ಬೊಮ್ಮಸಂದ್ರದಿಂದ ಹೊಸೂರುವರೆಗೆ ವಿಸ್ತರಣೆಯಾಗುತ್ತಾ ನಮ್ಮ ಮೆಟ್ರೋ?

Published : Jun 09, 2022, 09:20 PM IST
ಬೊಮ್ಮಸಂದ್ರದಿಂದ ಹೊಸೂರುವರೆಗೆ ವಿಸ್ತರಣೆಯಾಗುತ್ತಾ ನಮ್ಮ ಮೆಟ್ರೋ?

ಸಾರಾಂಶ

ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರವರೆಗೂ ನಮ್ಮ ಮೆಟ್ರೋ (Namma metro) ಫೇಸ್ 2 ಅಡಿಯಲ್ಲಿ ಕಾಮಗಾರಿ ನಡಿತಿದೆ. ಈ  ಬೊಮ್ಮಸಂದ್ರದಿಂದ ಹೊಸೂರುವರೆಗೂ ರೀಚ್ 5 ಅಡಿಯಲ್ಲಿ ಮೆಟ್ರೋ ವಿಸ್ತರಿಸುವಂತೆ ತಮಿಳುನಾಡು ಸರ್ಕಾರ ಮನವಿ ಮಾಡಿಕೊಂಡಿದೆ.

ಬೆಂಗಳೂರು (ಜೂ9); ನಮ್ಮ ಮೆಟ್ರೋ (Namma Metro) ಫೇಸ್ 2 ಅಡಿಯಲ್ಲಿ ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರವರೆಗೂ ಕಾಮಗಾರಿ ನಡಿತಿದೆ. ಈ ಕಾಮಗಾರಿ  2023 ಮಾರ್ಚ್ ತಿಂಗಳಲ್ಲಿ ಪೂರ್ಣಗೊಳಿಸಲು ನಮ್ಮ ಮೆಟ್ರೋ ಟಾರ್ಗೆಟ್ ಇಟ್ಟುಕೊಂಡಿದೆ. ಈ ಮಧ್ಯೆ ಬೊಮ್ಮಸಂದ್ರದಿಂದ ಹೊಸೂರುವರೆಗೂ ರೀಚ್ 5 ಅಡಿಯಲ್ಲಿ ಮೆಟ್ರೋ ವಿಸ್ತರಿಸುವಂತೆ ತಮಿಳುನಾಡು ಸರ್ಕಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಹೊಸೂರುವರೆಗಿನ ಮೆಟ್ರೋ ಮಾರ್ಗದ ಉದ್ದ ಅಂದಾಜು 20.5 ಕಿ.ಮೀ ಇದೆ. ಅದ್ರಲ್ಲಿ 11.7 ಕಿಮೀ ರಾಜ್ಯದ ಗಡಿಯೊಳಗೆ ಬರುತ್ತೆ. ಉಳಿದ 8.8. ಕಿ.ಮೀ.ಗಳಷ್ಟು ಮಾರ್ಗ ತಮಿಳುನಾಡು ರಾಜ್ಯದ ವ್ಯಾಪ್ತಿಯಡಿಗೆ ಬರುತ್ತದೆ. ಇನ್ನುಳಿದಂತೆ ಯೋಜನೆಗಳ ಕುರಿತು ಮೆಟ್ರೋ ರೈಲು ನೀತಿ 2017ರ ಮಾರ್ಗ ಸೂಚಿ ಪ್ರಕಾರ ತಮಿಳುನಾಡು ಸರ್ಕಾರ ಅಧ್ಯಯನ ಕೈಗೊಳ್ಳುವಂತೆ ಸದ್ಯ BMRCL ಮನವಿ ಮಾಡಿದೆ. ಜೊತೆಗೆ ನಮ್ಮ ಮೆಟ್ರೋ ಎಂ.ಡಿ ಅಂಜುಂ ಪರ್ವೇಜ್, ತಮಿಳುನಾಡು ಸರ್ಕಾರ ಬೊಮ್ಮಸಂದ್ರದಿಂದ ಹೊಸೂರು ನಡುವಿನ ಮಾರ್ಗದ ಕಾಮಗಾರಿ ಕುರಿತು ಅಧ್ಯಯನ ನಡೆಸಿ ರಿಪೋರ್ಟ್ ಕೊಡುವಂತೆ ಮನವಿ ಮಾಡಿದೆ.

Health Sector:ಆರೋಗ್ಯ ಕ್ಷೇತ್ರಕ್ಕೂ ಅದಾನಿ ಎಂಟ್ರಿ; ಮೆಟ್ರೋಪಾಲಿಸ್ ಖರೀದಿಗೆ ಅದಾನಿ, ಅಪೋಲೋ ಸಜ್ಜು

ಹೀಗಾಗಿ ಸದ್ಯ ಕೃಷ್ಣಗಿರಿ ಸಂಸದ ಎ.ಚೆಲ್ಲಕುಮಾರ್ ಮನವಿಗೆ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಚೆಲ್ಲಕುಮಾರ್ ಅನುಮೋದನೆ ನೀಡಿದೆ ಎಂದಿದ್ದಾರೆ.  ಹೊಸೂರು ರಸ್ತೆಯ ಕಾಮಗಾರಿ ಅಧ್ಯಯನದ ಬಳಿಕ ಮೆಟ್ರೋ ವಿಸ್ತರಣೆ ಬಗ್ಗೆ ಮಾತುಕತೆ ನಡೆಯಲಿದೆ. ಇನ್ನು ಪ್ರಸ್ತಾವನೆ ಇಡುತ್ತಿದ್ದಂತೆ ಸಾರ್ವಜನಿಕರಿಂದಲೂ ವಿರೋಧ ಕೇಳಿ ಬಂದಿದೆ. ಹೊಸೂರಿಗೆ ಮೆಟ್ರೋ ವಿಸ್ತರಣೆ ಮಾಡುವುದರಿಂದ  ನಮ್ಮ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಉಪಯೋಗವಿದೆ. ಹೀಗಾಗಿ ಮನವಿ ತಿರಸ್ಕರಿಸುವಂತೆ ಕೆಲವರು ಟ್ವೀಟ್ ಮಾಡಿದ್ದಾರೆ.

ಈ ರಸ್ತೆ ಎರಡೂ ರಾಜ್ಯಗಳ ವ್ಯಾಪ್ತಿಗಳಡಿ ಬರುತ್ತದೆ. ಹಾಗಾಗಿ ಮೆಟ್ರೋ ರೈಲು ಸಂಪರ್ಕ ಸಾಧ್ಯವಾಗಬೇಕಾದರೆ ಎರಡೂ ರಾಜ್ಯಗಳ ನಡುವೆ ತೀವ್ರ ಸಂಯೋಜನೆಯೊಂದಿಗೆ, ಯೋಜನೆ ವೆಚ್ಚ ಹಂಚಿಕೆಯ ಅಗತ್ಯವಿರುತ್ತದೆ. ಮೆಟ್ರೋ ರೈಲು ಸೇವೆಗಳು ಎರಡೂ ರಾಜ್ಯಗಳ ವ್ಯಾಪ್ತಿಯಡಿಗೆ ಬರುವಂತಿದ್ದರೆ ಎರಡೂ ರಾಜ್ಯಗಳು ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ.

ಕರ್ನಾಟಕದಲ್ಲಿ ಕನ್ನಡ ನಾಮಫಲಕ ಹಾಕೋದೇ ತಪ್ಪಾ? 

ನಿಮ್ಮ ಸೈಕಲ್ ಜೊತೆಗೆ ಮೆಟ್ರೋ ಪ್ರಯಾಣ ಮಾಡಲು BMRCL ಅವಕಾಶ: ಉದ್ಯಾನನಗರಿ ಬೆಂಗಳೂರಿನಲ್ಲಿ   ವಾಹನ ದಟ್ಟಣೆ ತಪ್ಪಿಸಲು ಸೈಕಲ್ ಬಳಸಿ ಎಂಬ ಜಾಗೃತಿ ಮೂಡಿಸಲಾಗ್ತಿದೆ. ಇದೀಗ ನಮ್ಮ ಮೆಟ್ರೋ ನಿಗಮ ಗ್ರೀನ್ ಸಿಟಿ ಉತ್ತೇಜಿಸಲು ಮೆಟ್ರೋ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಜೊತೆಗೆ ಬೈಸಿಕಲ್ ಕೊಂಡೊಯ್ಯಲು ಅವಕಾಶ ನೀಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದೆ. 

