ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.9): ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ವರ್ಸಸ್ ಪಿಎಸೈ ನಡುವಿನ ಕೋಲ್ಡ್ ವಾರ್ ಮುಗಿಯುವ ಲಕ್ಷಣ ಕಾಣ್ಣುತ್ತಿಲ್ಲ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯ ದ್ವಂದ್ವ ನಿಲುವಿನಿಂದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪಿ ಎಸ್ ಐ ಗಳಿಗೆ ಮಾನಸಿಕ ಹಿಂಸೆ ಆಗುತ್ತಿದೆ. ಒಮ್ಮೆ ಹಳಬರ ವರ್ಗಾವಣೆಯೂ ಬೇಡ ಅಂತಾರೆ, ಹೊಸಬರಿಗೂ ಲೆಟರ್ ಕೊಡ್ತಾರೆ, ಶಾಸಕ ಶಿಫಾರಸು ಪತ್ರ ಇದೀಗ ಐಜಿಗೆ ಬೆದರಿಕೆ ಪತ್ರ ಬರೆಯುವ ತನಕ ಬಂದಿದೆ.
ಶಿಫಾರಸು ಪತ್ರದ ಸಂಚಲನ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಸದಾ ಸುದ್ದಿಯಲ್ಲಿ ಇರುವ ರಾಜಕಾರಣಿ ಆಗಿದ್ದಾರೆ. ಅದರಲ್ಲೂ ಪೊಲೀಸ್ ಇಲಾಖೆಯ ವಿಚಾರದಲ್ಲಿಂತೂ ಒಂದಲ್ಲ ಒಂದ್ರಲ್ಲಿ ಸುದ್ದಿ ಆಗುತ್ತಲ್ಲೇ ಇದ್ದಾರೆ. ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಕಳೆದ ತಿಂಗಳು ಮೇ 6 ರಂದು ಸುದ್ದಿ ಯಾಗಿದ್ದು ಪಿಎಸೈ ರವೀಶ್ ಅನ್ನೋರ ಜೊತೆ ಮಾತನಾಡಿದ್ದ ದರ್ಪದ ಅಡಿಯೋ.
ಶಾಸಕ ಕುಮಾರಸ್ವಾಮಿ ಏಕವಚನದಲ್ಲಿ ಪಿಎಸೈ ರವೀಶ್ ಮೇಲೆ ಹರಿಹಾಯ್ದಿದ್ದರು. ಅಲ್ಲದೆ ಅದನ್ನು ನಾನು ಆ ರೀತಿ ಮಾತಾಡಿದ್ದು ಸರಿನೇ ಅಂತಾ ವಾದಿಸಿದ್ರು. ಯಾಕೇ ಬಂದಿದ್ದೀಯಾ ವಾಪಸ್ಸು ಹೋಗು ಅಂತಾ ಆವಾಜ್ ಬಿಡೋದಲ್ಲದೆ ಮಂಗಳೂರಿನ ಐಜಿಪಿ ವಿರುದ್ದ ವೂ ಅಕ್ರೋಶ ಹೊರಹಾಕಿದ್ರು..ಅದ್ರೆ ಅಂದಿನಿಂದಲೂ ಮಲ್ಲಂದೂರು ಠಾಣೆಯಲ್ಲಿ ಯೇ ಕರ್ತವ್ಯ ಮಾಡ್ತಾ ಇದ್ದಾರೆ..ಅದ್ರೆ ಈಗ ಮತ್ತೆ ಅದೇ ರೀತಿ ಮೂಡಿಗೆರೆ ಪಿಎಸೈ ಅಗಿ ಹೊಸಬರ ನೇಮಕವಾಗಿರೋದು ಇನ್ನಷ್ಟು ಪುಷ್ಟಿ ಕೊಟ್ಟದಂತಾಯ್ತಾ ಅನ್ನೋ ಅನುಮಾನ ಕ್ಕೆ ಕಾರಣವಾಗಿದೆ ಕುಮಾರಸ್ವಾಮಿ ಐಜಿ ಅವ್ರಿಗೆ ಬರೆದಿರೋ ಪತ್ರ ಹೇಳುತ್ತಿದೆ.
Ramanagara; ಅಧಿಕಾರಿಗಳಿಂದಲೇ ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಮೀನು ಗುಳುಂ!
ಹಳಬರ ವರ್ಗಾವಣೆಯೂ ಬೇಡ ಅಂತಾರೆ, ಹೊಸಬರಿಗೂ ಲೆಟರ್ ಕೊಡ್ತಾರೆ
ಮೂಡಿಗೆರೆ ಪೊಲೀಸ್ ಠಾಣೆಯ ಪಿಎಸೈ ರವಿ ಅನ್ನೋರ ವರ್ಗಾವಣೆ ಯಾಗಿದೆ. ಅಲ್ಲಿಗೆ ಅದರ್ಶ್ ಅನ್ನೋರನ್ನು ನಿಯೋಜಿಸಲಾಗಿದೆ. ಈ ನೇಮಕ ವಾಗ್ತಾ ಇದ್ದಂತೆ ಎಂ ಪಿ ಕುಮಾರಸ್ವಾಮಿ ಅವ್ರು ಮಂಗಳೂರು ಐಜಿಪಿ ದೇವಜ್ಯೋತಿ ರೇ ಅವ್ರಿಗೆ ಪತ್ರ ಬರೆದಿರುವುದು ವೈರಲ್ ಅಗಿದೆ. ವಾರದೊಳಗೆ ವರ್ಗಾವಣೆ ಮಾಡಿರುವ ಅದೇಶ ರದ್ದು ಪಡಿಸಂತೆ ಪತ್ರ ಮೂಲಕ ಕೇಳಿಕೊಂಡಿದ್ದಾರೆ. ಇದನ್ನು ನೊಡಿದ್ರೆ ಪಿಎಸೈ ವರ್ಸಸ್ ಎಂಎಲ್ಎ ಕೋಲ್ಡ್ ವಾರ್ ಮುಗಿಯುವ ಲಕ್ಷಣ ಕಾಣ್ಣುತ್ತಿಲ್ಲ.
