ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 1113394 ಜನರು ಮತದಾನ ಮಾಡಿ ಶೇ 77.21 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ವರದಿ: ವರದರಾಜ್
ದಾವಣಗೆರೆ (ಮೇ.10) : ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 1113394 ಜನರು ಮತದಾನ ಮಾಡಿ ಶೇ 77.21 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 721964 ಪುರುಷ, 720004 ಮಹಿಳೆಯರು, 118 ಇತರೆ ಸೇರಿ 1442086 ಮತದಾರರಲ್ಲಿ 564256 ಪುರುಷ, 549115 ಮಹಿಳೆಯರು ಹಾಗೂ 23 ಇತರೆ ಮತದಾರರು ಸೇರಿ ಒಟ್ಟು 1113394 ಜನರು ಮತದಾನ ಮಾಡಿದ್ದಾರೆ.
ಭಟ್ಕಳದಲ್ಲಿ ಬಿಜೆಪಿ-ಕಾಂಗ್ರೆಸ್ ಮಾತಿನ ಚಕಮಕಿ: ಲಘು ಲಾಠಿ ಪ್ರಹಾರ!
ಜಗಳೂರು ವಿಧಾನ ಸಭಾ ಕ್ಷೇತ್ರ
97690 ಪುರುಷ, 95257 ಮಹಿಳೆ, ಇತರೆ 11 ಸೇರಿ ಒಟ್ಟು 192958 ಮತದಾರರಲ್ಲಿ 79125 ಪುರುಷ, 75543 ಮಹಿಳೆ ಸೇರಿ 154695 ಜನರು ಮತದಾನ ಮಾಡಿ ಶೇ 80.17 % ಮತದಾನವಾಗಿದೆ
ಹರಿಹರ ವಿಧಾನಸಭಾ ಮತ ಕ್ಷೇತ್ರ
ಹರಿಹರ 103667 ಪುರುಷ, 103832 ಮಹಿಳೆ, 18 ಇತರೆ ಸೇರಿ ಒಟ್ಟು 207517 ಮತದಾರರಲ್ಲಿ 84079 ಪುರುಷ, 81477 ಮಹಿಳೆ, 9 ಇತರೆ ಸೇರಿ 165565 ಮತ ಚಲಾವಣೆಯಾಗಿ ಶೇ 79.78 ಮತದಾನವಾಗಿದೆ
ದಾವಣಗೆರೆ ಉತ್ತರ
ದಾವಣಗೆರೆ ಉತ್ತರ 119353 ಪುರುಷ, 121841 ಮಹಿಳೆ, 38 ಇತರೆ ಸೇರಿ ಒಟ್ಟು 241232 ಮತದಾರರಲ್ಲಿ 80966 ಪುರುಷ, 81840 ಮಹಿಳೆ, 7 ಇತರೆ ಸೇರಿ 162813 ಮತದಾನ ಮಾಡಿ ಶೇ 67.49 ಮತದಾನವಾಗಿದೆ.
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ
ದಾವಣಗೆರೆ ದಕ್ಷಿಣ 104762 ಪುರುಷ, 105873 ಮಹಿಳೆ, 33 ಇತರೆ ಸೇರಿ ಒಟ್ಟು 210668 ಮತದಾರರಲ್ಲಿ 70225 ಪುರುಷ, 69477 ಮಹಿಳೆ, 3 ಇತರೆ ಸೇರಿ 139705 ಮತದಾನವಾಗಿ ಶೇ 66.32 ಮತದಾನವಾಗಿದೆ
ಮಾಯಕೊಂಡ ವಿಧಾನ ಸಭಾ ಕ್ಷೇತ್ರ
ಮಾಯಕೊಂಡ 96491 ಪುರುಷ, 94803 ಮಹಿಳೆ, 6 ಇತರೆ ಸೇರಿ 191300 ಒಟ್ಟು ಮತದಾರರಲ್ಲಿ 81771 ಪುರುಷ, 78716 ಮಹಿಳೆ, 2 ಇತರೆ ಸೇರಿ ಒಟ್ಟು 160489 ಮತ ಚಲಾವಣೆಯಾಗಿ ಶೇ 83.89 ಮತದಾನವಾಗಿದೆ
ಚನ್ನಗಿರಿ ವಿಧಾನ ಸಭಾ ಕ್ಷೇತ್ರ
ಚನ್ನಗಿರಿ 100266 ಪುರುಷ, 99194 ಮಹಿಳೆ, 8 ಇತರೆ ಸೇರಿ ಒಟ್ಟು 199468 ರಲ್ಲಿ 83627 ಪುರುಷ, 79824 ಮಹಿಳೆ, 1 ಇತರೆ ಸೇರಿ ಒಟ್ಟು 163452 ಮತ ಚಲಾಯಿಸಿದ್ದು ಶೇ 81.94 ಮತದಾನವಾಗಿದೆ
ಕೊಡಗು: ಮತದಾರರು ಅರೆಸೇನಾಪಡೆ ಸಿಬ್ಬಂದಿ ನಡುವೆ ಘರ್ಷಣೆ-ಲಾಠಿ ಚಾರ್ಚ್
ಹೊನ್ನಾಳಿ ವಿಧಾನ ಸಭಾ ಕ್ಷೇತ್ರ
ಹೊನ್ನಾಳಿ ಕ್ಷೇತ್ರ ಪುರುಷ 99735 ಪುರುಷ, 99204 ಮಹಿಳೆ, 4 ಇತರೆ ಸೇರಿ ಒಟ್ಟು 198943 ಮತದಾರರಲ್ಲಿ 84436 ಪುರುಷ, 82238 ಮಹಿಳೆಯರು ಹಾಗೂ ಇತರೆ 1 ಸೇರಿ ಒಟ್ಟು 166675 ಮತದಾರರು ಮತ ಚಲಾಯಿಸಿದ್ದು ಶೇ 83.78 ರಷ್ಟು ಮತದಾನವಾಗಿದೆ.