ಕನ್ನಡತಿ ನಿಮ್ಮಿ ರೈ ಪಾರೇಖ್ ರಷ್ಯಾದ ಮಾಸ್ಕೋದಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ವಿಶ್ವ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವದಾಖಲೆಯ ಸಾಧನೆಯೊಂದಿಗೆ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಶನಿವಾರ ನಡೆದ 55 ಕೆ.ಜಿ.ಯೊಳಗಿನ ವಿಭಾಗದ ಪಂದ್ಯದಲ್ಲಿ 172.5 ಕೆ.ಜಿ. ಭಾರ ಎತ್ತಿದ ಸಾಧನೆಯೊಂದಿಗೆ ಚಿನ್ನ ಗೆದ್ದು ವಿಶ್ವದಾಖಲೆ ಬರೆದಿದ್ದಾರೆ.
ಮಂಗಳೂರು(ಡಿ.16): ಕರಾವಳಿ ಮೂಲದ ಕನ್ನಡತಿ ನಿಮ್ಮಿ ರೈ ಪಾರೇಖ್ ರಷ್ಯಾದ ಮಾಸ್ಕೋದಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ವಿಶ್ವ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಿಶ್ವದಾಖಲೆಯ ಸಾಧನೆಯೊಂದಿಗೆ ಎರಡು ಚಿನ್ನದ ಪದಕ ಗಳಿಸಿದ್ದಾರೆ.
ಶನಿವಾರ ನಡೆದ 55 ಕೆ.ಜಿ.ಯೊಳಗಿನ ವಿಭಾಗದ ಪಂದ್ಯದಲ್ಲಿ 172.5 ಕೆ.ಜಿ. ಭಾರ ಎತ್ತಿದ ಸಾಧನೆಯೊಂದಿಗೆ ಚಿನ್ನ ಗೆದ್ದು ವಿಶ್ವದಾಖಲೆ ಬರೆದಿದ್ದಾರೆ. ಭಾನುವಾರ ರಾಡೆಡ್ ಲಿಫ್ಟ್‌ನಲ್ಲಿ ಮತ್ತೆ 165 ಕೆಜಿ ಎತ್ತುವ ಸಾಧನೆಯೊಂದಿಗೆ ಮತ್ತೊಂದು ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಮೂಲತಃ ದಕ್ಷಿಣ ಕನ್ನಡದ ವೇಣೂರಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಪ್ರಸ್ತುತ ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕರಾಗಿರುವ ಸದಾಶಿವ ರೈ ಹಾಗೂ ಮೂಡುಬಿದಿರೆ ಹೊಸಬೆಟ್ಟು ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಜಯಲಕ್ಷ್ಮೇ ದಂಪತಿಯ ಸುಪುತ್ರಿ.
undefined
ದೇವರ ಹೆಸರಿನ ಬಾರ್, ವೈನ್‌ಶಾಪ್ ನಾಮಫಲಕ ತೆರವಿಗೆ ಕ್ರಮ...
ತಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿರುವುದರಿಂದ ಎಳವೆಯಿಂದಲೆ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದ ನಿಮ್ಮಿ ರೈ, ಮೂಡುಬಿದಿರೆ ಜೈನ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ, ಆಳ್ವಾಸ್‌ನಲ್ಲಿ ಬಿಕಾಂನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು. ಆಗಲೇ ಫುಟ್‌ಬಾಲ್, ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಸಾಧನೆ ಮಾಡಿದ್ದರು. ಬಳಿಕ ಎಂಬಿಎ ಪದವಿಯೊಂದಿಗೆ ಬೆಂಗಳೂರಿನ ಎಚ್‌ಎಸ್‌ಬಿಸಿಯಲ್ಲಿ ಎರಡು ವರ್ಷ ಉದ್ಯೋಗಿಯಾಗಿದ್ದರು. 2015ರಲ್ಲಿ ಛತ್ತೀಸ್‌ಗಡ ರಾಯ್‌ಪುರದ ಉದ್ಯಮಿ ಸನ್ನಿ ಪಾರೇಖ್ ಅವರನ್ನು ವಿವಾಹವಾಗಿ ಅಲ್ಲೇ ನೆಲೆಸಿದ್ದಾರೆ.
ಪತಿಯ ಪ್ರೋತ್ಸಾಹದಿಂದಾಗಿ ಕ್ರೀಡೆಯಲ್ಲಿ ಮುಂದುವರಿದ ನಿಮ್ಮಿ ರೈ ಜಿಮ್‌ನಲ್ಲಿ ಅಭ್ಯಾಸ ಮುಂದುವರಿಸಿ ವೈಟ್‌ಲಿಫ್ಟಿಂಗ್ ತರಬೇತಿಯನ್ನೂ ಪಡೆದಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ವೈಟ್ ಲಿಫ್ಟಿಂಗ್ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಿದ್ದ ನಮ್ಮಿ ಇದೀಗ ಅವಳಿ ಚಿನ್ನದ ಪದಕಗಳೊಂದಿಗೆ ದಾಖಲೆ ಬರೆದಿದ್ದಾರೆ.
ಮಂಗಳೂರು: ಮೈ ನವಿರೇಳಿಸಿದ ಮಕ್ಕಳ ಸಾಹಸ ಕ್ರೀಡೆ ಪ್ರದರ್ಶನ..!
ಕನ್ನಡಪ್ರಭದೊಂದಿಗೆ ಮಾಸ್ಕೋದಿಂದ ಸಂತಸ ಹಂಚಿಕೊಂಡ ನಿಮ್ಮಿ ‘ಈ ಸಾಧನೆಯಿಂದ ಅತೀವ ಸಂತಸವಾಗಿದೆ. ಮೂರು ತಿಂಗಳ ಅಲ್ಪಾವಧಿಯಲ್ಲಿ ಬೆಂಗಳೂರು ಮೂಲದ ಕೋಚ್ ಮೊಹಮ್ಮದ್ ಅಜ್ಮತ್ ಅವರ ತರಬೇತಿಯಿಂದ ಈ ಸಾಧನೆ ಸಾಧ್ಯವಾಗಿದೆ. ಪತಿ, ಮನೆಮಂದಿ ಹೀಗೆ ಎಲ್ಲರ ಸಹಕಾರವೂ ಇದಕ್ಕೆ ಕಾರಣ ಎಂದರು. ಉತ್ತಮ ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ. ದೇಶಕ್ಕೆ ಹೆಮ್ಮೆ ತರುವ ಸಾಧನೆ ಮಾಡಿದ ಬಗ್ಗೆ ಖುಷಿಯಿದೆ ಎಂದು ಹೇಳಿದರು.
ಚಿಕ್ಕಂದಿನಿಂದಲೇ ಆಕೆಗೆ ಕ್ರೀಡೆಯತ್ತ ಅತೀವ ಆಸಕ್ತಿಯಿತ್ತು. ಕಬಡ್ಡಿ, ಹಾಕಿಯಲ್ಲೂ ಆಕೆ ಸಾಧಿಸಿದ್ದಳು. ಕನಸು ಕಟ್ಟಿಕೊಂಡರೆ ಹಠ ಹಿಡಿದು ಗುರಿ ಮುಟ್ಟುವ ಸ್ವಭಾವ ಆಕೆಯದ್ದು. ಅವಳ ಈ ಸಾಧನೆಯಿಂದ ಹೆಮ್ಮೆಯೆನಿಸುತ್ತಿದೆ ಎಂದು ನಿಮ್ಮಿ ರೈ ತಂದೆ ಸದಾಶಿವ ರೈ ಹೇಳಿದ್ದಾರೆ.
ಫಾಸ್ಟ್‌ಟ್ಯಾಗ್ ದಟ್ಟಣೆ : ವಿಮಾನ ಹೋಗುತ್ತೆಂದು ಅಂಗಲಾಚಿದ ಮಹಿಳೆ