ರೈತರ ಹಿತಕ್ಕಾಗಿ ದೀರ್ಘದಂಡ ನಮಸ್ಕಾರ ಹಾಕುತ್ತಲೇ ಅಂಜನಾದ್ರಿ ಬೆಟ್ಟ ಏರಿದ ಸ್ವಾಮೀಜಿ

By Suvarna NewsFirst Published Jun 25, 2022, 6:11 PM IST
Highlights

* ದೀರ್ಘದಂಡ ನಮಸ್ಕಾರ ಹಾಕುತ್ತಾ ಅಂಜನಾದ್ರಿ ಬೆಟ್ಟ ಏರಿದ ಸ್ವಾಮೀಜಿ
 * 575 ಮೆಟ್ಟಿಲುಗಳನ್ನ ದೀರ್ಘದಂಡ ನಮಸ್ಕಾರ ಹಾಕುತ್ತಲೇ ಏರಿದ ಅರಮಯ್ಯ ಸ್ವಾಮೀಜಿ
* ಕಾರಟಗಿ ತಾಲೂಕಿನ‌ ಮೈಲಾಪುರ ಗ್ರಾಮದ ಅಮರಯ್ಯಸ್ವಾಮಿ

ಕೊಪ್ಪಳ, (ಜೂನ್.25): ರಾಮಾಯಣದ ಜೊತೆಗೆ ಈ ಬೆಟ್ಟದ ಐತಿಹ್ಯ ತೆರೆದುಕೊಳ್ಳುತ್ತದೆ. ಸುಗ್ರೀವನ ವಾನರ ಸಾಮಾಜ್ರ್ಯ ಇದೇ ಬೆಟ್ಟದಲ್ಲಿತ್ತು. ಇಲ್ಲೇ ಆಂಜನೇಯನೆಂಬ ಮಹಾನ್ ಶಕ್ತಿಶಾಲಿ ಹುಟ್ಟಿ ಬೆಳೆದ. ಆತನ ಬಗೆಗಿರುವ ಹಲವಾರು ಕತೆಗಳೂ ಇಲ್ಲೇ ಹುಟ್ಟಿಕೊಂಡವು. ಈ ಬೆಟ್ಟ ಈಗ ಪ್ರಸಿದ್ಧಿ ಪಡೆದುಕೊಂಡಿದೆ.

ನೀವು ಆ ಸ್ಥಳಕ್ಕೆ ಹೋಗಬೇಕೆಂದರೆ 575 ಮೆಟ್ಟಿಲುಗಳನ್ನು ಹತ್ತಿಕೊಂಡು ಕಷ್ಟಪಟ್ಟು ಬೆಟ್ಟದ ಮೇಲೆ ಹೋಗಬೇಕು.‌ ಇಂತದ್ದರಲ್ಲಿ ಆ ಬೆಟ್ಟವನ್ನು ಸ್ವಾಮೀಜಿಯೊಬ್ಬರು ದೀರ್ಘದಂಡ ನಮಸ್ಕಾರ ಹಾಕುತ್ತಾ ಏರಿದ್ದಾರೆ.ಅಷ್ಟಕ್ಕೂ ಯಾರು ಆ ಸ್ವಾಮೀಜಿ? ಅವರು ಹತ್ತಿದ ಬೆಟ್ಟ ಯಾವುದು? ಯಾವ ಕಾರಣಕ್ಕೆ ಬೆಟ್ಟ ಏರಿದರು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಅಂಜನಾದ್ರಿ ಯಾರಿಗೆ ತಾನೇ ಗೋತ್ತಿಲ್ಲ ಹೇಳಿ.‌ಇತ್ತೀಚಿನ‌ ದಿನಗಳಲ್ಲಿ ಅಂಜನಾದ್ರಿ ಪರ್ವತ ಸಾಕಷ್ಟು ಪ್ರಸಿದ್ಧಿಯನ್ನು ಪಡೆದ ಕ್ಷೇತ್ರವಾಗಿದೆ. ಆಂಜನೇಯ ಅಂಜನಾದ್ರಿ ಬೆಟ್ಟದಲ್ಲಿ ಜನಿಸಿದ್ದಾನೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ.‌ಜೊತೆಗೆ ಇದಕ್ಕೆ ಪೂರಕವಾದ ಸಾಕ್ಷ್ಯಗಳು ಸಹ ಇಂತಹ ಪುರಾಣಪ್ರಸಿದ್ಧ ಅಂಜನಾದ್ರಿ ಪರ್ವತದ 575 ಮೆಟ್ಟಿಲುಗಳನ್ನು ದೀರ್ಘದಂಡ ನಮಸ್ಕಾರ ಹಾಕುವ ಸ್ವಾಮೀಜಿಯೊಬ್ಬರು ಬೆಟ್ಟವನ್ನು ಏರಿದ್ದಾರೆ.

