ಬೆಳಗಾವಿ ಪಾಲಿಕೆ ಎದುರು ಮತ್ತೆ ಹಾರಿತು ಹೊಸ ಕನ್ನಡ ಬಾವುಟ..!

Kannadaprabha News   | Asianet News
Published : Jul 14, 2021, 10:16 AM IST
ಬೆಳಗಾವಿ ಪಾಲಿಕೆ ಎದುರು ಮತ್ತೆ ಹಾರಿತು ಹೊಸ ಕನ್ನಡ ಬಾವುಟ..!

ಸಾರಾಂಶ

* ಕನ್ನಡ ಬಾವುಟ ಹಾರಿಸಿದ ಕನ್ನಡ ಅಭಿಮಾನಿಗಳು  * ಇತ್ತೀಚೆಗೆ ಗಾಳಿ, ಮಳೆಯಿಂದ ಹರಿದಿದ್ದ ಕನ್ನಡ ಬಾವುಟ  * ಧ್ವಜಸ್ತಂಭದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌

ಬೆಳಗಾವಿ(ಜು.14): ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಮತ್ತೆ ಹೊಸ ಕನ್ನಡ ಬಾವುಟ ಹಾರಾಡಿದೆ. ಹರಿದ ಕನ್ನಡ ಬಾವುಟವನ್ನು ಬದಲಿಸಿ, ಹೊಸ ಬಾವುಟ ಹಾರಿಸುವಂತೆ ನಾನಾ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದರೂ ಜಿಲ್ಲಾಡಳಿತ, ಪಾಲಿಕೆ ಕ್ರಮಕೈಗೊಂಡಿರಲಿಲ್ಲ. 

ಕನ್ನಡ ಅಭಿಮಾನಿಗಳು ಮಂಗಳವಾರ ಬೆಳಗಿನ ಜಾವ ಹರಿದ ಕನ್ನಡ ಬಾವುಟ ತೆರವುಗೊಳಿಸಿ, ಮತ್ತೆ ಹೊಸದಾಗಿ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.

ಮಾಸಿ, ಹರಿದು ಹೋದ ಕನ್ನಡ ಧ್ವಜ ಬದಲಿಸಲು ಹೋದವರನ್ನ ವಶಕ್ಕೆ ಪಡೆದ ಪೊಲೀಸ್ರು: ಕರ್ನಾಟಕದ ಸ್ಥಿತಿ

ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹೋರಾಟ ನಡೆಸಿ, ಧ್ವಜಸ್ತಂಭ ನಿರ್ಮಿಸಿ, ಕನ್ನಡ ಬಾವುಟ ಹಾರಿಸಿದ್ದರು. ಇತ್ತೀಚೆಗೆ ಗಾಳಿ, ಮಳೆಯಿಂದ ಕನ್ನಡ ಬಾವುಟ ಹರಿದಿತ್ತು. ಧ್ವಜಸ್ತಂಭದ ಸುತ್ತ ಬಿಗಿ ಪೊಲೀಸ್‌ ಕಾವಲಿದ್ದರೂ ಅವರ ಕಣ್ತಪ್ಪಿಸಿ ಹೊಸ ಬಾವುಟ ಅಳವಡಿಸಿದ್ದಾರೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!