ಮಂಡ್ಯ ಜಿಲ್ಲೆಯ ಸರ್ವೀಸ್ ರಸ್ತೆ, ಅಂಡರ್‌ಪಾಸ್‌ನಲ್ಲಿ ನಿಂತ ನೀರು...!

By Kannadaprabha NewsFirst Published May 10, 2023, 4:39 PM IST
Highlights

ರಾಷ್ಟ್ರೀಯ ಹೆ​ದ್ದಾರಿ ಪ್ರಾ​ಧಿ​ಕಾ​ರ ನಿರ್ಮಿಸಿ​ರುವ ಬೆಂಗ​ಳೂರು-ಮೈ​ಸೂರು ಎಕ್ಸ್‌ಪ್ರೆಸ್‌ ವೇ ಕಾ​ರಿ​ಡಾರ್‌ ಹ​ಲ​ವೆಡೆ ಅ​ವೈ​ಜ್ಞಾ​ನಿಕ ಕಾ​ಮ​ಗಾ​ರಿ​ಯಿಂದ ಗ್ರಾ​ಮ​ಸ್ಥ​ರಿಗೆ ಸಂಚ​ರಿ​ಸ​ಲಾಗದಂತಹ ಪ​ರಿ​ಸ್ಥಿ​ತಿ​ಯನ್ನು ತಂದೊ​ಡ್ಡಿದೆ.

ಮಂಡ್ಯ (ಮೇ.10): ರಾಷ್ಟ್ರೀಯ ಹೆ​ದ್ದಾರಿ ಪ್ರಾ​ಧಿ​ಕಾ​ರ ನಿರ್ಮಿಸಿ​ರುವ ಬೆಂಗ​ಳೂರು-ಮೈ​ಸೂರು ಎಕ್ಸ್‌ಪ್ರೆಸ್‌ ವೇ ಕಾ​ರಿ​ಡಾರ್‌ ಹ​ಲ​ವೆಡೆ ಅ​ವೈ​ಜ್ಞಾ​ನಿಕ ಕಾ​ಮ​ಗಾ​ರಿ​ಯಿಂದ ಗ್ರಾ​ಮ​ಸ್ಥ​ರಿಗೆ ಸಂಚ​ರಿ​ಸ​ಲಾಗದಂತಹ ಪ​ರಿ​ಸ್ಥಿ​ತಿ​ಯನ್ನು ತಂದೊ​ಡ್ಡಿದೆ. ಇ​ದಕ್ಕೆ ನಿ​ದರ್ಶನ​ವೆಂಬಂತೆ ಮಂಡ್ಯ ತಾ​ಲೂ​ಕಿನ ಇಂಡು​ವಾಳು, ಸುಂಡ​ಹಳ್ಳಿ ಸೇ​ರಿ​ದಂತೆ ಹ​ಲ​ವೆ​ಡೆ ಮಳೆ ನೀರು ನಿಂತು ಜ​ನ​ಸಂಚಾ​ರಕ್ಕೆ ತೊಂದರೆ ಉಂಟುಮಾಡಿದೆ. ರಾತ್ರಿ ಸು​ರಿದ ಧಾ​ರಾ​ಕಾರ ಮ​ಳೆ​ಯಿಂದ ಬೆಂಗ​ಳೂ​ರು-ಮೈ​ಸೂರು ಹೆ​ದ್ದಾ​ರಿ​ಯ​ಲ್ಲಿ​ರುವ ಕೆಳ ಸೇ​ತು​ವೆ ಹಾಗೂ ಇ​ಕ್ಕೆ​ಲ​ಗ​ಳಲ್ಲಿ ನಿರ್ಮಿಸಿ​ರುವ ಸರ್ವೀಸ್‌ ರ​ಸ್ತೆ​ಯಲ್ಲಿ ಮಂಡಿ​ಯುದ್ದ ನೀರು ನಿಂತಿದೆ.

ಇಂಡು​ವಾಳು ಗ್ರಾ​ಮ​ದಲ್ಲಿ ಹಾದು ಹೋ​ಗಿ​ರುವ ಹೆ​ದ್ದಾ​ರಿಯ ಸರ್ವೀಸ್‌ ರ​ಸ್ತೆ​ಯಲ್ಲಿ ನಿರ್ಮಿಸಿರುವ ಚರಂಡಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಗ್ರಾ​ಮದಿಂದ ದೊಡ್ಡ ಚ​ರಂಡಿಗೆ ನೀರು ಹ​ರಿ​ಯು​ವಂತೆ ಚರಂಡಿ ನಿರ್ಮಿಸುವ ಬ​ದಲು ತಗ್ಗು ಪ್ರ​ದೇ​ಶ​ಕ್ಕಿಂತ ಮೇ​ಲ್ಬಾ​ಗ​ದಲ್ಲಿ ಚ​ರಂಡಿ​ ನಿರ್ಮಿಸಿರುವ ಪ​ರಿ​ಣಾಮ ಮಳೆ ನೀರು ಹಾಗೂ ತ್ಯಾಜ್ಯ ನೀರು ಸರ್ವೀಸ್‌ ರ​ಸ್ತೆ​ಯಲ್ಲೇ ನಿಂತು ಕೆ​ರೆ​ಯಾಗಿ ಮಾರ್ಪಟ್ಟಿದೆ.

Latest Videos

5ರ ಹೊಸ ನಾಣ್ಯ ಹಾಕಿ ನೀರು ಪಡೆಯುವ ವ್ಯವಸ್ಥೆಯಿಂದ ಫಜೀತಿ

ಇಲ್ಲಿ ಸಂಚ​ರಿ​ಸುವ ವಾ​ಹ​ನ​ಗ​ಳಿಂದ ಅ​ಕ್ಕ ಪ​ಕ್ಕದ ಮನೆ, ಅಂಗಡಿ, ಮುಂಗ​ಟ್ಟು​ಗಳು ಬದಿ ನೀ​ರಿನ ಸಿಂಚ​ನ​ದಿಂದಾಗಿ ಗೋ​ಡೆ​ಯಲ್ಲಾ ಹಾ​ಳಾ​ಗು​ತ್ತಿದೆ. ಜೊ​ತೆಗೆ ಅಂಗ​ಡಿಗೆ ಬ​ರುವ ಗ್ರಾ​ಹ​ಕ​ರಿಗೂ ಕಿ​ರಿ​ಕಿ​ಯಾ​ಗು​ತ್ತಿದೆ. ರಾ​ಷ್ಟ್ರೀಯ ಹೆ​ದ್ದಾರಿ ಪ್ರಾ​ಧಿ​ಕಾರ ಆರು ಪ​ಥಕ್ಕೆ ನೀ​ಡಿದ ಆ​ದ್ಯ​ತೆ​ಯನ್ನು ಸರ್ವೀಸ್‌ ರಸ್ತೆ ಕಾ​ಮ​ಗಾ​ರಿಗೆ ನೀ​ಡಿಲ್ಲ. ಮೈ​ಸೂ​ರು-ಬೆಂಗ​ಳೂರು ಸಂಚಾ​ರ​ಕ್ಕಷ್ಟೇ ಪ್ರಾ​ಧಿಕಾರ ಆದ್ಯತೆ ನೀ​ಡಿದೆ. ಸ್ಥ​ಳೀಯ ಜನರು ಅ​ನು​ಭ​ವಿ​ಸು​ತ್ತಿ​ರುವ ತೊಂದ​ರೆ​ಗ​ಳ ಬಗ್ಗೆ ಗಮನವನ್ನೇ ಹರಿಸಿಲ್ಲ ಎನ್ನುವುದು ಸ್ಥ​ಳೀ​ಯ ನಿ​ವಾ​ಸಿ​ಗಳ ಆ​ರೋ​ಪ​ವಾ​ಗಿದೆ.

