ಬೆಳಗಾವಿ(ಡಿ.28): ರೈತರ ಸಮಾಧಿಯ ಮೇಲೆ ರಾಜಕಾರಣಿಗಳ (Politics) ಕನಸಿನ ರೈಲ್ವೆ ಯೋಜನೆಯನ್ನು ಮಾಡುವುದು ಸರಿಯಲ್ಲ ಎಂದು ಕರ್ನಾಟಕ (Karnataka) ರಾಜ್ಯ ರೈತ ಸಂಘ (Farmers Organisation) ಹಾಗೂ ಹಸಿರು ಸೇನೆಯ ರೈತ ಮುಖಂಡ ಪ್ರಕಾಶ ನಾಯಕ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ (Karnataka Govt) ವಿರುದ್ಧ ಹರಿಹಾಯ್ದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ಕನಸಿನ ಕೂಸು ಎಂದು ಫಲವತ್ತಾದ ಕೃಷಿ ಭೂಮಿಯನ್ನು (Farm Land) ವಶಪಡಿಸಿಕೊಳ್ಳುವ ಹುನ್ನಾರವನ್ನು ಬೆಳಗಾವಿ (Belagavi) ಸಂಸದೆ ಮಂಗಳಾ ಅಂಗಡಿ ಅವರು ಮಾಡಿದ್ದಾರೆ. ಅಲ್ಲದೆ, ರಾಜಕಾರಣಿಗಳ ಕನಸಿನ ಕೂಸು ಎಂದು ರೈತರ ಸಮಾಧಿ ಮೇಲೆ ಯೋಜನೆ ತರಲು ಹೊರಟಿರುವುದಕ್ಕೆ ನಮ್ಮ ವಿರೋಧ ಇದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ (Karnataka Raitha sangh) ಹಾಗೂ ಹಸಿರು ಸೇನೆಯ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಬೆಳಗಾವಿಯಿಂದ ಧಾರವಾಡ ನಿಯೋಜಿತ ರೈಲ್ವೆ ಮಾರ್ಗಕ್ಕಾಗಿ ಉತ್ತಮವಾದ, ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ. ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರು ಉದ್ದೇಶ ಪೂರ್ವಕವಾಗಿ ಕೆ.ಕೆ.ಕೊಪ್ಪದ ಗುಡ್ಡದ ಮೇಲಿಂದ ಹೋಗುವ ರೈಲ್ವೆ ಯೋಜನೆಯನ್ನು ರೈತರ ಫಲವತ್ತಾದ ಭೂಮಿಯ ಮೇಲೆ ಯೋಜನೆ ಅನುಷ್ಠಾನಗೊಳಿಸಲು ಹೊರಟಿರುವುದು ಖಂಡನೀಯ ಎಂದರು.
ಬೆಳಗಾವಿ, ಧಾರವಾಡ (Dharwad) ಜನರ ಬಹುವರ್ಷಗಳ ಬೇಡಿಕೆಯಾಗಿರುವ ಬೆಳಗಾವಿ- ಕಿತ್ತೂರು (Belagavi - kittur) ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗ (RailwayTrack) ಆಗಬೇಕೆಂದು ಇತ್ತು. ಇದು ಸ್ವಾಗತಾರ್ಹ. ಕೇವಲ ಬೆಳಗಾವಿ- ಧಾರವಾಡ ಮಾತ್ರವಲ್ಲ ಬೆಳಗಾವಿಯಿಂದ ಕೊಲ್ಹಾಪುರ ಮಾರ್ಗದವರೆಗೂ ರೈಲ್ವೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಅಲ್ಲದೆ, ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡ ರೈಲ್ವೆ ಯೋಜನೆಗೆ ದೇಸೂರು, ಕೆ.ಕೆ.ಕೊಪ್ಪ ನಿಯೋಜಿತ ಮಾರ್ಗ ಸಂಪೂರ್ಣ ಫಲವತ್ತತೆಯ ಕಪ್ಪು ಭೂಮಿ (Land) , ಸಣ್ಣ ರೈತರು ಚಿಕ್ಕ ಹಿಡುವಳಿಯ ಕಬ್ಬು ಬೆಳೆಯುವ ನೀರಾವರಿ ಭೂಮಿ ಇದೆ. ಇದನ್ನೇ ಅವಲಂಬಿಸಿ ಗುರ್ಲಗುಂಜಿ, ದೇಸೂರ, ರಾಜಹಂಸ ಘಡ, ನಂದಿಹಳ್ಳಿ, ನಾಗೇನಹಟ್ಟಿ, ನಾಗಿರಹಾಳ, ಕೆ.ಕೆ.ಕೊಪ್ಪ, ಹಾಲಗಿಮರ್ಡಿ ಮೊದಲಾದ ಊರುಗಳಿದ್ದು ಇಲ್ಲಿನ ಜನರ ಜೀವನ ಕೃಷಿಯಾಧಾರಿತವಾಗಿದೆ ಎಂದರು.
ನಿಯೋಜಿತ ಮಾರ್ಗ ರೈತರ ಕೃಷಿ ಭೂಮಿಯನ್ನು ಇಬ್ಭಾಗ ಮಾಡುವುದರೊಂದಿಗೆ ಕೃಷಿಗೆ ತೊಂದರೆಯಾಗುತ್ತಿದ್ದು, ಸಂಬಂಧಿತ ಎಲ್ಲ ಕೃಷಿ ಭೂಮಿಯು ನೀರಾವರಿ ಹಾಗೂ ಜಾನುವಾರುಗಳಿಗೂ ಈ ಮಾರ್ಗದಲ್ಲಿ ಯೋಜನೆ ಮಾಡಿದರೆ ಸಾಕಷ್ಟುತೊಂದರೆಯಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ರಾಘವೇಂದ್ರ ನಾಯಿಕ, ನರೇಂದ್ರ ಪಾಟೀಲ, ಪ್ರಸಾದ ಪಾಟೀಲ, ಸಂಗಪ್ಪ ಕಂಬಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯುತ್ ರೈಲು ಸಂಚಾರ : ಇಲ್ಲಿನ ನೈಋುತ್ಯ ರೈಲ್ವೆ(South Western Railway) ಶ್ರೀ ಸಿದ್ಧಾರೂಢ ಸ್ವಾಮೀಜಿ (ಎಸ್‌ಎಸ್‌ಎಸ್) ನಿಲ್ದಾಣದಿಂದ ಭಾನುವಾರ ಮೊದಲ ಬಾರಿ ಎರಡು ಇ-ಲೋಕೋಮೋಟಿವ್ (ವಿದ್ಯುತ್ ಚಾಲಿತ) ರೈಲುಗಳು(Train) ಯಶಸ್ವಿ ಸಂಚಾರ ನಡೆಸಿದವು. ಮೈಸೂರು- ಹುಬ್ಬಳ್ಳಿ(Mysuru-Hubballi) ನಡುವಿನ ಹಂಪಿ ಎಕ್ಸ್‌ಪ್ರೆಸ್ (16592) ರೈಲು ಎಸ್‌ಎಸ್‌ಎಸ್ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿದ್ಯುತ್ ಲೋಕೋಮೋಟಿವ್(Electric Locomotive) ರೈಲು ಎನಿಸಿತು.
ಶನಿವಾರ ಸಂಜೆ ಹಂಪಿ 6.35ಕ್ಕೆ ಮೈಸೂರಿನಿಂದ (ಆರ್‌ಪಿಎಂ) ಡಬ್ಲೂಎಪಿ-7 30680 ಎಂಜಿನ್ ಮೂಲಕ ಹೊರಟಿದ್ದ ಇ-ಲೋಕೋಮೋಟೆವ್ ಹಂಪಿ ಎಕ್ಸ್‌ಪ್ರೆಸ್(Hampi Express) ಮೈಸೂರು- ಬೆಂಗಳೂರು- ಗುಂತಕಲ್- ಬಳ್ಳಾರಿ- ಹೊಸಪೇಟೆ- ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಆಗಮಿಸಿತು. ಬೆಳಗ್ಗೆ 10.30ಕ್ಕೆ ಎಸ್‌ಎಸ್‌ಎಸ್ ರೈಲ್ವೆ ನಿಲ್ದಾಣ ಪ್ರವೇಶಿತು. ಬಳಿಕ ಸಂಜೆ 6.20ಕ್ಕೆ ಪುನಃ ಮೈಸೂರಿಗೆ ತೆರಳಿದೆ.
