ಬಹಿರಂಗ ಮತ ಪ್ರಚಾರ ಅವಧಿ ಮುಗಿದ ಹಿನ್ನೆಲೆ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಮತದಾರರರ ಮನೆಗಳಿಗೆ ತೆರಳಿ ಹಣ ಹಂಚಿಕೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರಿಗೆ ಜಿಲ್ಲಾಧಿಕಾರಿ ದೂರು ನೀಡಿದ್ದಾರೆ.
ಕಲಬುರಗಿ (ಮೇ.9) : ಬಹಿರಂಗ ಮತ ಪ್ರಚಾರ ಅವಧಿ ಮುಗಿದ ಹಿನ್ನೆಲೆ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಮತದಾರರರ ಮನೆಗಳಿಗೆ ತೆರಳಿ ಹಣ ಹಂಚಿಕೆ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರಿಗೆ ಜಿಲ್ಲಾಧಿಕಾರಿ ದೂರು ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ ಕಲಂ 171 ಎಚ್, 321 ಹಾಗೂ 353 ಅಡಿ ಪ್ರಕರಣ ದಾಖಲಿಸಿ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಘಟನೆ ವೇಳೆಯಲ್ಲಿ ಪಲಾಯನ ಮಾಡಿರುವ ಅನಾಮಧೇಯ ವ್ಯಕ್ತಿಯ ಬಗ್ಗೆಯೂ ತನಿಖೆ ಮಾಡಲು ಸೂಚನೆ
undefined
ಘಟನೆಯ ಕುರಿತಂತೆ ಭಾರತೀಯ ದಂಡ ಸಂಹಿತೆ 171 ಎಚ್ (ಅಕ್ರಮ ಹಣ ಹಂಚಿಕೆ), 321 (ಗೊತ್ತಿದ್ದೂ ಅನ್ಯರಿಗೆ ನೋವು ತರುವ ಕೆಲಸಕ್ಕೆ ಕಾರಣವಾಗುವುದು) ಹಾಗೂ ಐಪಿಸಿ ಕಲಂ 353 (ಸರ್ಕಾರಿ ನೌಕರ ತನ್ನ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸುವುದು ಹಾಗೂ ಹಲ್ಲೆಗೆ ಮುಂದಾಗುವುದು) ಅಡಿಯಲ್ಲಿ ಅನ್ವಯಿಸುವ ಸೂಕ್ತ ಕಾನೂನಿನ ಅಡಿ ಪ್ರಕರಣ ದಾಖಲಿಸಿಕೊಂಡು ಘಟನೆ ವೇಳೆಯಲ್ಲಿ ಪಲಾಯನಗೈದ ವ್ಯಕ್ತಿಯ ಕುರಿತು ಹಾಗೂ ಕೃತ್ಯ ಪ್ರಸ್ತಾಪಿಸಿದ ಸ್ಥಳದಲ್ಲಿ ಜರುಗಿರುವ ಬಗ್ಗೆಯೂ ಸಂಪೂರ್ಣ ವಿಚಾರಣೆ ನಡೆಸುವಂತೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Karnataka election 2023: ಪಂಚ ಕ್ಷೇತ್ರಗಳ ಮತದಾನಕ್ಕೆ ಉಡುಪಿ ಸರ್ವಸನ್ನದ್ಧ!