ಹಳಬರ ವರ್ಗಾವಣೆಯೂ ಬೇಡ ಅಂತಾರೆ, ಹೊಸಬರಿಗೂ ಲೆಟರ್ ಕೊಡ್ತಾರೆ ಇದರಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ಪೊಲೀಸ್ ಠಾಣೆಯ ಪಿ.ಎಸ್.ಐಗಳಿಗೆ ಮಾನಸಿಕ ಹಿಂಸೆ ಆಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಶಾಸಕರ ದ್ವಂದ್ವ ನಿಲುವುವನ್ನು ಸ್ಥಳೀಯರಾದ ಹಿರೇಮಗಳೂರು ಪುಟ್ಟಸ್ವಾಮಿ ಪ್ರಶ್ನೆ ಮಾಡಿ ಶಾಸಕ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ.
ಕಳುವಾದ ಕಾರು ಇಟ್ಟುಕೊಂಡ ಮಾಲೀಕನಿಗೆ ಥಳಿಸಿದ ಪೊಲೀಸ್!
ಪಿ.ಎಸ್.ಐ ರವಿ ವರ್ಗಾವಣೆಯನ್ನ ಕ್ಯಾನ್ಸಲ್ ಮಾಡಿ ಇಲ್ಲವೇ ನಿಮ್ಮ ಕಚೇರಿ ಮುಂದೆ ಧರಣಿ, ಐಜಿಗೆ ಬೆದರಿಕೆ ಪತ್ರ
ಮೂಡಿಗೆರೆ ಪಿಎಸೈ ರವಿ ,ಮಲ್ಲಂದೂರು ಪಿಎಸೈ ವರ್ಗಾವಣೆ ರದ್ದಾಗಲಿಲ್ಲ ವಾರದೊಳಗೆ ಅಂದ್ರೆ ಮಂಗಳೂರಿನ ಐಜಿ ಕಚೇರಿ ಮುಂದೆ ಪ್ರತಿಭಟನೆ ನಡೆಸೋ ಎಚ್ಚರಿಸಿದ್ದಾರೆ. ಇದ್ರ ಜೊತೆ ಮತ್ತೊಂದು ಶಾಕಿಂಗ್ ಅದ್ರೆ ಹೊಸದಾಗಿ ಪಿಎಸೈ ಅಗಿ ಬಂದಿರೋ ಅದರ್ಶ್ ಅವ್ರಿಗೂ ಶಿಫಾರಸ್ಸು ಪತ್ರ ನೀಡಲಾಗಿದೆ. ಅದು ಬೇರಾರ್ಯಾದ್ದು ಅಲ್ಲ ಇದೇ ಎಂ ಪಿ ಕುಮಾರಸ್ವಾಮಿ ಅವರದ್ದು ಮಲ್ಲಂದೂರಿನ ರವೀಶ್ ಪಿಎಸೈ ಅವ್ರಿಗೂ ಶಿಫಾರಸ್ಸು ಪತ್ರ ನೀಡಿರೋದು ವೈರಲ್ ಅಗಿತ್ತು. ಅದ್ರೆ ನಾನು ಕೊಟ್ಟಿಲ್ಲ ಅಂತಾ ಸ್ಪಷ್ಟಿಕರಣ ನೀಡಿದ್ರು.
ಈಗ ಮತ್ತೆ ಅದೇ ರೀತಿಯ ಶಿಫಾರಸ್ಸು ಪತ್ರವೈರಲ್ ಅಗಿರೋದು ಅಂತೂ ಯಾರು ಕೊಟ್ಟಿರೋದು ಹೇಗೆ ಹೊಯ್ತು ಅನ್ನೋ ಹಲವು ಅನುಮಾನಗಳು ಮೂಡಿಗೆರೆ ಅಪ್ತರ ನಡುವೆ ಚರ್ಚೆಯಾಗುತ್ತಿದೆ. ಒಟ್ಟಾರೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಪಿಎಸೈಗಳ ಶಿಥಲ ಸಮರವಂತೂ ತಣ್ಣಾಗೋ ಲಕ್ಷಣವಂತೂ ಕಾಣ್ತಾ ಇಲ್ಲ. ವರ್ಗಾವಣೆ ಮಾಡಿರೋ ಅದೇಶ ರದ್ದು ಮಾಡೋಕೆ ವಾರಗಡುವೆನೋ ನೀಡಿದ್ದಾರೆ. ಶಿಫಾರಸ್ಸು ಪತ್ರ ಯಾರು ನೀಡಿದ್ರು. ಶಾಸಕರು ಅಥವಾ ಗೊತ್ತಿಲ್ಲದನೇ ಲೆಟರೆಡ್ ಯಾರಿಗೆ ಬೇಕಾದ್ರೂ ಸಿಗುತ್ತಾ ಅನ್ನೋ ಹಲವು ಪ್ರಶ್ನೆಗಳಿಗೆ ಎಂಪಿ ಕುಮಾರಸ್ವಾಮಿ ಅವರೇ ಉತ್ತರ ನೀಡಬೇಕು.