ಮಳೆಯ ಅಬ್ಬರಕ್ಕೆ ಮತ್ತೆ ಮೈದುಂಬಿದ ಕರಿಕೆ ಜಲಪಾತಗಳು

By Ravi Nayak  |  First Published Jul 17, 2022, 4:27 PM IST

ಕೊಡಗು ಗಡಿಯಂಚಿನ ಗ್ರಾಮವಾದ ಕರಿಕೆ; ದೇಶದಲ್ಲಿ ಜಲಪಾತಗಳ ಗ್ರಾಮವೆಂದೇ ಖ್ಯಾತಿ ಪಡೆದಿದೆ. ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣ ಕರಿಕೆ ಜಾಲಪಾತಗಳು ಇಲ್ಲಿವೆ


ಮಡಿಕೇರಿ (ಜು 17) ಮಳೆಗಾಲ ಆರಂಭವಾಯಿತೆಂದರೆ ಪ್ರವಾಸಿಗರ ಚಿತ್ತ ಕರಿಕೆಯತ್ತ. ಇದಕ್ಕೆ ಕಾರಣ ಭಾಗಮಂಡಲ - ಕರಿಕೆ ಅಂತರ್‌ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹರಿಯುತ್ತಿರುವ ಹತ್ತಾರು ಝರಿಗಳು, ಸುತ್ತಲೂ ಮನಮೋಹಕ ನೈಸರ್ಗಿಕ ಸೊಬಗು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಭಾಗದಲ್ಲಿ ಯಥೇಚ್ಛ ಮಳೆ ಸುರಿದಿದ್ದು ಎಲ್ಲೆಡೆ ಹಸಿರಿನಿಂದ ಕಂಗೊಳಿಸುತ್ತಿದೆ. ಕರಿಕೆ ಜಲಪಾತಗಳು ತುಂಬಿ ಧುಮ್ಮಿಕ್ಕುವ ದೃಶ್ಯ.ನೋಡುಗರ ಕಣ್ಮನ ಸೆಳೆಯುತ್ತದೆ.

ಈ ಬಾರಿ ವರುಣ ಕೊಂಚ ತಡವಾಗಿ ಕಾಲಿಟ್ಟರೂಅ ಇದೀಗ ದಿಢೀರ್‌ ಬಿರುಸು ಗೊಂಡ ಕಾರಣ ನೀರಿಲ್ಲದೆ ಕಳೆಗುಂದಿದ್ದ ಜಲ ಕನ್ಯೆಯರು ಮೈದುಂಬಿ ಪರಿಸರ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿವೆ. ಪ್ರಕೃತಿಯ ಹಚ್ಚ ಹಸುರಿನ ಸುಂದರ ತಾಣ ಬ್ರಹ್ಮ ಗಿರಿ ಬೆಟ್ಟದ ತಪ್ಪಲಿನ ತಲಕಾವೇರಿ ಅಭಯಾರಣ್ಯದ ವ್ಯಾಪ್ತಿಯ ಹಕ್ಕಿಕಂಡಿ, ಬಾಚಿಮಲೆ, ಮೇಲಡ್ಕದವರೆಗೆ ಸುಮಾರು ಹದಿನೈದು ಕಿ. ಮೀ. ಉದ್ದಕ್ಕೆ ಸಂಚರಿಸುವಾಗ ಇಪ್ಪತ್ತೈದಕ್ಕೂ ಅಧಿಕ ಜಲಪಾತಗಳು ಇದೀಗ ಮೈದುಂಬಿ ಪ್ರವಾಸಿಗರನ್ನು ತಮ್ಮತ್ತ ಸೆಳೆಯಿತ್ತಿವೆ. ಪ್ರವಾಸಿಗರು ಇದರ ವೀಕ್ಷಣೆಗೆ ಮಳೆಗಾಲದಲ್ಲಿ ನಿರಂತರ ಆಗಮಿಸುತ್ತಿದ್ದು ಜಲಪಾತದ ಸೌಂದರ್ಯವನ್ನು ತಮ್ಮ ಮೊಬೈಲ…, ಹಾಗೂ ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತಿದ್ದು ಜಲಪಾತದ ಸೌಂದರ್ಯವನ್ನು ಸವಿದಷ್ಟೇ ಕಾಳಜಿಯನ್ನು ಸುತ್ತಲಿನ ಪ್ರಕೃತಿ ಪರಿಸರದ ಸ್ವಚ್ಛತಾ ಕಾರ್ಯದತ್ತಲೂ ಗಮನ ಹರಿಸಬೇಕಿದೆ. ಇದನ್ನೂ ಓದಿ: KODAGU RAINS ಕೂರ್ಗ್ ನಲ್ಲಿ ದಾಖಲೆಯ 53.09ಮಿ.ಮೀ ಮಳೆ