ಸರ್ವೀಸ್‌ ರ​ಸ್ತೆಯಲ್ಲಿ ಚ​ರಂಡಿ ನಿರ್ಮಾಣ ಅ​ವೈ​ಜ್ಞಾ​ನಿ​ಕ​ವಾ​ಗಿದೆ. ಕೆ​ಲವು ಕ​ಡೆ​ಗ​ಳಲ್ಲಿ ಕಾಮಗಾರಿ ಅ​ಪೂರ್ಣಗೊಂಡಿದೆ. ಮಳೆ ನೀ​ರು ಇ​ಳಿ​ಜಾರು ಹಾಗೂ ಗುಂಡಿ​ಯಂತಿ​ರುವ ಕೆಳ ಸೇ​ತು​ವೆ​ಯತ್ತ ನುಗ್ಗಿ ಬರು​ತ್ತಿದೆ. ಇ​ದ​ರಿಂದಾಗಿ ಇಡೀ ಸರ್ವೀಸ್‌ ರ​ಸ್ತೆ​ಗಳು ಅ​ಲ್ಲಲ್ಲಿ ನೀ​ರಿ​ನಿಂದ ಆ​ವೃ​ತ​ವಾ​ಗಿವೆ. ತಾ​ಲೂ​ಕಿ​ನ ಇಂಡು​ವಾಳು, ಸುಂಡ​ಹಳ್ಳಿ, ಸಿ​ದ್ದ​ಯ್ಯ​ನ​ಕೊ​ಪ್ಪಲು ಗೇಟ್‌ ಬಳಿ ಕಾ​ಮ​ಗಾರಿ ಅ​ಪೂರ್ಣಗೊಂಡಿದ್ದರೂ ವಾ​ಹ​ನ ಸಂಚಾ​ರಕ್ಕೆ ಮುಕ್ತ​ಗೊ​ಳಿ​ಸ​ಲಾ​ಗಿದೆ. ಆ​ದರೆ, ಸರ್ವೀಸ್‌ ರಸ್ತೆ ಅ​ವ್ಯ​ವ​ಸ್ಥೆಯ ಆ​ಗ​ರ​ವಾ​ಗಿದ್ದು, ಜನ ಓ​ಡಾ​ಡಲೂ ಆಗದೆ ತೊಂದರೆ ಅ​ನು​ಭ​ವಿ​ಸು​ತ್ತಿ​ದ್ದಾರೆ. ಪುಟ್‌​ಪಾತ್‌ ಕೂಡ ಇ​ಲ್ಲದೆ ರೈ​ತರು ಜಾ​ನು​ವಾ​ರು​ಗಳ ಜೊತೆ ಹೊ​ಲಕ್ಕೆ ತೆ​ರ​ಳಲು ಪ​ರ​ದಾ​ಡು​ವಂತಾ​ಗಿದೆ.

ಗ್ರಾ​ಮ​ಗಳ ಬಳಿ ನಿರ್ಮಿಸಿ​ರುವ ಕೆಳ ಸೇ​ತು​ವೆ​ಗ​ಳಲ್ಲೂ ಸಹ ಕಾ​ಮ​ಗಾರಿ ಪೂರ್ಣಗೊ​ಳಿ​ಸದ ಕಾ​ರಣ ಇಂಡು​ವಾಳು, ಸಿ​ದ್ದ​ಯ್ಯ​ನ​ಕೊ​ಪ್ಪಲು ಗೇಟ್‌ ಸೇ​ರಿ​ದಂತೆ ಹ​ಲ​ವೆಡೆ ಮಂಡಿ​ಯುದ್ದ ನೀರು ನಿಂತು ಈ ಮಾರ್ಗದಲ್ಲಿ ವಾ​ಹ​ನ​ಗಳು ಸಂಚ​ರಿ​ಸ​ಲಾ​ಗದ ಸ್ಥಿತಿ ನಿರ್ಮಾಣ​ವಾ​ಗಿದೆ. ಕೆ​ಲವು ಕ​ಡೆ​ಗ​ಳಲ್ಲಿ ಶಾಲಾ ಕಾ​ಲೇ​ಜು​ಗ​ಳಿಗೆ ವಿ​ದ್ಯಾರ್ಥಿಗಳು ಆಟೋ, ದ್ವಿ​ಚಕ್ರ ವಾ​ಹನ ಸ​ಣ್ಣ​ಪುಟ್ಟವಾ​ಹ​ನ​ಗ​ಳಲ್ಲಿ ಕೆಳ ಸೇ​ತು​ವೆ​ಯಲ್ಲಿ ಸಂಚ​ರಿ​ಸ​ಲಾ​ಗದ ಸ್ಥಿತಿ ನಿರ್ಮಾಣ​ವಾ​ಗಿದೆ.

ರಾಜ್ಯದಲ್ಲಿ ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ

ಮಂಡ್ಯ ಗ​ಡಿ​ಯಿಂದ ಶ್ರೀ​ರಂಗ​ಪ​ಟ್ಟಣ ತಾ​ಲೂ​ಕಿ​ನ​ವ​ರೆಗೆ ನಿರ್ಮಿಸಿ​ರುವ ಕೆಳ ಸೇ​ತು​ವೆ​ಗಳು ಬ​ಹು​ತೇಕ ಅ​ಪೂರ್ಣಗೊಂಡಿವೆ. ಕೆ​ಳ​ಗಿನ ರ​ಸ್ತೆ​ಯಲ್ಲಿ ಕಾಂಕ್ರೀಟ್‌ ಮಾ​ಡಿಲ್ಲ, ಇ​ಲ್ಲವೇ ಡಾಂಬ​ರ​ನ್ನಾ​ದರೂ ಹಾ​ಕಿಲ್ಲ. ಮಳೆ ನೀರು ಸ​ರಾ​ಗ​ವಾಗಿ ಹ​ರಿ​ಯು​ವಂತೆ ಎ​ರಡೂ ಬ​ದಿ​ಗ​ಳಲ್ಲಿ ಚ​ರಂಡಿ​ಗ​ಳನ್ನು ನಿರ್ಮಿಸಿಲ್ಲ. ಇ​ಳಿ​ಜಾರು ಪ್ರ​ದೇ​ಶ​ದಿಂದ ಬಂದ ನೀರು ಕೆಳ ಸೇ​ತು​ವೆ​ಯಲ್ಲಿ ನಿಂತು ಸಂಚಾ​ರಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಒ​ಟ್ಟಾರೆ ಬೆಂಗ​ಳೂ​ರು-ಮೈ​ಸೂರು ಹೆ​ದ್ದಾರಿ ಕೇ​ವಲ ಉ​ಳ್ಳ​ವ​ರಿ​ಗಷ್ಟೇ ಸೀ​ಮಿ​ತ​ವಾ​ಗಿದ್ದು, ಇ​ದ​ರಿಂದ ಸಾ​ಮಾನ್ಯರು, ರೈತ ವರ್ಗಕ್ಕೆ ಬಿ​ಸಿ​ತು​ಪ್ಪ​ವಾಗಿ ಪ​ರಿ​ಣ​ಮಿ​ಸಿದೆ. ಇ​ನ್ನಾ​ದರೂ ಅ​ಧಿಕಾ​ರಿ​ಗಳು ಎ​ಚ್ಚೆತ್ತು ಅ​ವೈ​ಜ್ಞಾ​ನಿಕ ಚರಂಡಿ ನಿರ್ಮಾಣ​ವನ್ನು ಸ​ರಿ​ಪ​ಡಿಸಿ ಸಂಚಾ​ರಕ್ಕೆ ಅ​ನುವು ಮಾ​ಡಿ​ಕೊ​ಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

click me!