ಮಹಾರಾಷ್ಟ್ರದಲ್ಲಿ ಕನ್ನಡ ಡಿಂಡಿಮ: ಕನ್ನಡ ಭಾಷಿಕರ ಸಮಾಗಮಕ್ಕೆ ಸಿದ್ಧವಾದ ಸುಕ್ಷೇತ್ರ ಗುಡ್ಡಾಪುರ

By Govindaraj S  |  First Published Sep 29, 2024, 7:36 PM IST

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್, ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಎಲ್ಲಾ ಕನ್ನಡ ಸಂಘಟನೆಯಗಳ ಸಹಯೋಗದಲ್ಲಿ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮ ನಡೆಯಲಿದೆ.


- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.29): ಗಡಿನಾಡಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ. ಹೊರನಾಡ ಕನ್ನಡಿಗರನ್ನ ಒಗ್ಗೂಡಿಸುತ್ತಿದೆ ಗಡಿನಾಡ ಪ್ರಾಧಿಕಾರ. ಕನ್ನಡ ಸಂಭ್ರಮ-50ಕ್ಕೆ ಭರದ ತಯಾರಿ. ಹೌದು ವಿಜಯಪುರ ಗಡಿಯ ಮಹಾರಾಷ್ಟ್ರದ ಜತ್‌ ತಾಲೂಕಿನ ಸುಕ್ಷೇತ್ರ ಗುಡ್ಡಾಪುರದಲ್ಲಿ ಕನ್ನಡ ಸಂಭ್ರಮ-50 ಕಾರ್ಯಕ್ರಮ ನಡೆಯಲಿದೆ. ಮಹಾರಾಷ್ಟ್ರದ ಗಡಿ ಗ್ರಾಮಗಳ ಕನ್ನಡಿಗರನ್ನ ಈ  ಕಾರ್ಯಕ್ರಮ ಪುಳಕಿತರನ್ನಾಗಿಸಿದೆ.

Latest Videos

undefined

ಹೊರನಾಡಲ್ಲಿ ಕನ್ನಡ ಡಿಂಡಿಮ ; ಸೋಮಣ್ಣ ಬೇವಿನಮರದ: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್, ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಎಲ್ಲಾ ಕನ್ನಡ ಸಂಘಟನೆಯಗಳ ಸಹಯೋಗದಲ್ಲಿ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮ ನಡೆಯಲಿದೆ ನಾಳೆ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಕುರಿತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ  ಸೋಮಣ್ಣ ಬೇವಿನಮರದ ಮಾಹಿತಿ ಹಂಚಿಕೊಂಡಿದ್ದಾರೆ.

ರಾಮನಗರವನ್ನು ಬರಪೀಡಿತ ತಾಲೂಕಾಗಿ ಘೋಷಿಸಲು ಒತ್ತಾಯಿಸುವೆ: ಶಾಸಕ ಇಕ್ಬಾಲ್ ಹುಸೇನ್

ಮಹಾರಾಷ್ಟ್ರ ಗಡಿಯಲ್ಲಿವೆ 300 ಕನ್ನಡ ಶಾಲೆ: ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಕನ್ನಡಿಗರೆ ಬಹುಭಾಷಿಕರಾಗಿದ್ದಾರೆ. ಸಾಂಗಲಿ, ಸೊಲ್ಲಾಪುರ ಜಿಲ್ಲೆಗಳ ಜತ್‌, ಅಕ್ಕಲಕೋಟ, ದಕ್ಷಿಣ ಸೋಲಾಪುರ ಸೇರಿದಂತೆ ಅನೇಕ ತಾಲೂಕುಗಳಲ್ಲಿ ಕನ್ನಡಿಗರೆ ಬಹುಸಂಖ್ಯಾತರಾಗಿದ್ದಾರೆ. ಹೀಗಾಗಿ ಅಲ್ಲಿನ ಬಹುತೇಕ ಮಕ್ಕಳು ಕನ್ನಡದಲ್ಲಿಯೆ ಶಿಕ್ಷಣ ಪಡೆಯುತ್ತಿದ್ದಾರೆ. 300ಕ್ಕು ಅಧಿಕ ಶಾಲೆಗಳು ಕನ್ನಡ ಮಾಧ್ಯಮದಲ್ಲಿಯೆ ಶಿಕ್ಷಣ ನೀಡ್ತಿವೆ. ಇನ್ನು 30 ಸಾವಿರ ಮಕ್ಕಳು ಕನ್ನಡ ಭಾಷೆಯಲ್ಲಿಯೇ ವ್ಯಾಸಂಗ ಮಾಡ್ತಿದ್ದಾರೆ. ಹೀಗಾಗಿ ಗಡಿ ತಾಲೂಕು ಜತ್‌ ನ ಗುಡ್ಡಾಪುರದಲ್ಲಿ ನಡೆಯುತ್ತಿರುವ ಈ ಕನ್ನಡ ಸಂಭ್ರಮ-50 ಮಹತ್ವ ಪಡೆದುಕೊಂಡಿದೆ.

