ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಶೀನಪ್ಪ ರೈ ಇನ್ನಿಲ್ಲ

Kannadaprabha News   | Asianet News
Published : Jul 14, 2021, 09:50 AM ISTUpdated : Jul 14, 2021, 09:58 AM IST
ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಶೀನಪ್ಪ ರೈ ಇನ್ನಿಲ್ಲ

ಸಾರಾಂಶ

* ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶೀನಪ್ಪ ರೈ  * ಪೌರಾಣಿಕ ಪಾತ್ರಗಳಾದ ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ಶೀನಪ್ಪ  * ಮಂಗಳೂರಿನ ಸುರತ್ಕಲ್‌ನ ಪುತ್ರನ ಮನೆಯಲ್ಲಿ ವಾಸವಿದ್ದ ಶೀನಪ್ಪ ರೈ   

ಸುಳ್ಯ(ಜು.14): ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಪಾಜೆ ಶೀನಪ್ಪ ರೈ (78) ಮಂಗಳವಾರ ನಿಧನರಾದರು. 

ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶೀನಪ್ಪ ರೈ ಅವರು ಮಂಗಳೂರಿನ ಸುರತ್ಕಲ್‌ನ ಪುತ್ರನ ಮನೆಯಲ್ಲಿ ವಾಸವಿದ್ದರು. 

ಯಕ್ಷಗಾನ, ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ನಿಧನ

ಪೌರಾಣಿಕ ಪಾತ್ರಗಳಾದ ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಪಾತ್ರಗಳಿಗೆ ಅವರು ಪ್ರಸಿದ್ಧರಾಗಿದ್ದರು. ಅವರು ಇರಾ, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ ಮೇಳ, ಕಟೀಲು ಮೇಳ, ಹೊಸನಗರ, ಎಡನೀರು ಹಾಗೂ ಹನುಮಗಿರಿ ಮೇಳಗಳಲ್ಲಿ ಸುಮಾರು 59 ವರ್ಷ ಕಲಾಸೇವೆ ಮಾಡಿದ್ದರು. ಮೃತರಿಗೆ ಪತ್ನಿ ಗಿರಿಜಾವತಿ, ಪುತ್ರ ಜಯರಾಮ ರೈ, ಪುತ್ರಿಯರಾದ ರೇವತಿ ಶೆಟ್ಟಿ, ರಜನಿ ರೈ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
 

PREV
click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