Kodagu Assembly Constituency: ಮಹಿಳಾ ಮತದಾರರಿಗಾಗಿ ಅಲಂಕೃತ ಸಖಿ ಸಿದ್ಧ, ಕಾಫಿ ಥೀಮ್ ಮತಗಟ್ಟೆ

By Suvarna News  |  First Published May 9, 2023, 10:35 PM IST

ಎರಡು ವಿಧಾನಸಭಾ ಕ್ಷೇತ್ರಗಳಿರುವ ಕೊಡಗು ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದು ಸಖೀ ಮತಗಟ್ಟೆಗಳನ್ನು ಸಿದ್ಧ ಮಾಡಲಾಗಿದೆ. ವಿವಿಧ ವಸ್ತುಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮೇ.9): ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಎರಡು ವಿಧಾನಸಭಾ ಕ್ಷೇತ್ರಗಳಿರುವ ಕೊಡಗು ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದು ಸಖೀ ಮತಗಟ್ಟೆಗಳನ್ನು ಸಿದ್ಧ ಮಾಡಲಾಗಿದೆ. ಸಖೀ ಮತಗಟ್ಟೆಗಳನ್ನು ವಿಶೇಷವಾಗಿ ಸಿದ್ಧತೆ ಮಾಡಲಾಗಿದ್ದು ಅಧಿಕಾರಿಗಳು ಈಗಾಗಲೇ ಅವುಗಳನ್ನು ಬಲೂನ್, ಕಲರ್ ಕಟಿಂಗ್ಸ್ ಪೇಪರ್ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ.  ಮಹಿಳೆಯರಿಗೆ ಪ್ರತ್ಯೇಕ ಮತಗಟ್ಟೆಗಳನ್ನು ವಿಶೇಷವಾಗಿ ನಿರ್ಮಿಸಿ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

Tap to resize

Latest Videos

undefined

ಮಡಿಕೇರಿ ನಗರದ ಎವಿ ಶಾಲೆಯಲ್ಲಿ ಸಖಿ ಮತಗಟ್ಟೆ ತೆರೆಯಲಾಗಿದ್ದು, ಮತಗಟ್ಟೆ ಮುಂಭಾಗವೇ ಅಲಂಕಾರ ಮಾಡಲಾಗಿದೆ. ಜೊತೆಗೆ ಮತಗಟ್ಟೆ ಒಳಭಾಗದಲ್ಲೂ ಬಲೂನ್, ಕಲರ್  ಪೇಪರ್ ಕಟಿಂಗ್ಸ್ ಗಳನ್ನು ಬಳಸಿ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಜೊತೆಗೆ ಕೊಡಗು ಕಾಫಿ ನಾಡಾಗಿರುವುದರಿಂದ ಕಾಫಿ ಮತಗಟ್ಟೆಯನ್ನು ಸಿದ್ಧಗೊಳಿಸಲಾಗಿದೆ. ಹಿಲ್ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ 210 ಮತ್ತು 211 ಎರಡು ಮತಗಟ್ಟೆಗಳನ್ನೂ ಕಾಫಿ ಮತಗಟ್ಟೆಗಳನ್ನಾಗಿ ಮಾಡಲಾಗಿದೆ.

ಮತಗಟ್ಟೆಯ ಗೋಡೆಗಳಿಗೆ ಕಾಫಿ ಕೊಯ್ಲು, ಕಾಫಿ ಹಣ್ಣು  ಮತ್ತು ಕಾಫಿ ಕಪ್ ಸೇರಿದಂತೆ ಕಾಫಿ ಬೆಳೆಯ ಚಿತ್ರಗಳನ್ನು ಬಿಡಿಸಿ ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗಿದೆ. ಇನ್ನು ಇದರ ಜೊತೆಗೆ ಕೊಡಗಿನಲ್ಲಿ ಬುಡಕಟ್ಟು ಸಮುದಾಯಗಳು ಇರುವುದರಿಂದ ಅರಣ್ಯ ಇಲಾಖೆಯ ಸಹಾಯದಿಂದ ಹಾಡಿಗಳಲ್ಲಿ ಎಥ್ಲಿಕ್ ಬೂತ್ಗಳನ್ನು ಮಾಡಲಾಗಿದೆ. ಹಾಡಿಯ ಬುಡಕಟ್ಟು ಸಮುದಾಯದ ಮತದಾರರಿಗೆ ಅರಿವು ಮೂಡಿಸಿ ಹೆಚ್ಚಿನ ಮತದಾನ ಮಾಡಿಸುವ ಉದ್ದೇಶದಿಂದ ಸಂಪ್ರಾದಾಯ ಮತಕೇಂದ್ರಗಳನ್ನು ಮಾಡಲಾಗಿದೆ.

