ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನದಕ್ಕೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಡಾ. ಕೆ.ವಿ.ರಾಜೇಂದ್ರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದು ಪರಿಶೀಲನೆ ನಡೆಸಿದ್ದಾರೆ.
ಮೈಸೂರು (ಮೇ.9): ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿದ್ದು, ಮತದಾನಕ್ಕೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಡಾ. ಕೆ.ವಿ.ರಾಜೇಂದ್ರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದು ಪರಿಶೀಲನೆ ನಡೆಸಿದ್ದಾರೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲ ವ್ಯಕ್ತಿಗಳಿಂದ ಮೈಸೂರು ಜಿಲ್ಲೆಯಲ್ಲಿ 2667 ಮತ ಚಾಲಾವಣೆಯಾಗಿದೆ. ಮತಗಟ್ಟೆಗಳಿಗೆ ವೀಲ್ ಚೇರ್ ಹಾಗೂ ಬೂತುಗನ್ನಡಿ ಸರಬರಾಜು ಮಾಡಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬರಲು ಅನುಕೂಲ ಆಗುವಂತೆ ವಾಹನ ಇರಲಿದೆ. ಮೇಲುಸ್ತುವಾರಿಗೆ ಹುಣಸೂರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ನೇಮಕ.
ಮತದಾನ ಸಿಬ್ಬಂದಿ:
2905 ಮತಗಟ್ಟೆಗಳಿಗೆ ಮೀಸಲು ಸೇರಿದಂತೆ 3156 ಅಧ್ಯಕ್ಷಾಧಿಕಾರಿಗಳು,
3250 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು.
6352 ಮತದಾನಾಧಿಕಾರಿಗಳು ನೇಮಕ.
ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರಬೇತಿ.
600 ಕೇಂದ್ರ ಸರ್ಕಾರದ ಅಧಿಕಾರಿ / ನೌಕರರನ್ನು micro obsever ಆಗಿ ನೇಮಕ.
ಕ್ರ.ಸಂ: ಬಸ್‍ಗಳು ಹೊರಡುವ ಸ್ಥಳ.
1: ಪುಷ್ಪ ವಿದ್ಯಾಸಂಸ್ಥೆ, ಗೋಣಿಕೊಪ್ಪ ರಸ್ತೆ, ಪಿರಿಯಾಪಟ್ಟಣ
2: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜನಗರ
3: ಸಂತ ಜೋಸೆಫರ ಶಾಲೆ, ಹುಣಸೂರು ಟೌನ್
4: ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹೆಚ್.ಡಿ.ಕೋಟೆ
5: ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ನಂಜನಗೂಡು
6: ಮಹಾರಾಣಿ ಮಹಿಳಾ ಕಲಾ/ವಾಣಿಜ್ಯ/ ವಿಜ್ಞಾನ ಕಾಲೇಜು, ಜೆ.ಎಲ್.ಬಿ.ರಸ್ತೆ, ಮೈಸೂರು
7: ಮಹಾರಾಜ ಕಾಲೇಜು, ಶತಮಾನೋತ್ಸವ ಭವನ, ಜೆ.ಎಲ್.ಬಿ ರಸ್ತೆ, ಮೈಸೂರು
8: ಬೇಡನ್ ಪೊವೆಲ್ ಪಬ್ಲಕ್ ಸ್ಕೂಲ್, ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ, ಜಿಲ್ಲಾಧಿಕಾರಿಗಳ ಕಛೇರಿ ಹಿಂಭಾಗ, ಮೈಸೂರು
9:ಜೆ.ಎಸ್.ಎಸ್. ವಿದ್ಯಾಪೀಠ ಊಟಿ ರಸ್ತೆ, ಮೈಸೂರು
10:ಜೆ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜು, ದೇವಿರಮ್ಮನಹಳ್ಳಿ, ನಂಜನಗೂಡು
11:ವಿದ್ಯೋದಯ ಶಿಕ್ಷಣ ಸಂಸ್ಥೆ, ಟಿ.ನರಸೀಪುರ.
undefined
ಅಭ್ಯರ್ಥಿಗಳ ವಿವರ.
ವಿಧಾನಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು /ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆ.
210-ಪಿರಿಯಾಪಟ್ಟಣ : 10
211-ಕೃಷ್ಣರಾಜನಗರ:08
212-ಹುಣಸೂರು:12
213-ಹೆಗ್ಗಡದೇವನಕೋಟೆ:12
214-ನಂಜನಗೂಡು:12
215-ಚಾಮುಂಡೇಶ್ವರಿ:14
216-ಕೃಷ್ಣರಾಜ:17
217-ಚಾಮರಾಜ:14
218-ನರಸಿಂಹರಾಜ:17
219-ವರುಣ:15
220-ತಿ ನರಸಿಪುರ:12
ಒಟ್ಟು 143
ವಾಹನ ಸೌಲಭ್ಯ.
ಒಟ್ಟು 481 ಕೆ.ಎಸ್.ಆರ್.ಟಿ.ಸಿ ಬಸ್‍ಗಳು, 84 ಮಾಕ್ಸಿಕ್ಯಾಬ್‍ಗಳು ಹಾಗೂ 29 ಜೀಪ್ ವ್ಯವಸ್ಥೆ.
ವಿದ್ಯುನ್ಮಾನ ಮತಯಂತ್ರಗಳು.
5620 ಬ್ಯಾಲೆಟ್ ಯೂನಿಟ್
3936 ಕಂಟ್ರೋಲ್ ಯೂನಿಟ್
4266 ವಿ.ವಿ.ಪ್ಯಾಟ್ ಬಳಕೆ.
ಒಟ್ಟು 22 ಇ.ಸಿ.ಐ.ಎಲ್ ಹೈದರಾಬಾದ್ ಇಂಜಿನಿಯರ್ ನಿಯೋಜನೆ.
ಮತದಾನದ ದಿನದಂದು ರಜೆ.
ಮೈಸೂರು ಜಿಲ್ಲೆಗೆ ಒಳಪಡುವ ಮತದಾರರಿಗೆ ಮತದಾನ ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ / ನೌಕರರುಗಳಿಗೆ ದಿನಾಂಕ: 10.05.2023 ರಂದು ವೇತನ ಸಹಿತ ರಜೆ.
ಮದ್ಯಪಾನ ನಿಷೇಧಿಸಿರುವ ದಿನ (dry day ) ಘೋಷಣೆ ಮತ್ತು ಸಂತೆ ಜಾತ್ರೆಗಳನ್ನು ಮುಂದೂಡಿರುವುದು. ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿನಿಂದ, ದಿನಾಂಕ:08.05.2023 ರ ಸಂಜೆ 6.00 ಗಂಟೆಯಿಂದ ದಿನಾಂಕ:10.05.2023 ರ ಮಧ್ಯರಾತ್ರಿಯವರೆಗೆ (ಮತದಾನ ಮುಕ್ತಾಯದ ದಿನದವರೆವಿಗೆ) ಹಾ ಗೂ ಮತ ಎಣಿಕೆಯ ದಿನದಂದು ಒಣ ದಿವಸಗಳೆಂದು ಘೋಷಣೆ.
ಮತ ನಮ್ಮೆಲ್ಲರ ಹಕ್ಕು, ತಪ್ಪದೇ ಚಲಾಯಿಸಿ.
ಮೈಕ್ರೋ ಅಬ್ಸರ್‍ವರ್, ವೆಬ್‍ಕಾಸ್ಟಿಂಗ್ ಮತ್ತು ಸಿ.ಎ.ಪಿ.ಎಫ್.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ದಿನದಂದು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‍ವರ್ ನೇಮಕಾತಿ, ವೆಬ್‍ಕಾಸ್ಟಿಂಗ್ ಸೌಲಭ್ಯ, ಸಿ.ಎ.ಪಿ.ಎಫ್ ಪಡೆಯನ್ನು ನಿಯೋಜಿಸಲಾಗುವುದು ಹಾಗೂ ಪ್ರತಿ ಮತಗಟ್ಟೆಗೂ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಅಳಿಸಲಾಗದ ಶಾಹಿ.
"ಎಡಗೈ ತೋರು ಬೆರಳಿಗೆ” ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು.
ವಿಜಯಪುರ ಜಿಲ್ಲೆಯ ಮತದಾನ ಕೇಂದ್ರಗಳ ಪೂರ್ವ ಸಿದ್ಧತೆ ಪರಿಶೀಲಿಸಿದ ಡಿಸಿ, ಎಸ್ಪಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.