ಅಹವಾಲು ನೀಡಲಿರುವ ಮಹಾ' ಕನ್ನಡಿಗರು: ಹೊರನಾಡ ಕನ್ನಡಿಗರು ಸೇರುವ ಈ ಕಾರ್ಯಕ್ರಮದಲ್ಲಿ  ಸಿಎಂ  ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಆದ್ರೆ ಗೈರಾಗುವ ಸಾಧ್ಯತೆಗಳಿವೆ. ಹೀಗಾಗಿ ಮಹಾರಾಷ್ಟ್ರದ ಗಡಿ ಕನ್ನಡಿಗರು ತಮ್ಮ ಅಹವಾಲುಗಳನ್ನ ವೇದಿಕೆಯಲ್ಲಿಯೆ ಗಡಿನಾಡು ಪ್ರಾಧಿಕಾರದ ಅಧ್ಯಕ್ಷರು ಸೋಮಣ್ಣ ಬೇವಿನಮರದ, ಸಚಿವರಿಗೆ ಅರ್ಪಿಸಲಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕನ್ನಡಿಗರಿಗೆ ಆಗ್ತಿರೋ ಅನ್ಯಾಯಗಳ ಬಗ್ಗೆಯೂ ಕರ್ನಾಟಕ ಸರ್ಕಾರದ ಗಮನ ಸೆಳೆಯಲಿದ್ದಾರೆ.

ಗಡಿ ಕನ್ನಡಿಗರ ಮಕ್ಕಳಿಗೆ ನಲಿಕಲಿ ವಿತರಣೆ: ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡ ಮಾಧ್ಯಮಿಕ ಶಾಲೆ ಮಕ್ಕಳಿಗೆ ಕನ್ನಡದ ನಲಿಕಲಿ ಸಾಮಗ್ರಿಗಳನ್ನ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕಾರಣ ಎಂದರೆ ಮಹಾರಾಷ್ಟ್ರದ ಸರ್ಕಾರಿ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷೆಯ ಕಲಿಕಾ ಸಾಮಗ್ರಿಗಳನ್ನ ನೀಡಿದ್ದು, ಇದು ಮಕ್ಕಳ ಓದಿಗೆ ತೊಂದರೆ ಉಂಟು ಮಾಡ್ತಿದೆ. ಕನ್ನಡದಲ್ಲಿಯೆ ಮಾತನಾಡುವುದು, ಕನ್ನಡದಲ್ಲಿಯೆ ಪಾಠ ಕೇಳ್ತಿರೋ ಮಕ್ಕಳಿಗೆ ಮಹಾರಾಷ್ಟ್ರ ಸರ್ಕಾರದ ಕಲಿಕಾ ಸಾಮಗ್ರಿಗಳು ಹಿಂಸೆ ಉಂಟು ಮಾಡ್ತಿವೆ. ಇದೆ ಕಾರಣಕ್ಕೆ ಕರ್ನಾಟಕ ಸರ್ಕಾರದಿಂದಲೇ ನಲಿಕಲಿ ಕಲಿಕಾ ಸಾಮಗ್ರಿ ವಿತರಣೆಯನ್ನ ಮಾಡಲಾಗ್ತಿದೆ.

ಗಡಿಯಲ್ಲಿ ಕನ್ನಡ ಬಿತ್ತಿದವರಿಗೆ ಚೇತನ ಪ್ರಶಸ್ತಿ: ಕನ್ನಡ ಸಂಭ್ರಮದಲ್ಲಿ ನಡೆಯಲಿರುವ ಹೊರನಾಡ ಕನ್ನಡಿಗರ ಸಮಾವೇಶದಲ್ಲಿ ಮಹಾರಾಷ್ಟ್ರ, ತಮಿಳುನಾಡು, ಕೇರಳ ಗಡಿಗಳಲ್ಲಿ ಕನ್ನಡ ಬಿತ್ತಿದ ಸಾಹಿತಿ, ಸಂಘ-ಸಂಸ್ಥೆಗಳಿಗೆ ಗಡಿನಾಡ ಚೇತನ ಪ್ರಶಸ್ತಿ ಪ್ರಧಾನ ನಡೆಯಲಿದೆ. ಕರ್ನಾಟಕ ಗಡಿಯಲ್ಲಿ ಕನ್ನಡದ ಸೇವೆ ಮಾಡಿದವರಿಗೆ ಗಡಿನಾಡ ಚೇತನ ಎನ್ನುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಜರುಗಲಿದೆ. ಈ ಪ್ರಶಸ್ತಿ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿ, ಪಾರಿತೋಷಕ ಸೇರಿದಂತೆ 1 ಲಕ್ಷ ರೂಪಾಯಿ ನಗದು ಒಳಗೊಂಡಿರಲಿದೆ.

ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್‌ ಅಭ್ಯರ್ಥಿಯಾಗಲಿ: ಸಚಿವ ಜಮೀರ್‌ ಅಹಮದ್‌ ಖಾನ್‌

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಅವರು, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ್ ಪಾಟೀಲ್ ಅವರು, ಮಹಾರಾಷ್ಟ್ರ ರಾಜ್ಯದ ಕಾರ್ಮಿಕ ಸಚಿವರು ಸುರೇಶ್ ಖಾಡಿ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರು,  ಸೋಲಾಪುರ್ ಜಿಲ್ಲೆಯ ಲೋಕಸಭಾ ಸದಸ್ಯರಾದ ಪ್ರಣತಿ ಶಿಂದೆ ಅವರು ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಭಾಗವಹಿಸಲಿದ್ದಾರೆ.

click me!