2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆ ಸರ್ವಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಒಟ್ಟು 1111 ಮತಗಟ್ಟೆಗಳಲ್ಲಿ 243 ಮಂದಿ ಸೇವಾ ಮತದಾರರು ಸೇರಿದಂತೆ ಒಟ್ಟು 10, 41,915 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಉಡುಪಿ (ಮೇ.9) : 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆ ಸರ್ವಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಒಟ್ಟು 1111 ಮತಗಟ್ಟೆಗಳಲ್ಲಿ 243 ಮಂದಿ ಸೇವಾ ಮತದಾರರು ಸೇರಿದಂತೆ ಒಟ್ಟು 10, 41,915 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮತದಾನವು ಮೇ 10ರ ಬುಧವಾರ ಬೆಳಗ್ಗೆ 7:00ರಿಂದ ಸಂಜೆ 6:00ಗಂಟೆಯವರೆಗೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ .
undefined
ಜಿಲ್ಲೆಯಲ್ಲಿ 5,02,836 ಪುರುಷ, 5,38,823 ಮಹಿಳಾ ಮತದಾರರಲ್ಲದೇ 13 ಇತರ ಮತದಾರರೊಂದಿಗೆ ಒಟ್ಟು 243 ಸೇವಾ ಮತದಾರರು ಅಂದು ತಮ್ಮ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ .
ಬೈಂದೂರು ಕ್ಷೇತ್ರದಲ್ಲಿ 1,15,346 ಪುರುಷ, 1,20,319 ಮಹಿಳೆ, 3 ಇತರ ಹಾಗೂ 48 ಸೇವಾ ಮತದಾರರು ಸೇರಿದಂತೆ ಒಟ್ಟು 2,35,716 ಮತದಾರರಿದ್ದಾರೆ.
Udupi: ಮತ ಎಣಿಕೆ ಕಾರ್ಯ ಎಚ್ಚರಿಕೆಯಿಂದ ನಿರ್ವಹಿಸಿ: ತುಕಾರಾಂ ಹರಿಬಾವು ಮುಂಡೆ
ಕುಂದಾಪುರ ಕ್ಷೇತ್ರ(Kundapura assembly constituency)ದಲ್ಲಿ 1,00,751 ಪುರುಷ, 1,08,784 ಮಹಿಳಾ, 2 ಇತರ ಹಾಗೂ 55 ಸೇವಾ ಮತದಾರರು ಸೇರಿ ಒಟ್ಟು 2,09,592 ಮತದಾರರಿದ್ದಾರೆ.
ಉಡುಪಿ ಕ್ಷೇತ್ರ(Udupi assembly constituency)ದಲ್ಲಿ 1,04,787 ಪುರುಷ, 1,12,148 ಮಹಿಳೆ, 3 ಇತರ ಹಾಗೂ 51 ಸೇವಾ ಮತದಾರರು ಸೇರಿ ಒಟ್ಟು 2,16,989 ಮತದಾರರು, ಕಾಪು ಕ್ಷೇತ್ರದಲ್ಲಿ 90,517 ಪುರುಷ, 98,430 ಮಹಿಳೆ, 5 ಇತರೆ, 55 ಸೇವಾ ಮತದಾರರು ಸೇರಿ ಒಟ್ಟು 1,89,007 ಮತದಾರರು ಹಾಗೂ ಕಾರ್ಕಳ ಕ್ಷೇತ್ರದಲ್ಲಿ 91,435 ಪುರುಷ, 99,142 ಮಹಿಳೆ, 0 ಇತರೆ, 34 ಸೇವಾ ಮತದಾರರು ಸೇರಿ ಒಟ್ಟು 1,90,611 ಮತದಾರರಿದ್ದಾರೆ.
