ಐದು ವಿಯರ್‌ಗಳನ್ನು ಇವತ್ತು ಚಾಲನೆ ಮಾಡಿದ್ದೇನೆ. 1500 ಕ್ಯೂಸೆಕ್ ನೀರು ಎತ್ತಲಾಗುತ್ತಿದೆ. ನನಗೆ ಹೊರಗಡೆ ಪ್ರವಾಸ ಇದೆ. ಎಂಟು, ಹತ್ತು ದಿನದಲ್ಲಿ ನೀರು ಕಡಿಮೆಯಾಗುವ ಮೊದಲೇ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಒಳ್ಳೆಯ, ಶುಭ ದಿನ, ಶುಭ ಗಳಿಗೆ, ಶುಭ ಮುಹೂರ್ತ ನೋಡಿ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಚಾಲನೆ ನೀಡುವ ಕೆಲಸ ಮಾಡ್ತಿನಿ ಎಂದ ಡಿ.ಕೆ.ಶಿವಕುಮಾರ್
ಹಾಸನ(ಆ.28): ಎತ್ತಿನಹೊಳೆ ಯೋಜನೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ತಾಯಿ ಗಂಗೆಗೆ ನಮಸ್ಕಾರ ಸಲ್ಲಿಸಿ ಟ್ರಯಲ್ ರನ್ ಮಾಡಿದ್ದೇನೆ. ನಮ್ಮ ಅಧಿಕಾರಿಗಳು ನನ್ನ ಹತ್ತಿರ ಬಂದು ದಾಖಲೆ, ವಿಡಿಯೋಗಳನ್ನು ತೋರ್ಸಿದ್ರು. ನಾನೇ ಖುದ್ದಾಗಿ ಕಣ್ಣಿನಲ್ಲಿ ನೋಡಬೇಕು ಎಂದು ಬಂದಿದ್ದೇನೆ. ನಮ್ಮ ಹಿರಿಯ ಶಾಸಕರ ಜೊತೆ ಬಂದು ಟ್ರಯಲ್ ರನ್ ಮಾಡಿದ್ದೇವೆ. ಹಿಂದೆ ನಾನೇ ಬಂದು ಡೆಡ್‌ಲೈನ್ ಕೊಟ್ಟು ಹೋಗಿದ್ದೆ, ಎರಡು, ಮೂರು ತಿಂಗಳು ಲೇಟಾಗಿದೆ. ಆದರೂ ಏನೇನು ಕೆಲಸ ಇತ್ತು ನಿರ್ವಹಣೆ ಮಾಡಿದ್ದೇವೆ. ಅರಣ್ಯ ಇಲಾಖೆ ಕೆಲಸ ಉಳಿದುಕೊಂಡಿದೆ. ಅರಣ್ಯ ಇಲಾಖೆಯವರ ಜೊತೆ ನಾನು, ಮುಖ್ಯಮಂತ್ರಿಗಳು ಮಾತನಾಡುತ್ತೇವೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಂದು(ಬುಧವಾರ) ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕುಂಬರಡಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಐದು ವಿಯರ್‌ಗಳನ್ನು ಇವತ್ತು ಚಾಲನೆ ಮಾಡಿದ್ದೇನೆ. 1500 ಕ್ಯೂಸೆಕ್ ನೀರು ಎತ್ತಲಾಗುತ್ತಿದೆ. ನನಗೆ ಹೊರಗಡೆ ಪ್ರವಾಸ ಇದೆ. ಎಂಟು, ಹತ್ತು ದಿನದಲ್ಲಿ ನೀರು ಕಡಿಮೆಯಾಗುವ ಮೊದಲೇ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಒಳ್ಳೆಯ, ಶುಭ ದಿನ, ಶುಭ ಗಳಿಗೆ, ಶುಭ ಮುಹೂರ್ತ ನೋಡಿ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಚಾಲನೆ ನೀಡುವ ಕೆಲಸ ಮಾಡ್ತಿನಿ ಎಂದು ಹೇಳಿದ್ದಾರೆ.
ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದ ಹಾಸನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ!
ನಾನು ಇಲ್ಲಿ ಬಂದು ಕಣ್ಣಲ್ಲಿ ನೋಡಬೇಕಿತ್ತು. ಈ ರಾಜ್ಯಕ್ಕೆ ಬಹಳ ದೊಡ್ಡ ಯೋಜನೆ ಇದು ಇದನ್ನು ಚಾಲನೆ ಮಾಡಬೇಕಿದೆ. ನಮ್ಮ ಮಂತ್ರಿ ಸಹೋದ್ಯೋಗಿಗಳಿಗೆಲ್ಲಾ ತಿಳಿಸಿ ಇಲ್ಲಿಗೆ ಬಂದು ಪೂಜೆ ಮಾಡಿ ಉದ್ಘಾಟನೆ ಮಾಡುತ್ತೇವೆ. ಅರಣ್ಯ ಇಲಾಖೆಯಿಂದ ಕಾಮಗಾರಿಗೆ ಅಡ್ಡಿಯಾಗಿದೆ. ನಾನು ಅವರ ಜೊತೆ ಮಾತನಾಡುತ್ತೇನೆ. ಅರಣ್ಯ ಇಲಾಖೆ ಪಕ್ಕಕ್ಕೆ ಇಟ್ಟು ನಮ್ಮ ಕೆಲಸವನ್ನು ಮಾಡೇ ಮಾಡ್ತಿವಿ. ಅವರಿಗೆ ಬದಲಿ ಜಾಗ ಕೊಟ್ಟಿದ್ದೇವೆ. ನಾನು ಇದನ್ನೆಲ್ಲಾ ನೋಡಿ ನನಗೆ ಸಮಾಧಾನ ಆದ ಮೇಲೆ ಕೂತ್ಕಂಡು ಮೂಹೂರ್ತ ಫಿಕ್ಸ್ ಮಾಡ್ತೇನೆ ಎಂದು ಹೇಳಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತವಾಗಿತ್ತದೆ, ಒಂದು ರೂಪಾಯಿ ಪರಿಹಾರ ನೀಡಿಲ್ಲ ಎಂದು ಸ್ಥಳೀಯ ಶಾಸಕ ಸಿಮೆಂಟ್ ಮಂಜು ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಎಲ್ಲೆಲ್ಲಿ ಡ್ಯಾಮೇಜ್ ಆಗಿದೆ ಎಲ್ಲಾ ರೆಡಿ ಮಾಡೋಣ. ಎಲ್ಲಾ ರಿಪೇರಿ ಮಾಡುಸ್ತಿವಿ ತಲೆ ಕೆಡಿಸಿಕೊಳ್ಳಬೇಡಿ. ಅವರ ಹತ್ತಿರ ಕುಳಿತುಕೊಂಡು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.