ಹಂಪಿಯ ಅಂಜನಾದ್ರಿಯೇ ಆಂಜನೇಯ ಜನ್ಮಸ್ಥಳ; ಹನುಮನ ಜನ್ಮಸ್ಥಳ ಮತ್ತು ವಾದಗಳು!

 ದೀರ್ಘದಂಡ ನಮಸ್ಕಾರ ಹಾಕುತ್ತಾ ಬೆಟ್ಟ ಏರಿದ ಸ್ವಾಮೀಜಿ

ಕೊಪ್ಪಳ‌ ಜಿಲ್ಲೆಯ ಕಾರಟಗಿ ಅಂದರೆ ನಮಗೆ ತಟ್ಟನೆ ನೆನಪಾಗುವುದು ರೈಸ್ ಮಿಲ್ ಗಳು. ಇಡೀ ಕರ್ನಾಟಕದಲ್ಲಿಯೇ ಅತಿ ಹೆಚ್ಚು ರೈಸ್ ಮಿಲ್ ಗಳು ಇರುವುದು ಕಾರಟಗಿಯಲ್ಲಿ. ಇಂತಹ ಕಾರಟಗಿ ತಾಲೂಕಿನ‌ ಮೈಲಾಪುರ ಗ್ರಾಮದ ಅಮರಯ್ಯಸ್ವಾಮಿ ಹಿರೇಮಠ ಎನ್ನುವ ಸ್ವಾಮೀಜಿಗಳು ಅಂಜನಾದ್ರಿ ಬೆಟ್ಟವನ್ನು ದೀರ್ಘದಂಡ ನಮಸ್ಕಾರ ಹಾಕುತ್ತಾ ಏರಿದ್ದಾರೆ.

ಯಾವ ಕಾರಣಕ್ಕೆ ಬೆಟ್ಟ ಏರಿದ್ದು?
ಇನ್ನು ಯಾವುದೇ ಕೆಲಸ ಮಾಡುವ ಮುಂಚೆ,ಅದಕ್ಕೊಂದು ಕಾರಣ ಇರಲೇಬೇಕು, ಅದೇ ರೀತಿಯಾಗಿ ಅಮರಯ್ಯ ಸ್ವಾಮೀಜಿಗಳು ದೀರ್ಘದಂಡ ನಮಸ್ಕಾರ ಹಾಕುತ್ತಾ ಅಂಜನಾದ್ರಿ ಬೆಟ್ಟ ಏರಲು ಕಾರಣವೂ ಇದೆ.‌ ಆ ಕಾರಣ ಏನೆಂದರೆ ಈಗಾಗಲೇ ಮುಂಗಾರು ಆರಂಭವಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಿಯಾಗಿ ಮಳೆಯಾಗಿ ಬೆಳೆಗಳು ಉತ್ತಮವಾಗಿ ಬರಲೆಂದು ಬೇಡಿಕೊಂಡು ಅಮರಯ್ಯಸ್ವಾಮಿ ಹಿರೇಮಠ ದೀರ್ಘದಂಡ ನಮಸ್ಕಾರದ ಮೂಲಕ ಅಂಜನಾದ್ರಿ ಬೆಟ್ಟ ಏರಿದ್ದಾರೆ.

ಇನ್ನು ಅಮರಯ್ಯಸ್ವಾಮಿ ಹಿರೇಮಠ ಅವರು ಕಳೆದ 20 ರಂದು ದಿರ್ಘದಂಡ ನಮಸ್ಕಾರದ ಮೂಲಕ ಅಂಜನಾದ್ರಿ ಬೆಟ್ಟ ಏರಲು ತೀರ್ಮಾನಸಿದ್ದರು, ಅದರಂತೆ ಇಂದು ಮೈಲಾಪೂರದಿಂದ ದೀರ್ಘ ದಂಡ ನಮಸ್ಕಾರದ ಮೂಲಕ ಇಂದು ಅಂಜನಾದ್ರಿ ಬೆಟ್ಟ ಏರಿದರು. ಈ ವೇಳೆ ಅಮರಯ್ಯಸ್ವಾಮಿ ಹಿರೇಮಠ ಅವರು ಭಕ್ತರೊಂದಿಗೆ ಜೈ ಶ್ರೀರಾಮ್ ಘೋಷಣೆ ಕೂಗತ್ತ ಬೆಟ್ಟ ಏರಿ‌ಪೂಜೆ ಸಲ್ಲಿಸಿದರು. ಒಟ್ಟಿನಲ್ಲಿ ಮಳೆ ಬೆಳೆಗಾಗಿ ಕಷ್ಟಪಟ್ಟು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಇತರ ಸ್ವಾಮೀಜಿಗಳಿಗೆ ಮಾದರಿಯಾಗಿದ್ದಾರೆ.

click me!