ಎಸ್ ಸಿ ಕಾಲೋನಿಯಲ್ಲಿ ಮನೆಬಿದ್ದಿವೆ ಬಂದು ನೋಡಿ, ನಮ್ಗೆ ಏನು ಪರಿಹಾರ ಕೊಡುತ್ತಿಲ್ಲ, ತಿನ್ನೋಕೆ ಅಕ್ಕಿ, ಜಾನುವಾರುಗಳಿಗೆ ಮೇವು ಕೊಡ್ತಿಲ್ಲ ಎಂದು ಆರೋಪಿಸಿ  ಸಿದ್ದರಾಮಯ್ಯ ಕಾರು ಅಡ್ಡಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡ ಸುಳ್ಳ ಗ್ರಾಮದ ಎಸ್ ಸಿ ಕಾಲೋನಿ ಮಹಿಳೆಯರ ನೋವಿಗೆ ಸ್ಪಂದಿಸಿದ ಮಾಜಿ ಸಿಎಂ ಕೂಡಲೇ  ಮಾಜಿ ಶಾಸಕ ಸೋಮಶೇಖರ ಅವರ ಕೈಯಿಂದ ಮಹಿಳೆಯರಿಗೆ ಕಿಟ್ , ಅಕ್ಕಿ ವಿತರಿಸಿದರು. ಸುಳ್ಳ ಗ್ರಾಮ ಸಂಪೂರ್ಣ ಸ್ಥಳಾಂತರಿಸಿ ಮನೆ ಒದಗಿಸೋ ಸಿದ್ದರಾಮಯ್ಯ ಭರವಸೆಯನ್ನು ನೀಡಿದರು. 

Video:ಕಾಲಿಗೆ ಬೀಳ್ತೀವಿ ಸೂರು ಕೊಡಿ: ಸಿದ್ದರಾಮಯ್ಯ ಮುಂದೆ ವೃದ್ಧೆ ಅಳಲು

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮಲಪ್ರಭಾ ನದಿ ಪ್ರವಾಹದಿಂದ ಗ್ರಾಮದ ಜನರು ನಿರಾಶ್ರಿತರಾಗಿದ್ದಾರೆ. ಸಿದ್ದರಾಮಯ್ಯ ತಮ್ಮ ಕೈಹಿಡಿದ ಕ್ಷೇತ್ರ ಬಾದಾಮಿಯಲ್ಲಿ ಪ್ರವಾಸ ನಡೆಸಿ ನೆರೆ ಪರಿಸ್ಥಿತಿ ಅವಲೋಕಿಸಿದರು.

click me!