ಶಾಸಕ - ಜಿಲ್ಲಾಡಳಿತದ ಶ್ರಮ : ಮೂರೇ ದಿನದಲ್ಲಿ ಕೊಚ್ಚಿ ಹೋದ ಸೇತುವೆ ನಿರ್ಮಾಣ

Published : Aug 19, 2019, 03:52 PM ISTUpdated : Aug 19, 2019, 03:57 PM IST
ಶಾಸಕ - ಜಿಲ್ಲಾಡಳಿತದ ಶ್ರಮ : ಮೂರೇ ದಿನದಲ್ಲಿ ಕೊಚ್ಚಿ ಹೋದ ಸೇತುವೆ ನಿರ್ಮಾಣ

ಸಾರಾಂಶ

ದಕ್ಷಿಣ ಕನ್ನಡದಲ್ಲಿ ಸುರಿದ ಭಾರೀ ಮಳೆಯಿಂದ ಕೊಚ್ಚಿ ಹೋಗಿದ್ದ ಸೇತುವೆ ಮೂರೇ ದಿನದಲ್ಲಿ ಮರು ನಿರ್ಮಾಣವಾಗಿದೆ. ಜಿಲ್ಲಾಡಳಿತ ಹಾಗೂ ಇಲ್ಲಿನ ಶಾಸಕರ ಪರಿಶ್ರಮದಿಂದ ಮತ್ತೆ ಸಂಪರ್ಕ ಸೇತುವೆ ಸಂಚಾರಕ್ಕೆ ಸಿದ್ಧವಾಗಿದೆ. 

ಬೆಳ್ತಂಗಡಿ [ಆ.19]: ಈ ಬಾರಿ ರಾಜ್ಯದಲ್ಲಿ ಸುರಿದ ಭಾರಿ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿತ್ತು.  ದಕ್ಷಿಣ ಕನ್ನಡದ ಮಳೆಯಿಂದ ಬೆಳ್ತಂಗಡಿಯಲ್ಲಿ ಕೊಚ್ಚಿ ಹೋಗಿದ್ದ 53 ವರ್ಷದ ಹಳೆಯ ಸೇತುವೆ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ. 

ಮೂರು ದಿನದಲ್ಲಿ ಬಂಜಾರುಮಲೆ ಪ್ರದೇಶದಲ್ಲಿ ಜಿಲ್ಲಾಡಳಿತ ಹಾಗೂ ಹರೀಶ್ ಪೂಂಜಾ ಆಶಯದಂತೆ ಕಬ್ಬಿಣದ ಸೇತುವೆ ನಿರ್ಮಾಣವಾಗಿದೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಣಿಯೂರು ಹೊಳೆಗೆ 42 ಅಡಿ ಉದ್ದ, 4 ಅಡಿ ಅಗಲದ ಸೇತುವೆಯನ್ನು 5 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. 

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಸೂಚನೆ ಮೇರೆಗೆ ಜಿಲ್ಲಾಡಳಿತ ಸೇತುವೆ ನಿರ್ಮಿಸುವ ಮೂಲಕ ಮಾದರಿಯಾಗಿದೆ.

ರಾಜ್ಯದ 17 ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆ ಪ್ರವಾಹ ಪರಿಸ್ಥಿತಿ ಸೃಷ್ಟಿ ಮಾಡಿತ್ತು. ಈ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯೂ ತತ್ತರಿಸಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಎದುರಿಸಿತ್ತು.

PREV
click me!

Recommended Stories

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ; ಶಾಸ್ತ್ರಬದ್ಧ ಸಂಪ್ರದಾಯ ಆಚರಣೆ!
ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!