ತೀರ್ಥಹಳ್ಳಿ ಬಳಿ ಮರಕ್ಕೆ ಕಾರು ಡಿಕ್ಕಿ, ಬಿಜೆಪಿ ನಾಯಕನ ತಲೆಗೆ ಗಂಭೀರ ಗಾಯ

Published : Jan 22, 2019, 09:30 PM ISTUpdated : Jan 22, 2019, 09:36 PM IST
ತೀರ್ಥಹಳ್ಳಿ ಬಳಿ ಮರಕ್ಕೆ ಕಾರು ಡಿಕ್ಕಿ, ಬಿಜೆಪಿ ನಾಯಕನ ತಲೆಗೆ ಗಂಭೀರ ಗಾಯ

ಸಾರಾಂಶ

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ರಸ್ತೆ ಅಪಘಾತವಾಗಿದ್ದು ಬಿಜೆಪಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ದತ್ತಾತ್ರಿಯವರಿಗೆ ಗಂಭೀರ ಗಾಯಗಳಾಗಿವೆ.

ಶಿವಮೊಗ್ಗ[ಜ.22]  ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ದತ್ತಾತ್ರಿಯವರ ಕಾರು ಅಪಘಾತಕ್ಕೆ ಗುರಿಯಾಗಿದೆ.  ಬ್ರಹ್ಮಾವರದಿಂದ ಶಿವಮೊಗ್ಗಕ್ಕೆ ದತ್ತಾತ್ರಿಯವರು ತಮ್ಮ ಕಾರಿನಲ್ಲಿ ಆಗಮಿಸುತ್ತಿದ್ದರು.

ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಮಂಡಗದ್ದೆಯ ಬಳಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಕಾರು ಡಿಕ್ಕಿಯಾಗಿದೆ.  ದತ್ತಾತ್ರಿಯವರನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ.  ದತ್ತಾತ್ರಿ ಅವರ ತಲೆಗೆ ಪೆಟ್ಟಾಗಿದೆ.

ಶಿವಮೊಗ್ಗ: ಬ್ರಾಹ್ಮಣರ ವಧು ತೋರಿಸಿ ಇಲ್ಲಾ ಹಣ ವಾಪಸ್ ಕೊಡಿ!

ರಸ್ತೆ ಅಪಘಾತದ ನಡೆದಾಗ ಇವರ ಜೊತೆ ಗಿದ್ದ ಬಿಜೆಪಿ ಯುವ ಮೋರ್ಚ ಕಾರ್ಯಕರ್ತ ವಿಜೇತ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮಾಳೂರು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಡಲಿ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