ಪಾವಗಡ ತಾಲೂಕಿನಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾದಾಗ, ಸ್ಥಳೀಯರು ಚಾಲಕನ ರಕ್ಷಣೆಗಿಂತ ಹಾಲು ಸಂಗ್ರಹಿಸುವತ್ತ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಘಟನೆಯ ದೃಶ್ಯಗಳು ಇದೀಗ ವೈರಲ್ ಆಗಿವೆ.
ಬೆಂಗಳೂರು (ಸೆ.29): ಪಾವಗಡ ತಾಲೂಕಿನ ವಡ್ಡರಹಟ್ಟಿಯಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ. ಈ ವೇಳೆ ಸ್ಥಳೀಯ ಜನರು ಲಾರಿ ಚಾಲಕನ ರಕ್ಷಣೆಯನ್ನು ಮರೆತು, ಬಿಂದಿಗೆ ಹಾಗೂ ಬಾಟಲಿಗಳಲ್ಲಿ ಹಾಲನ್ನು ತುಂಬಿಕೊಂಡು ಹೋಗಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬ್ಯಾಡನೂರು ಗುಂಡಾರ್ಲಹಳ್ಳಿ ನಡುವಿನ ರಸ್ತೆಯ ವಡ್ಡರಹಟ್ಟಿ ಬಳಿ ಟ್ಯಾಂಕರ್ ಪಲ್ಟಿಯಾಗಿದೆ. ರಸ್ತೆಯಲ್ಲಿ ಹಾಲಿನ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿರಯವಾಗ ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ. ಬ್ಯಾಡನೂರು ಗ್ರಾಮದಿಂದ ಹಾಲು ತುಂಬಿಕೊಂಡು ಪಾವಗಡದ ಕಡೆ ಬರುವಾಗ ಪಲ್ಟಿಯಾಗಿದೆ. ಗ್ರಾಮದ ರಸ್ತೆಯಲ್ಲಿ ಭಾರಿ ಸದ್ದು ಬಂದ ಹಿನ್ನೆಲೆಯಲ್ಲಿಯೇ ಜನರು ಓಡಿ ಬಂದು ಏನಾಗಿದೆ ಎಂದು ನೋಡಿದ್ದಾರೆ. ಅಷ್ಟರಲ್ಲಾಗಲೇ ಲಕ್ಷಾಂತರ ಲೀಟರ್ ಹಾಲು ರಸ್ತೆಗೆ ಸುರಿದು ಹರಿದು ಹೋಗುತ್ತಿತ್ತು.
undefined
ತುಮಕೂರು: ನೆಲಹಾಳ್ ಕ್ರಾಸ್ ಬಳಿ ಹೈವೇಯಲ್ಲಿ ಕಾರು ಅಡ್ಡಗಟ್ಟಿ 1 ಕೋಟಿ ಹಣ ದೋಚಿದ ಕಳ್ಳರು
ಪೋಲಾಗುತ್ತಿದ್ದ ಹಾಲನ್ನು ನೋಡಿದ ಸ್ಥಳೀಯರು ತಮ್ಮ ಮನೆಯಲ್ಲಿ ನೀರು ತುಂಬಿಸಲು ಇಟ್ಟುಕೊಂಡಿದ್ದ ಬಿಂದಿಗೆ, ಕ್ಯಾನುಗಳು, ಪಾತ್ರೆಗಳನ್ನು ತಂದು ಪೋಲಾಗುತ್ತಿದ್ದ ಹಾಲನ್ನು ತುಂಬಿಕೊಂಡು ಹೋಗುತ್ತಿದ್ದರು. ಹಾಲನ್ನು ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಸ್ಥಳೀಯರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮತ್ತೊಂದೆಡೆ, ಲಾರಿ ಪಲ್ಟಿಯಾದ ಕೂಡಲೇ ಕೆಲವರು ಸ್ಥಳೀಯರು ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಒಟ್ಟಾರೆ ರಸ್ತೆ ಬದಿ ಲಾರಿ ಪಲ್ಟಿಯಾಗಿದ್ದರಿಂದ ಬಹುತೇಕ ಹಾಲು ರಸ್ತೆಯ ಪಾಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಕ್ರೇನ್ ಸಹಾಯದಿಂದ ಹಾಲಿನ ಟ್ಯಾಂಕರ್ ಅನ್ನು ಮೇಲಕ್ಕೆ ಎತ್ತಿದ್ದಾರೆ. ಈ ಘಟನೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು: 'ಚಾಮುಂಡಿ ಕಾಲ್ಪನಿಕ, ಮಹಿಷಾಸುರನನ್ನು ಕೊಂದಿಲ್ಲ' - ನಂಜರಾಜೇ ಅರಸ್
ಕೋಲಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ: ಕೋಲಾರ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ್ಯ ಲಕ್ಷ್ಮೀನಾರಾಯಣ ಮೇಲೆ ಹಲ್ಲೆ ಖಂಡಿಸಿ ಕುಂಬಾರ ಸಂಘದಿಂದ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಪ್ರತಿಕೃತಿ ದಹಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಕುಂಬಾರ ಸಂಘದ ಸದಸ್ಯರು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಅವರ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪ್ರತಿಭಟನೆಗೆ ಯಾವುದೇ ಅನುಮತಿ ಪಡೆಯದೆ ಪ್ರತಿಕೃತಿ ದಹಿಸಿದ್ದಕ್ಕೆ ಪೊಲೀಸರು ಸಿಡಿಮಿಡಿಗೊಂಡಿದ್ದಾರೆ. ಪ್ರತಿಭಟನೆ ನಡೆಸಿದ ಕುಂಬಾರ ಸಂಘದ ಮುಖಂಡ ವೇಣು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಬಸ್ ನಿಲ್ದಾಣ ವೃತ್ತದಲ್ಲಿ ಪೊಲೀಸರು ಹಾಗು ಕುಂಬಾರ ಸಂಘದ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.