ಜಂಟಿ ಕಾರ್ಯಚರಣೆ ಯಶಸ್ವಿ: ಬದುಕುಳಿದ ಜಿಂಕೆ ಮರಿ..!

By Suvarna News  |  First Published Dec 4, 2020, 9:30 PM IST

 ಅಧಿಕಾರಿಗಳು ಗ್ರಾಮಸ್ಥರ ಸೇರಿ ಪಾಳು ಬಾವಿಗೆ ಬಿದ್ದಿದ್ದ ಜಿಂಕೆಯ ಜೀವ ಉಳಿಸಿದ್ದಾರೆ. ಬಲೆ ಇಳಿಸಿ ಜಿಂಕಿಯನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.


ಕುಂದಾಪುರ, (ಡಿ.04):  ಇಲ್ಲಿನ ಕಂದಾವರ ಗ್ರಾಮದ ಹೇರಿಕೇರಿ ಎಂಬಲ್ಲಿ ಪಾಳು ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಪಾರು ಮಾಡಿದ್ದಾರೆ.

ಹೇರಿಕೇರಿಯ ನಿವಾಸಿ ರಾಜೇಂದ್ರ ಎಂಬವರ ತೋಟದಲ್ಲಿರುವ ಈ ಬಾವಿಗೆ ಜಿಂಕೆ ರಾತ್ರಿ ಆಕಸ್ಮಿಕವಾಗಿ ಬಿದ್ದಿತ್ತು. ಅವರು ಅದನ್ನು ಕಂಡು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

Latest Videos

undefined

ಬಾವಿಗೆ ಬಿದ್ದಿದ್ದ ಜೋಡಿ ಹೆಬ್ಬಾವುಗಳ ರಕ್ಷಣೆ 

ಅರಣ್ಯ ಇಲಾಖೆಯವರು ಸ್ಥಳೀಯರ ಸಹಾಯದಿಂದ ಬಾವಿಗೆ ಬಲೆ ಇಳಿಸಿ ಜಿಂಕಿಯನ್ನು ಮೇಲೆತ್ತಿದ್ದಾರೆ. ಜನರನ್ನು ಕಂಡು ಗಾಬರಿಯಾಗಿದ್ದ ಜಿಂಕೆ ಮೇಲಕ್ಕೆ ಬರಿತ್ತಿದ್ದಂತೆ ಪಕ್ಕದ ಕಾಡಿಗೆ ಓಟಕಿತ್ತಿತು. ಆವರಣ ಗೋಡೆ ಇಲ್ಲದ ಬಾವಿ ತುಂಬಾ ಆಳವಾಗಿರಲಿಲ್ಲ, ಜೊತೆಗೆ ಬಾವಿಯ ಒಂದು ಮೂಲೆಯಲ್ಲಿ ಸ್ವಲ್ಪ ನೀರಿತ್ತು. 

ಆದ್ದರಿಂದ ಜಿಂಕೆಗೆ ಯಾವುದೇ ಅಪಾಯವಾಗಿರಲಿಲ್ಲ. ಕುಂದಾಪುರ ಉಪವಲಯ ಅರಣ್ಯಾಧಿಕಾರಿ ಉದಯ, ಅರಣ್ಯ ವೀಕ್ಷಕ ಸೋಮಶೇಖರ್, ಸಿಬ್ಬಂದಿ ಅಶೋಕ್ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

click me!