Tap to resize

Latest Videos

ಜಲಪಾತಗಳ ಗ್ರಾಮ ಕರಿಕೆ :ಮಳೆಗಾಲ ಬಂತೆಂದರೆ ಕೊಡಗು ಜಿಲ್ಲೆ ಸ್ವರ್ಗದಂತೆ ಕಂಗೊಳಿಸುತ್ತದೆ ಎಲ್ಲೆಡೆ ಹಸಿರು, ಹೆಜ್ಜೆ ಹೆಜ್ಜೆಗೂ ಝರಿಗಳ ಸಾಲು, ಹಸಿರು ತುಂಬಿಕೊಂಡ ದಟ್ಟ ಕಾಡು, ಬೆಟ್ಟಗುಡ್ಡಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತದೆ. ಕೊಡಗಿನಲ್ಲಿ ನೋಡಬಹುದಾದ ಸುಂದರ ಮನಮೋಹಕ ಜಲಪಾತಗಳಲ್ಲಿ ಕರಿಕೆ ಜಲಪಾತವೂ ಒಂದು. ಕೊಡಗು ಗಡಿಯಂಚಿನ ಗ್ರಾಮವಾದ ಕರಿಕೆ. ಜಲಪಾತಗಳ ಗ್ರಾಮವೆಂದೇ ಖ್ಯಾತಿ ಪಡೆದಿದೆ. ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣ ಕರಿಕೆ ಜಾಲಪಾತಗಳು ಇಲ್ಲಿವೆ.. ಇದರ ವಿಶೇಷತೆಯೆಂದರೆ ಹೆದ್ದಾರಿಯಲ್ಲೇ ಸಾಲಾಗಿ ಎದುರಾಗುವ ಜಲಪಾತಗಳು.ಕರಿಕೆ ಜಲಪಾತ ದೇಶದಲ್ಲಿಯೇ ಜಲಪಾತಗಳ ಗ್ರಾಮವೆಂದೇ ಖ್ಯಾತಿ ಪಡೆದಿದೆ. ಭಾಗಮಂಗಲದ ಮೂಲಕ ಕರಿಕೆಗೆ ಪ್ರಯಾಣಿಸುವ ಮಾರ್ಗಮಧ್ಯೆದಲ್ಲೇ ಮೂವತ್ತಕ್ಕೂ ಹೆಚ್ಚು ಜಲಪಾತಗಳು ಎದುರಾಗುತ್ತವೆ. ಈ ರಮಣೀಯ, ನಿಸರ್ಗ ಬರೆದ ದೃಶ್ಯಕಾವ್ಯ ಪ್ರವಾಸಿಗರನ್ನು ನಿಬ್ಬೆರಗಾಗಿಸುತ್ತದೆ. ಕರಿಕೆ ಗ್ರಾಮ. ಇಲ್ಲಿಗೆ ಮಡಿಕೇರಿಯಿಂದ ತಲುಪುವುದು ಉತ್ತಮ. ಅಲ್ಲಿಂದ ಮೂವತ್ತು ಕಿಮೀನಷ್ಟು ದೂರದಲ್ಲಿದೆ. ಆದರೆ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ  ಪ್ರವಾಹ ಪರಿಸ್ಥಿತಿಯುಂಟಾಗಿ ಎಲ್ಲೆಡೆ ಭೂಕುಸಿತ ಹಲವೆಡೆ ರಸ್ತೆ ಸಂಚಾರ ಬಂದ್ ಆಗಿರುವುದು ಪ್ರವಾಸಿಗರಿಗೆ ನಿರಾಸೆ ಮುಡಿಸಿದೆ. ಇದನ್ನೂ ಓದಿ: Kodagu News: ಮೂರು ವರ್ಷ ಕಳೆದರೂ ನಿರಾಶ್ರಿತ ಕುಟುಂಬಕ್ಕೆ ಸಿಕ್ಕಿಲ್ಲ ಸೂರು!

ಮಂಗಳವಾರದಿಂದ ಮಳೆ ಪ್ರಮಾಣ ಇಳಿಕೆ:  ರಾಜ್ಯದಲ್ಲಿ ಮಂಗಳವಾರ (ಜು. 19) ಬಳಿಕ ಮಳೆ ಕಡಿಮೆ ಆಗಲಿದ್ದು, ಯಾವುದೇ ಎಚ್ಚರಿಕೆ ನೀಡಲಾಗಿಲ್ಲ. ಆದರೆ ಸೋಮವಾರ ಬೆಳಗ್ಗೆ 8.30ರ ತನಕ ಕರಾವಳಿ, ಮಲೆನಾಡಿನ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಮೂರು ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ಇರಲಿದೆ. ಸೋಮವಾರ ಬೆಳಗ್ಗೆ 8.30ರ ತನಕ ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಉತ್ತರ ಒಳನಾಡಿನ ಬೀದರ್‌, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ಇರಲಿದೆ. ಬಳಿಕ ಮಂಗಳವಾರ ಬೆಳಗ್ಗೆ 8.30ರ ತನಕ ಕರಾವಳಿಯ ಜಿಲ್ಲೆಗಳಿಗೆ ಮಾತ್ರ ‘ಯೆಲ್ಲೋ ಅಲರ್ಚ್‌’ ಇದೆ.ಮಂಗಳವಾರದಿಂದ ಗುರುವಾರ ಬೆಳಗ್ಗೆ ತನಕ ರಾಜ್ಯದಲ್ಲಿ ಯಾವುದೇ ಅಲರ್ಚ್‌ ಇರುವುದಿಲ್ಲ.

 ನಿನ್ನೆ ಉಡುಪಿಯಲ್ಲಿ 20 ಸೆಂ.ಮೀ. ಮಳೆ: ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿಯ ಜಡ್ಕಲ್‌ 20.5 ಸೆಂ.ಮೀ, ಆಲೂರು 19.4, ಉತ್ತರ ಕನ್ನಡದ ಹಲಗೇರಿ 17.6, ಕ್ಯಾಸಲ್‌ರಾಕ್‌ 15, ಚಿಕ್ಕಮಗಳೂರಿನ ಕೊಟ್ಟಿಗೆಹಾರ 14, ಗೇರುಸೊಪ್ಪ 13, ಉಡುಪಿಯ ಸಿದ್ದಾಪುರ ಮತ್ತು ಕುಂದಾಪುರ ಮತ್ತು ಉತ್ತರ ಕನ್ನಡದ ಹೊನ್ನಾವರದಲ್ಲಿ ತಲಾ 12 ಸೆಂ.ಮೀ. ಮಳೆಯಾಗಿದೆ.

click me!