BMRCL ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣದ ಜೊತೆಗೆ ಮೆಟ್ರೋ ರೈಲಿನ ಕೊನೆಯ ಬೋಗಿಯಲ್ಲಿ ಮಡಚುವ ಸೈಕಲ್ (foldable bicycles) ಕೊಂಡೊಯ್ಯಬಹುದು ಎಂದು ಹೇಳಿದೆ. ಈ ಹಿಂದೆ ನಿಮ್ಮನ್ನು ಚೆಕಿಂಗ್ ಮಾಡಿ ಒಳಗೆ ಬಿಡುತ್ತಿದ್ದಂತೆ, ಮೆಟ್ರೋ ನಿಲ್ದಾಣದ ಒಳಗೆ ಬೈಸಿಕಲ್ ಪ್ಯಾಕ್ ಮಾಡಿ ತರುತ್ತಿದ್ದಂತೆ ಲಗೇಜ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತೆ. ವಿಶೇಷ ಅಂದ್ರೆ ಮೆಟ್ರೋದಲ್ಲಿ ಬೈಸಿಕಲ್ ಕೊಂಡೊಯ್ಯಲು ಯಾವುದೇ ಲಗೇಜ್ ಶುಲ್ಕವಿರದೆ, ವಿನಾಯ್ತಿ ನೀಡಲಾಗಿದೆ. 

ಬೈಸಿಕಲ್ ಗಾತ್ರ ಎಷ್ಟಿರಬೇಕು?:  ಮಡಚಬಹುದಾದ ಬೈಸಿಕಲ್ 15 ಕೆಜಿ ತೂಕ ಮೀರಿರಬಾರದು. ಅಲ್ಲದೆ ಗಾತ್ರವು 60cm×45cm×25cm ಹೊಂದಿರಬೇಕು. ಹೀಗಾಗಿ ಮಡಚುವ ಸೈಕಲನ್ನು ಮೆಟ್ರೋ ಕೊನೆಯ ಬೋಗಿಗಳ ಒಳಗೆ ಹಾನಿಯಾಗದಂತೆ ಸರಿಯಾಗಿ ಪ್ಯಾಕ್ ಮಾಡಿ ಇಡಬೇಕು. ಅಲ್ಲದೆ ಈ ಬೈಸಿಕಲ್ ಪಕ್ಕದ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗದಂತೆ ನೋಡಿಕೊಂಡು ಕೊಂಡೊಯ್ಯಬೇಕು.

ಮೆಟ್ರೋ ಪ್ರಯಾಣಿಕರು ತಾವು ಉಪಯೋಗಿಸುವ ಫೋಲ್ಡಿಂಗ್ ಬೈಸಿಕಲ್ ಅನ್ನು ಎಲ್ಲೆಂದರಲ್ಲಿ ಪ್ರಯಾಣದ ಜೊತೆಗೆ ಒಯ್ಯಬಹುದು. ಅಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮೆಟ್ರೋ ಸ್ಟೇಷನಿಂದ ತೆರಳಲು ಸೈಕಲ್ ಬಳಕೆ ಮಾಡಬಹುದು. ಈ ಮೂಲಕ ಪೊಲ್ಯುಷನ್ ಕಡಿಮೆ ಮಾಡಿ ಗ್ರೀನ್ ಸಿಟಿ ಮಾಡಲು ನಮ್ಮ ಮೆಟ್ರೊ ಮೊದಲ ಪ್ರಯತ್ನ ಮಾಡ್ತಿದೆ.
 

PREV
Read more Articles on
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು