ಅಕ್ರಮ ಮರಳು ದಂಧೆ; ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ!

By Ravi Nayak  |  First Published Jul 17, 2022, 3:15 PM IST

ಧಾರವಾಡದಲ್ಲಿ ಅಕ್ರಮ ಮರಳು ದಂಧೆಕೋರರ ಹಾವಳಿ ಮಿತಿಮೀರಿದ್ದು ಭಾರೀ ಗಾತ್ರದ ವಾಹಗಳಿಂದ ರಸ್ತೆಗಳು ಹಾಳಾಗುತ್ತಿವೆ. ಈ ದಂಧೆಯ ಹಿಂದೆ ಅಧಿಕಾರಿಗಳು ಶಾಮೀಲಾಗಿರುವ ಆರೋಪವೂ ಕೇಳಿಬಂದಿದೆ.


ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
 ಧಾರವಾಡ (ಜು.17}. : ಮೊದಲೇ ಈ ಭಾರಿ ಮಳೆರಾಯನ ಅಟ್ಟಹಾಸಕ್ಕೆ‌ ಜನರು ಬೇಸತ್ತು ಹೋಗಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರು ಬೆಳೆದಂತಹ ಫಸಲನ್ನು ಮಾರುಕಟ್ಟೆಗೆ ತರಲು ಒಳ್ಳೆಯ ರಸ್ತೆ ಇಲ್ಲ. ಗುತ್ತಿಗೆದಾರರ ಭ್ರಷ್ಟಾಚಾರ, ಕಳಪೆ ಕಾಮಗಾರಿಯಿಂದ ನಿರ್ಮಾಣವಾಗಿರುವ  ರಸ್ತೆಗಳ ಮೇಲೆ ಭಾರೀ ಗಾತ್ರದ ಅಕ್ರಮ ಮರಳು ದಂಧೆಯ ಟಿಪ್ಪರ್‌ಗಳು ಓಡಾಟದಿಂದ ಇರುವ ರಸ್ತೆಯೂ ಹಾಳಾಗಿದೆ.  

ಧಾರವಾಡ(Dharwad) ನಗರಕ್ಕೆ ನವಲಗುಂದ (Navalgunda), ಸವದತ್ತಿ(Savadatti), ಕಾರವಾರ(Karawar), ಗದಗ (Gadag) ಜಿಲ್ಲೆಗಳಿಂದ ಸಾಕಷ್ಟು ಮರಳು ಬಂದು ಬಿಳುತ್ತೆ..ಮರಳು ಬಂದು ಬೀಳಬೇಕಾದರೆ ಸರಕಾರದ ನಿಯಮಗಳ ಅನುಸಾರವಾಗಿ ಮರಳು ಸಾಗಾಟ ಮಾಡಬೇಕಿದೆ..ಆದರೆ ಧಾರವಾಡದ ಸುತ್ತಲೂ ಇರುವ ಮರಳು ಅಡ್ಡೆಗಳಿಗೆ ಸಾಕಷ್ಡು ಮರಳು ಅಕ್ರಮವಾಗಿ ಬಂದು ಬೀಳುತ್ತಿದೆ.ಯಾರು ಅಕ್ರಮ ಮರಳಿ (Illegal Sand Trade)ನ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ ಅನ್ನೋ ಹಾಗೆ ಮಾಬ್ ಕ್ರಿಯೇಟ್ ಮಾಡಿದ್ದಾರೆ ಮರಳು ದಂಧೆಕೋರರು..

Tap to resize

Latest Videos

ಧಾರವಾಡದ ಮರುಘಾಮಠದ ಹೊರವಲಯದ ಸವದತ್ತಿ ರಸ್ತೆಗಳಲ್ಲಿ ಮತ್ತು ನವಲಗುಂದ ರಸ್ತೆಯುದ್ದಕ್ಕೆ ಮರಳು ತುಂಬಿದ ಲಾರಿಗಳು ಸಾಲು ಸಾಲು ಗಟ್ಟಲೆ ನಿಂತಿರುತ್ತವೆ. ಆದರೆ ಯಾವ ಲಾರಿ ಚಾಲಕರು 12 ಟನ್ ಇರುವ ಮರಳನ್ನು ತರುವುದಿಲ್ಲ; ಎಲ್ಲವೂ 20 ಟನ್ ಮೇಲೆ ಇರುತ್ತೆ. ಇದನ್ನು ಯಾವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಆರ್ ಟಿ ಓ ಅಧಿಕಾರಿಗಳು ಸ್ಥಳ ಪರಿಶಿಲನೆ ಮಾಡುತ್ತಿಲ್ಲ. ಇಲ್ಲಿ ಮರಳು ಧಂದೆ ಕೋರರಿಗೆ ಯಾರೂ ಪ್ರಶ್ನೆ ಮಾಡದಂತಾಗಿದೆ. ಇದನ್ನೂ ಓದಿ:ವಾರದಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಸಮಸ್ಯೆ ಪರಿಹಾರ: ಸಿಎಂ ಬೊಮ್ಮಾಯಿ

ಅಕ್ರಮ ಮರಳು ದಂಧೆಗೆ ಅಧಿಕಾರಿಗಳೇ ಸಾಥ್!

