ನಾರಾಯಣ ಗುರು ಕೋಶವನ್ನು ತೆಗೆದು ನಿಗಮವನ್ನು ಸ್ಥಾಪಿಸುವ ಆದೇಶವನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಬಹುದಿನದ ಬೇಡಿಕೆಯಾಗಿದ್ದ ನಾರಾಯಣಗುರು ನಿಗಮ ಈಡೇರಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜೊತೆಗೆ ಶ್ರಮಿಸಿದ ಎಲ್ಲಾ ನಾಯಕರಿಗೆ ಧನ್ಯವಾದಗಳು ಎಂದು ಸಚಿವ ಕೋಟ ಶ್ರೀನಿವಾಸ್ ಹೇಳಿದ್ದಾರೆ.
ಉಡುಪಿ (ಜ.5): ನಾರಾಯಣ ಗುರು ಕೋಶವನ್ನು ತೆಗೆದು ನಿಗಮವನ್ನು ಸ್ಥಾಪಿಸುವ ಆದೇಶವನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಬಹುದಿನದ ಬೇಡಿಕೆಯಾಗಿದ್ದ ನಾರಾಯಣಗುರು ನಿಗಮ ಈಡೇರಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜೊತೆಗೆ ಶ್ರಮಿಸಿದ ಎಲ್ಲಾ ನಾಯಕರಿಗೆ ಧನ್ಯವಾದಗಳು ಎಂದು ಸಚಿವ ಕೋಟ ಶ್ರೀನಿವಾಸ್ ತಿಳಿಸಿದರು. ಅವರು ಗುರುವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಈ ನಿಗಮಕ್ಕೆ ಬಜೆಟ್ ಎಷ್ಟು ಎಂಬುದನ್ನು ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ಬಹು ಮುಖ್ಯ ಬೇಡಿಕೆ ನಾರಾಯಣ ಗುರು ನಿಗಮ ಈಡೇರಿದೆ ಎಂದು ಹೇಳಲು ನನಗೆ ಸಂತಸವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎಲ್ಲರಿಗೂ ಬೇಡಿಕೆಗಳಿಗಾಗಿ ಪಾದಯಾತ್ರೆ ಮಾಡುವ ಅವಕಾಶ ಇದೆ, ಯಾರ ಭಾವನೆಯನ್ನು ಕೂಡ ಪ್ರಶ್ನಿಸುವಂತಿಲ್ಲ.ವಿನಯಕುಮಾರ್ ಸೊರಕೆಯ ವಿರೋಧ ಮುಖ್ಯ ಆಗುವುದಿಲ್ಲ. ಸರಕಾರ ಒಂದು ಯೋಜನೆ ಮಾಡಿದರೆ ಆರ್ಥಿಕ ಇಲಾಖೆ ಮೂಲಕ ಹಣ ನಿಗದಿಸುತ್ತದೆ. ಸೊರಕೆ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿ, ಹಲವಾರು ಘೋಷಣೆಗಳನ್ನು ಮಾಡಿದವರು. ನಿಗಮ ಇಲಾಖೆಗಳಿಗೆ ಹಣಕಾಸು ವ್ಯವಸ್ಥೆ ಮಾಡದೆ ಇರಲು ಸಾಧ್ಯವೇ? ಎಂದು ಪ್ರಶ್ನಿಸಿದರು.
undefined
ನಿಗಮ ಘೋಷಣೆಯಾಗಿದೆಯೆಂದರೆ ಅನುದಾನ ಕೂಡ ನಿಗದಿಯಾಗುತ್ತದೆ. ಬಿಲ್ಲವ ಸಮಾಜದ ಪರವಾಗಿ ನಾನು ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ, ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ 208 ಜಾತಿಗಳು ಬರುತ್ತದೆ. ಎಲ್ಲರೂ ಕೂಡ ಬೇಡಿಕೆಗಳನ್ನು ಕೊಡುತ್ತಾರೆ ಎಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಿಲ್ಲವ ನಿಗಮ ಘೋಷಣೆಯಾಗಿದೆ, ಆದರೆ ಕೊಂಚ ವಿಳಂಬ ಆಗಿರಬಹುದು. ಬೇಡಿಕೆಗಳನ್ನು ನೋಡಿಕೊಂಡು ನಿಗಮ ಮಾಡಿಕೊಳ್ಳಬೇಕು ಎಂಬುದು ಚರ್ಚೆಯಲ್ಲಿರುತ್ತದೆ. ಒತ್ತಾಯಗಳು ಹೆಚ್ಚು ಆದಾಗ ಸರ್ಕಾರ ನಿಗಮ ಸ್ಥಾಪನೆ ಮಾಡಿದೆ ಎಂದರು.
ಜಾತಿ ಗಣತಿ ವರದಿ ಪುನರ್ ಪರಿಶೀಲನೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಸಿಎಂ ಅವಹೇಳನ ಸಿದ್ದರಾಮಯ್ಯಗೆ ಶೋಭೆಯಲ್ಲ:
ಸಿಎಂ ಬಸವರಾಜ್ ಬೊಮ್ಮಾಯಿ ನಾಯಿಮರಿ ಎಂದು ಹೇಳಿರುವ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ, ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕ, ಸಿಎಂ ಬೊಮ್ಮಾಯಿ ಬಗ್ಗೆ ಲಘುವಾಗಿ ಮಾತನಾಡಿದ್ದು ಸಿದ್ದರಾಮಯ್ಯಗೆ ಶೋಭೆಯಲ್ಲ. ಅವರು ಕ್ಷಮಾಪಣೆ ಕೇಳುತ್ತಾರೆ ಎಂದು ನನಗೆ ಅನಿಸುತ್ತದೆ.
Vijay Sankalp Abhiyan: ಬೂತ್ ಮಟ್ಟದಿಂದ ಗೆದ್ದು ದೇಶ ಆಳುತ್ತೇವೆ; ದಂಡೇಲಿಯಲ್ಲಿ ಗುಡುಗಿದ ಪೂಜಾರಿ
ಸಿದ್ದರಾಮಯ್ಯ ಬಹಳ ದೊಡ್ಡವರಾಗಿರುವುದರಿಂದ ಕ್ಷಮಾಪಣೆ ಕೇಳಬಹುದು, ಸಿದ್ದರಾಮಯ್ಯನವರ ಭಾಷೆ, ಅವರ ದೃಷ್ಟಿಯಲ್ಲಿ ಸರಿ ಅಂತ ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸಣ್ಣ ಮಾತನ್ನು ಆಡುವುದು ಮತ್ತೆ ಅದನ್ನೇ ಸರಿ ಎಂದು ವಾದಿಸುವುದು ಅಕ್ಷಮ್ಯ ಅಪರಾಧ. ಯಾರನ್ನಾದರೂ ಅಪಮಾನ ಮಾಡಿ ಚುನಾವಣೆಯನ್ನು ಗೆಲ್ಲುತ್ತೇವೆ ಎಂಬ ಆಲೋಚನೆ ಇದ್ದರೆ ಇದು ನಮ್ಮ ದುರಾದೃಷ್ಟ ಇದು ಸಮಾಜದ ದುರಾದೃಷ್ಟ ಎಂದರು.