ಇವರಿಗೆ ಮತ ಚಲಾಯಿಸಲು ಜಿಲ್ಲೆಯಲ್ಲಿ ಒಟ್ಟು 1,111 ಮತಗಟ್ಟೆಗಳನ್ನು ತೆರೆಯಲಾಗುವುದು. ಬೈಂದೂರಿನಲ್ಲಿ 246, ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುವಿನಲ್ಲಿ 208 ಹಾಗೂ ಕಾರ್ಕಳದಲ್ಲಿ 209 ಮತಗಟ್ಟೆಗಳನ್ನು ತೆರೆಯಲಾಗಿದೆ.
ಮತದಾರರು ಬುಧವಾರ ತಮ್ಮ ಮತ ಚಲಾಯಿಸಲು ಆಗಮಿಸುವಾಗ ಮನೆ ಮನೆಗೆ ಈಗಾಗಲೇ ತಲುಪಿಸಿರುವ ಓಟರ್ ಸ್ಲಿಪ್ ಜೊತೆಗೆ ಗುರುತಿಗಾಗಿ ಮತದಾರ ಪತ್ರ (ಎಪಿಕ್ ಕಾರ್ಡ್)ನ್ನು ತರಬೇಕು. ಒಂದು ವೇಳೆ ಎಪಿಕ್ ಕಾರ್ಡ್ ಇಲ್ಲದವರು ಆಧಾರ್ ಕಾರ್ಡ್, ನರೇಗಾ ಉದ್ಯೋಗ ಗುರುತಿಸಿ ಚೀಟಿ, ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಆರೋಗ್ಯ ವಿಮಾ ಸ್ಮಾರ್ಟ್ ಕಾಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರವಿರುವ ಪಿಂಚಣಿ ಕಾರ್ಡ್, ವಿಶಿಷ್ಟ ಅಂಗವೈಕಲ್ಯ ಕಾರ್ಡ್‌ಗಳಲ್ಲಿ ಯಾವುದಾದರೂ ಒಂದನ್ನು ತರಬೇಕು .
ಈ ಸಾಲಿನ ಚುನಾವಣೆಗಾಗಿ ಮಹಿಳಾ ಮತಗಟ್ಟೆ ಅಧಿಕಾರಿಗಳಿಂದ ನಡೆಸುವ ಸಖೀ ಮತಗಟ್ಟೆ, ವಿಶೇಷ ಚೇತನ ಅಧಿಕಾರಿಗಳಿಂದ ನಡೆಸುವ ಪಿಡಬ್ಲ್ಯುಡಿ ಮತಗಟ್ಟೆ ಹಾಗೂ ಎಥಿನಿಕ್ ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಐದರಂತೆ ಒಟ್ಟು 25 ಸಖಿ ಮತಗಟ್ಟೆಗಳೊಂದಿಗೆ ಕ್ಷೇತ್ರಕ್ಕೆ ತಲಾ ಒಂದರಂತೆ ಒಟ್ಟು ಐದು ಪಿಡಬ್ಲ್ಯುಜಿ ಮತಗಟ್ಟೆ, 5 ಯುವ ಮತದಾರರ ಮತಗಟ್ಟೆ, ಐದು ಥೀಮ್ ಆಧಾರಿತ ಮತಗಟ್ಟೆ ಹಾಗೂ ಕುಂದಾಪುರ ತಾಲೂಕಿನ ಸೌಡದಲ್ಲಿ ಕೊರಗ ಸಂಸ್ಕೃತಿ ಸಾರುವ ಎಥಿನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.
ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಸಾಕು, ಮತಗಟ್ಟೆ ಹುಡುಕೋಕೆ ಇನ್ಯಾರ್ ಬೇಕು?
80+ ವಯೋಮಾನದ ಹಿರಿಯ ಮತದಾರರು ಹಾಗೂ ವಿಶೇಷ ಚೇತನ ಮತದಾರರಿಗಾಗಿ ಗಾಲಿಕುರ್ಚಿ, ಭೂತಕನ್ನಡಿ, ಬ್ರೈಲ್ ಲಿಪಿ ಮಾದರಿಯ ಮತಪತ್ರ, ಪ್ರವೇಶದಲ್ಲಿ ಆದ್ಯತೆ, ರ್ಯಾಂಪ್, ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ.