ಕರ್ನಾಟಕ ಬಂದ್; ಆಸ್ತಿ, ವ್ಯಾಪಾರಿಗಳ ನಷ್ಟಕ್ಕೆ ಕರೆಕೊಟ್ಟವರೆ ಹೊಣೆ!

By Suvarna NewsFirst Published Dec 4, 2020, 11:03 PM IST
Highlights

ವಿವಿಧ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಕರೆ/ ಸಾರ್ವಜನಿಕ ಆಸ್ತಿ ನಷ್ಟವಾದರೆ ಸಂಘಟನೆಗಳೆ ಹೊಣೆ/ ಬೀದಿ ಬದಿ ವ್ಯಾಪಾರಿಗಳಿಗಾಗುವ ನಷ್ಟಕ್ಕೂ ಆಯೋಜಕರೇ ಹೊಣೆಯಾಗುತ್ತಾರೆ/ ಹೂಕೋರ್ಟ್ ಸ್ಪಷ್ಟ ಆದೇಶ

ಬೆಂಗಳೂರು(ಡಿ.  04)  ಮರಾಠಾ ಪ್ರಾಧಿಕಾರ ರಚನೆ ಮತ್ತು ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ  ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಗೆ ಕರೆಕೊಟ್ಟಿವೆ.

ಈ ಮಧ್ಯೆ ಕರ್ನಾಟಕ  ಹೈಕೋರ್ಟ್ ಮಹತ್ವದ ಮಾತೊಂದನ್ನು ಹೇಳಿದೆ.  ಬಂದ್ ನಿಂದಾಗುವ ಆರ್ಥಿಕ ನಷ್ಟಕ್ಕೆ ಆಯೋಜಕರೇ ಹೊಣೆಯಾಗುತ್ತಾರೆ ಬೀದಿ ಬದಿ ವ್ಯಾಪಾರಿಗಳಿಗಾಗುವ ನಷ್ಟಕ್ಕೂ ಆಯೋಜಕರೇ ಹೊಣೆಯಾಗುತ್ತಾರೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಬಂದ್, ಮೆರವಣಿಗೆ ವೇಳೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

ವಾಟಾಳ್ ಪಕ್ಷ ಸೇರಿ ರಾಜಕೀಯ ಪಕ್ಷಗಳಿಗೆ ನೋಟಿಸ್   ನೀಡಲಾಗಿದೆ  ಡಿ.17 ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಪಕ್ಷಗಳಿಗೆ ತಾಕೀತು ಮಾಡಲಾಗಿದೆ. ಮಾಸ್ಕ್, ಸಾಮಾಜಿಕ ಅಂತರದ ಬಗ್ಗೆ ಪೊಲೀಸರು ನಿಗಾ ವಹಿಸಬೇಕು.   ಉಲ್ಲಂಘಿಸಿದವರಿಂದ ಪೊಲೀಸರು ದಂಡ ಸಂಗ್ರಹಿಸಬೇಕು. ಸರ್ಕಾರ ಕೂಡಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಸಿಜೆ ಎ.ಎಸ್ ಒಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. ಲೆಟ್ಸ್ ಕಿಟ್ ಫೌಂಡೇಶನ್, ಸಾಯಿದತ್ತಾ ಸಲ್ಲಿಸಿದ್ದ ಬಂದ್ ಸಂಬಂಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

 

 

click me!