ಇಲ್ಲಿವರೆಗೆ ಹೊಸಪೇಟೆ(Hosapete) ವರೆಗೆ ವಿದ್ಯುತ್ ಮಾರ್ಗವಿದ್ದ ಕಾರಣ ಅಲ್ಲಿ ನಿಲುಗಡೆ ಮಾಡಿ ಇ-ಲೋಕೋಮೋಟಿವ್ ಎಂಜಿನ್ ಬದಲಿಸಿ ಡೀಸೆಲ್ ಎಂಜಿನ್ ಜೋಡಿಸಲಾಗುತ್ತಿತ್ತು. ಇದೀಗ ಹೊಸಪೇಟೆಯಿಂದ ಹುಬ್ಬಳ್ಳಿ ವರೆಗೂ ವಿದ್ಯುತ್ ಮಾರ್ಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೊದಲ ಬಾರಿ ವಿದ್ಯುತ್ ಚಾಲಿತ ರೈಲು ಸಂಚಾರ ನಡೆಸಿದೆ.
ಇನ್ನು ವಿಜಯವಾಡ- ಹುಬ್ಬಳ್ಳಿ ನಡುವಿನ ಅಮರಾವತಿ ಎಕ್ಸ್‌ಪ್ರೆಸ್ (17225/26) ಇ-ಲೋಕೋಮೋಟಿವ್ ರೈಲು ಕೂಡ ಮೊದಲ ಬಾರಿ ಎಸ್‌ಎಸ್‌ಎಸ್ ನಿಲ್ದಾಣ ಪ್ರವೇಶಿಸಿದೆ. ಶನಿವಾರ ರಾತ್ರಿ 7.35ಕ್ಕೆ ಹೊರಟಿದ್ದ ವಿಜಯವಾಡ ರೈಲು ಬೆಳಗ್ಗೆ ಹುಬ್ಬಳ್ಳಿಗೆ 11.20ಕ್ಕೆ ಪ್ರವೇಶಿಸಿತು. ಈ ಹಿಂದೆ ಗುಂತಕಲ್‌ನಲ್ಲಿ ಈ ರೈಲನ್ನು ನಿಲುಗಡೆ ಮಾಡಿ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗುತ್ತಿತ್ತು. ಈ ಇ-ಲೋಕೋಮೋಟಿವ್ ರೈಲು ಮಧ್ಯಾಹ್ನ 1.20ಕ್ಕೆ ವಾಪಸ್ ತೆರಳಿದೆ.
ಡೀಸೆಲ್‌ನಿಂದ(Diesel) ಉಂಟಾಗುತ್ತಿದ್ದ ವಾಯುಮಾಲಿನ್ಯವನ್ನು(Air pollution) ಇ-ಲೋಕೋಮೋಟಿವ್ ತಡೆಯಲಿದೆ. ಜತೆಗೆ ಎಂಜಿನ್ ಬದಲಿಸಲು 15 ನಿಮಿಷ ಸಮಯ ಉಳಿತಾಯವಾಗುತ್ತಿದೆ. ರೈಲ್ವೆ ಪ್ರಯಾಣ ಆರಂಭದಿಂದ ಅಂತ್ಯದ ವರೆಗೆ ಇ-ಲೋಕೋಮೋಟಿವ್ ರೈಲು ಸಂಚಾರ ಆಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟುರೈಲುಗಳನ್ನು ಇ-ಲೋಕೋಮೋಟಿವ್ ಆಗಿ ಪರಿವರ್ತಿಸಲಾಗುವುದು ಎಂದು ನೈಋುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ತಿಳಿಸಿದೆ.