ಅಲ್ಲದೆ ಯುವ ಮತದಾರರನ್ನು ಸೆಳೆಯುವುದಕ್ಕಾಗಿ ಯುವ ಮತದಾರರೇ ಹೆಚ್ಚಿರುವ ಪ್ರದೇಶಗಳಲ್ಲಿ ಯುವ ಬೂತ್ಗಳನ್ನು ಮಾಡಿ ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಕೊಡಗಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಇಲ್ಲಿಗೆ ಪ್ರವಾಸಕ್ಕೆ ಬರುವವರು ಮತದಾನ ಮಾಡಿರುವುದು ಕಡ್ಡಾಯ ಎಂಬ ನಿಯಮ ಮಾಡಲಾಗಿದೆ. ಮತದಾನ ಮಾಡದೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಂದರೆ ಅಂತಹ ಪ್ರವಾಸಿಗರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ನಿಯಮ ಮಾಡಿದೆ.

ಅಂದರೆ ಮತದಾನ ಮಾಡುವುದಕ್ಕಾಗಿ ಮೇ 10 ರಂದು ರಜೆ ಇರುವುದರಿಂದ ಅದನ್ನೇ ಬಳಸಿಕೊಂಡು ವೋಟ್ ಮಾಡುವ ಬದಲು ಪ್ರವಾಸಿ ತಾಣಗಳಲ್ಲಿ ಸುತ್ತಾಡಲು ಬರಬಹುದು. ಹೀಗಾಗಿ ಮತದಾನ ಮಾಡದೆ ಪ್ರವಾಸಿ ತಾಣಗಳಿಗೆ ಬರುವವರಿಗೆ ಪ್ರವೇಶ ನಿರಾಕರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ತಿಳಿಸಿದ್ದಾರೆ.

ಮತದಾನಕ್ಕೆ ಒಂದು ದಿನ ಇರುವಾಗಲೇ ನಾಡ ದೇವತೆಗೆ ಕಾಂಗ್ರೆಸ್ ಜೋಡೆತ್ತುಗಳ ವಿಶೇಷ

ಕುಶಾಲನಗರ ತಾಲ್ಲೂಕಿನಲ್ಲಿ ಇರುವ ಕಾವೇರಿ ನಿಸರ್ಗಧಾಮ, ಹಾರಂಗಿ ಉದ್ಯಾನವನ, ಸಾಕಾನೆ ಶಿಬಿರ ಹಾಗೂ ದುಬಾರೆ ಸಾಕಾನೆ ಶಿಬಿರ ಸೇರಿದಂತೆ ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ಪ್ರವಾಸಿ ತಾಣಗಳಿಗೆ ಬುಧವಾರ ಬರಬೇಕಾದರೆ ಕಡ್ಡಾಯವಾಗಿ ಮತದಾನ ಮಾಡಿರಬೇಕು. ಇದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ಮಾಡಲಿದ್ದಾರೆ. ಮತ್ತೊಂದೆಡೆ ಹೋಟೆಲ್ಗಳಲ್ಲೂ ಮತದಾನ ಮಾಡದೆ ಬರುವವರಿಗೆ ಪ್ರವಾಸಿಗರಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ. ಒಟ್ಟಿನಲ್ಲಿ ಮತದಾನದ ಅರಿವು ಮೂಡಿಸಿ ಅದರ ಮಹತ್ವ ಸಾರುವುದರ ಜೊತೆಗೆ ಹೆಚ್ಚಿನ ಮತದಾನ ಮಾಡುವಂತೆ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ.

ಬಿಬಿಎಂಪಿ ಆದೇಶ ರದ್ದುಗೊಳಿಸಿದ ಹೈಕೋರ್ಟ್‌, ಮತದಾನ ಮಾಡಿ ಹೋಟೆಲ್ ನಲ್ಲಿ ಫ್ರೀ ಫುಡ್ ತಿನ್ನಿ!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!