ಸಂಚಾರಿ ಕುರಿಗಾಹಿಗಳಿಗೆ ನ್ಯೂಸ್, ಇನ್ಮುಂದೆ ಇದ್ದ ಜಾಗಕ್ಕೆ ಬರುತ್ತೆ ಪಡಿತರ! ಸಿಎಂ ಮಹತ್ವದ ನಿರ್ಧಾರವೇನು?

Kannadaprabha News   | Kannada Prabha
Published : Nov 28, 2026, 05:34 AM IST
DK Shivakumar meets nomadic shepherds at haveri

ಸಾರಾಂಶ

DK Shivakumar meets nomadic shepherds ಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಗಿನೆಲೆಗೆ ತೆರಳುವ ಮಾರ್ಗಮಧ್ಯೆ ಸಂಚಾರಿ ಕುರಿಗಾಹಿಗಳನ್ನು ಭೇಟಿಯಾಗಿ ಅವರ ಕುಂದುಕೊರತೆ ಆಲಿಸಿದರು. ಕುರಿಗಾಹಿಗಳು ಇದ್ದಲ್ಲಿಯೇ ಪಡಿತರ ಒದಗಿಸುವ ಮತ್ತು ಕುರಿ ಕಳ್ಳತನ ತಡೆಯುವ ಭರವಸೆಯನ್ನು ಅವರು ನೀಡಿದರು.

 ಹಾವೇರಿ (ನ.28): ಕುರಿಗಳ ಹಿಂಡುಗಳೊಂದಿಗೆ ಊರೂರು ಅಲೆದಾಡುವ ಸಂಚಾರಿ ಕುರಿಗಾಹಿಗಳು ಇದ್ದಲ್ಲಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೆರಳಿ ಅವರೊಂದಿಗೆ ಕೆಲಕಾಲ ಬೆರೆತು ಕುಂದುಕೊರತೆ ಆಲಿಸಿದರು.

ಹಾವೇರಿಯಲ್ಲಿ ಕುರಿಗಾಹಿಗಳ ಸಮಸ್ಯೆ ಆಲಿಸಿದ ಸಿಎಂ

ಕಾಗಿನೆಲೆಯಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವಕ್ಕೆ ತೆರಳುವ ಮಾರ್ಗ ಮಧ್ಯೆ ಕುರುಬಗೊಂಡ ಗ್ರಾಮದ ಹೊಲವೊಂದರಲ್ಲಿ ನೆಲೆಸಿದ್ದ ಕುರಿಗಾಹಿಗಳನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿದರು. ಇನ್ನು ಮುಂದೆ ಪಡಿತರಕ್ಕಾಗಿ ಅಲೆಯುವ ಅಗತ್ಯವಿಲ್ಲ. ನೀವು ಎಲ್ಲೇ ಇದ್ದರೂ ಅಲ್ಲಿಯೇ ಪಡಿತರ ದೊರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: ನಾವು ಓದುತ್ತಿರುವ ಸಂವಿಧಾನ ಪೀಠಿಕೆ ಅಂಬೇಡ್ಕರ್ ಬರೆದಿದ್ದಾ? ಇಂದಿರಾಗಾಂಧಿ ಬರೆಸಿದ್ದಾ? ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಸಿಂಹ ವಾಗ್ದಾಳಿ

ಕುರಿಗಾಹಿಗಳಿಗೆ ಇದ್ದಲ್ಲಿಗೆ ಪಡಿತರ ವ್ಯವಸ್ಥೆ

ಈ ಸಂದರ್ಭದಲ್ಲಿ ನರಗುಂದ ಭಾಗದ ಸಂಚಾರಿ ಕುರಿಗಾಹಿಗಳು ತಮ್ಮ ಸಂಕಷ್ಟವನ್ನು ತೋಡಿಕೊಂಡರು. ಕುರಿಗಳೊಂದಿಗೆ ಜೀವನೋಪಾಯಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಸಂಚರಿಸುತ್ತೇವೆ. ಆದರೆ, ಪ್ರತಿ ತಿಂಗಳು ಪಡಿತರ ಪಡೆಯಲು ಮಾತ್ರ ಸ್ವಗ್ರಾಮಕ್ಕೆ ಮರಳಬೇಕಾದ ಅನಿವಾರ್ಯತೆ ಇದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ನಾವು ಎಲ್ಲಿದ್ದೇವೆಯೋ ಅಲ್ಲಿಯೇ ಪಡಿತರ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಹಾವಳಿ ಹೆಚ್ಚಲು ಕೇರಳದ ಕಾಕಾಗಳೇ ಕಾರಣ: ಪ್ರತಾಪ್ ಸಿಂಹ

ಕುರಿಗಾಹಿಗಳ ಅಹವಾಲಿಗೆ ಸ್ಪಂದಿಸಿದ ಸಿಎಂ, ಇದು ಕೇವಲ ನಿಮ್ಮ ಸಮಸ್ಯೆಯಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂಚಾರಿ ಕುರಿಗಾಹಿಗಳ ಸಮಸ್ಯೆಯೂ ಆಗಿದೆ. ಈ ಕುರಿತು ಮಾಜಿ ಸಿಎಂಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಆದಷ್ಟು ಬೇಗ ಸಂಚಾರಿ ಕುರಿಗಾಹಿಗಳು ತಾವು ನೆಲೆಸಿರುವ ಸ್ಥಳದಲ್ಲಿಯೇ ಪಡಿತರ ಪಡೆಯಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೇ ಕುರಿ ಕಳ್ಳತನವಾಗುತ್ತಿರುವ ಬಗ್ಗೆಯೂ ಕುರಿಗಾಹಿಗಳು ಸಿಎಂ ಗಮನಕ್ಕೆ ತಂದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಿವಕುಮಾರ್‌ ಭರವಸೆ ನೀಡಿದರು.

PREV
Read more Articles on
click me!

Recommended Stories

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5 ಭಾಷೇಲಿ ಹಾಡುತ್ತ ಕ್ರೋಷೆ ಟೊಪ್ಪಿ ತಯಾರಿಸಿ ಬಾಲಕಿ ವಿಶ್ವ ದಾಖಲೆ!
'ಕುವೆಂಪು ಮಂತ್ರ ಮಾಂಗಲ್ಯ'ದ ಮೊದಲ ಮದುವೆಗೆ 60 ವರ್ಷ: ಇದು ಹುಟ್ಟಿದ್ದು ಹೇಗೆ? ರೋಚಕ ಹಿನ್ನೆಲೆ ಇಲ್ಲಿದೆ