ಅಕ್ರಮ ಮರಳು ಧಂದೆಕೋರರು ಮಾಧ್ಯಮಗಳ ಬಗ್ಗೆ ಮಾತನಾಡಿದ ಆಡಿಯೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಡಿಯೋದಲ್ಲಿ ನೋಡಿ ಧಾರವಾಡಕ್ಕೆ ಬರುವ ಎಲ್ಲ ಲಾರಿ ಚಾಲಕರು 12 ಟನ್ ಒಳಗೆ ಮರಳನ್ನು ಲೋಡ್ ಮಾಡಿಕೊಂಡು ಬರುವಂತೆ ಮತ್ತು ಹೆಚ್ಚು ತಂದರೆ ಮಾಧ್ಯಮದವರು ಲಾರಿಯನ್ನ ಹಿಡಿದರೆ ಅದಕ್ಕೆ ನೀವೇ ಹೊಣೆಗಾರರು ಅಧಿಕಾರಿಗಳು  ಹೇಳಿದ್ದಾರೆ. ಇದನ್ನೂ ಓದಿ:ಏರೋಸ್ಪೆಸ್‌ ಇಂಡಸ್ಟ್ರಿಗೆ ಪ್ರೋತ್ಸಾಹ: ಮುರುಗೇಶ್‌ ನಿರಾಣಿ

ಇದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ ಅದು ಆರ್  ಟಿ‌ ಓ ಅವರ ಕೆಲಸ ನಮ್ಮ‌ ಕೆಲಸ ಅಲ್ಲ ಎಂದು ಜಾರಿಕ್ಕೊಳ್ಳುತ್ತಾರೆ..ನೀವು ಆರ್ ಟಿ ಓ ಅಧಿಕಾರಿಗಳಿಗೆ ಬೇಟಿಯಾಗಿ ಅವರ ಗಮನಕ್ಕೆ‌ ತನ್ನಿ ಎಂದು ಹಾರಿಕೆ‌ ಉತ್ತರ ಕೊಡ್ತಾರೆ. ನೀವು ನಮ್ಮ‌ ಜೊತೆಗೆ ಬನ್ನಿ ಲಾರಿ ಹಿಡಿಯೋಣ ಎಂದು ಸಬೂಬು ಕೊಟ್ಟು ಸುಮ್ಮನಾಗಿದ್ದಾರೆ.  ಹೆಚ್ಚಿನ ಲೋಡ್ ಮರಳು ಸಾಗಾಟ ಮಾಡುವ ಲಾರಿಗಳಿಂದ ಎಲ್ಲ ಪ್ರಮುಖ ರಸ್ತೆಗಳು ಹಾಳಾಗಿವೆ. ಇನ್ನು ಒಂದೇ ಪಾಸಿನಲ್ಲಿ ಮೂರು‌ಮೂರು ಲಾರಿಗಳನ್ನ ದಾಟಿಸುತ್ತಿದ್ದಾರೆ ಅನ್ನೋ ಗಂಬೀರ ಆರೋಪಗಳು ಕೇಳಿಬಂದಿವೆ. .ಆದರೆ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಕ್ರಮ ಮರಳು ದಂಧೆ ಕೋರರ ಬೆನ್ನಿಗೆ ನಿಂತಿದೆ ಎಂಬ ಆರೋಪವೂ  ಧಾರವಾಡದಲ್ಲಿ ಕೇಳಿ ಬರುತ್ತಿದೆ..

ಅಕ್ರಮ ಮರಳು ದಂದೆಕೋರರ ಹಿಂದೆ ಯಾರು ಯಾರು ಇದಾರೆ,  ಅವರ ಲೈಸನ್ಸ್, ಮತ್ತು ಅವರ ಪಾಸ್‌ಗಳನ್ನು ಪರಿಶಿಲನೆ ನಡೆಸಿ ಅಕ್ರಮ ಮರಳು ದಂಧೆಕೋರರಿಗೆ ಬ್ರೇಕ್ ಹಾಕಬೇಕಾಗಿದೆ. ಇದರ ಜತೆಗೆ  ರಸ್ತೆಗಳ ಗುಣಮಟ್ಟಇರುವಂತೆ ಇಲಾಖೆ ಕೆಲಸ ಮಾಡಬೇಕು, ಎಂದು ಸಾರ್ವಜನಿಕರು ಮಾತನಾಡಿಕ್ಕೊಳ್ಳುತ್ತಿದ್ದಾರೆ.. ಕೇವಲ ಪೋಲಿಸ್ ಇಲಾಖೆಯ ಕುಮ್ಮಕ್ಕಿನಿಂದ ಅಕ್ರಮ ದಂಧೆಕೋರರು ರಾಜಾರೋಷವಾಗಿ ಮಾತನಾಡುತ್ತಿದ್ದಾರೆ.

ಒಟ್ಟಿನಲ್ಲಿ ಈ ವರದಿಯನ್ನಾದರೂ ನೋಡಿ ಸಂಬಂಧಪಟ್ಟ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಆರ್ ಟಿ ಓ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ ಕಾದು ನೋಡೋಣ.

click me!