ತುಮಕೂರು: ಕಾವೇರಿಗಾಗಿ ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕರವೇ

By Girish Goudar  |  First Published Oct 5, 2023, 9:05 PM IST

17 ಜನ ಕರ್ನಾಟಕ ರಕ್ಷಣಾ ವೇದಿಯ ಕಾರ್ಯಕರ್ತರಿಂದ ರಕ್ತದ ಮೂಲಕ ಪತ್ರ ಬರೆಯಲಾಗಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನ ಕರವೇ ಕಾರ್ಯಕರ್ತರಿಂದ ವಿನೂತನ ಚಳುವಳಿ ಆರಂಭವಾಗಿದೆ.


ತುಮಕೂರು(ಅ.05):  ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮಧ್ಯೆ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ರಕ್ಷಣಾ ವೇದಿಕೆ ಕಾರ್ಯಕರ್ತರು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಮೂಲಕ ತುಮಕೂರು ಜಿಲ್ಲೆಯಲ್ಲಿ  ಕಾವೇರಿ ನದಿ ನೀರು ಹಂಚಿಕೆಯಲ್ಲಿ ತೀವ್ರ ಅನ್ಯಾಯವಾಗುತ್ತಿದೆ ಇದನ್ನು ಸರಿಪಡಿಸುವ ನಿಟ್ಟನಲ್ಲಿ ಕೇಂದ್ರ ಸರ್ಕಾರ ಮುಂದಾಳತ್ವ ವಹಿಸಿ ಇದನ್ನು ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿದರು.

Tap to resize

Latest Videos

ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಮುಂದುವರೆದ ಪ್ರತಿಭಟನೆ

17 ಜನ ಕರ್ನಾಟಕ ರಕ್ಷಣಾ ವೇದಿಯ ಕಾರ್ಯಕರ್ತರಿಂದ ರಕ್ತದ ಮೂಲಕ ಪತ್ರ ಬರೆಯಲಾಗಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನ ಕರವೇ ಕಾರ್ಯಕರ್ತರಿಂದ ವಿನೂತನ ಚಳುವಳಿ ಆರಂಭವಾಗಿದೆ.
ಕಾವೇರಿ ನಮ್ಮದು, ಕಾವೇರಿ ಹೋರಾಟಕ್ಕೆ ಜಯಸಿಗಲಿ ಎಂದು ರಕ್ತದಿಂದ ಪ್ರಧಾನಿ‌ಗೆ ರಕ್ಷಣಾ ವೇದಿಕೆ ಕಾರ್ಯಕರ್ತರು ಪತ್ರ ಬರೆದಿದ್ದಾರೆ. 

click me!