ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಕರವೇ ಪ್ರತಿಭಟನೆ| ಬಾಗಲಕೋಟೆ, ವಿಜಯಪುರದಲ್ಲಿ ಯುತ್ನಾಳ್ ಹೇಳಿಕೆ ಖಂಡಿಸಿ ಪ್ರತಿಭಟನೆ| ಯತ್ನಾಳ್ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಕರವೇ ಕಾರ್ಯಕರ್ತರು| ನಕಲಿ ಕನ್ನಡಪರ ಸಂಘಟನೆಗಳ ಎಂದು ಹೇಳಿಕೆ ನೀಡಿದ್ದ ಯತ್ನಾಳ್|
ಬಾಗಲಕೋಟೆ/ವಿಜಯಪುರ(ನ.21): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡಪರ ಸಂಘಟನೆಗಳಿಗೆ ಅಪಮಾನ ಹೇಳಿಕೆಯನ್ನ ಖಂಡಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬಾಗಲಕೋಟೆ ಹಾಗೂ ವಿಜಯಪುರ ನಗರದಲ್ಲಿ ಇಂದು(ಶನಿವಾರ) ಪ್ರತಿಭಟನೆ ನಡೆಸಿದ್ದಾರೆ.
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನದ ಎದುರು ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ನೇತೃತ್ವದಲ್ಲಿ ಕರವೇ (ನಾರಾಯಣಗೌಡ ಬಣ)ದಿಂದ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ, ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದು, ಪ್ರತಿಕೃತಿ ದಹಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಕರ್ನಾಟಕ ಬಂದ್ : ವಾಟಾಳ್‌ಗೆ ಯತ್ನಾಳ್ ಪಂಚ್
ಇನ್ನು ವಿಜಯಪುರ ನಗರದಲ್ಲಿಯೂ ಕೂಡ ನಾರಯಣಗೌಡ ಬಣದ ಕರವೇ ಸಂಘಟನಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ಭಾಗಿಯಾಗಿದ್ದರು. ನಗರದ ಬಸನಗೌಡ ಪಾಟೀಲ ಯತ್ನಾಳ್ ಸರಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಯತ್ನಾಳ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಕರವೇ ಕಾರ್ಯಕರ್ತರು ಆಕ್ರೋಶವನ್ನ ಹೊರಹಾಕಿದ್ದಾರೆ.