* ಪತ್ರಿಕೆಯಲ್ಲಿ ಕನ್ನಡದ ಮೊದಲುಗಳ ತಿಳಿಸಿ ಕನ್ನಡ ಜಾಗೃತಿ
* ಕನ್ನಡ ಪ್ರೇಮಿ ಹಿರೇಮಠ ಮನೆತನ ವಿವಾಹ ಮಹೋತ್ಸವ
* ಸಂವಿಧಾನ ಸಾಕ್ಷಿಯಾಗಿ ಮದುವೆ
ಅಕ್ಷಯಕುಮಾರ ಶಿವಶಿಂಪಿಗೇರ
ಗದಗ(ನ.25): ಲಗ್ನಪತ್ರಿಕೆಯನ್ನು(Wedding Card) ವಿವಿಧ ಮಾದರಿಯಲ್ಲಿ ತಯಾರಿಸಿ ಗಮನ ಸೆಳೆಯಲಾಗುತ್ತಿದೆ. ಆದರೆ, ಇಲ್ಲೊಂದು ಕುಟುಂಬ ತಮ್ಮ ಪುತ್ರನ ಮದುವೆಗೆ(Marriage) ತಯಾರಿಸಿದ ಲಗ್ನಪತ್ರಿಕೆ ಕನ್ನಡ(Kannada) ಜಾಗೃತಿ(Awareness) ಮೂಡಿಸುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
undefined
ನ. 26ರಂದು ನರಗುಂದ(Nargund) ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ನಡೆಯಲಿರುವ ಕನ್ನಡ ಪ್ರೇಮಿ ಕುಟುಂಬವಾದ ಹಿರೇಮಠ ಮನೆತನ ವಿವಾಹ ಮಹೋತ್ಸವಕ್ಕೆ ಈ ರೀತಿ ಆಹ್ವಾನ(Invitation) ನೀಡಿದೆ. ಧಾರವಾಡ(Dharwad) ಜಿಲ್ಲೆಯ ಗೋವನಕೊಪ್ಪ ಮೂಲದವರಾದ ಗುರಯ್ಯ ಹಿರೇಮಠ ಹಾಗೂ ಗೌರಮ್ಮ ದಂಪತಿ ತಮ್ಮ ಪುತ್ರರಾದ ಮಹಾಂತೇಶ ಹಾಗೂ ಮಹೇಶ ಅವರ ಲಗ್ನ ಪತ್ರಿಕೆಯ ಮೂಲಕ ಕನ್ನಡ ಜಾಗೃತಿ ಮೂಡಿಸಿದೆ.
ವೆಡ್ಡಿಂಗ್ ಕಾರ್ಡ್ ವೈರಲ್: ಗಿಫ್ಟ್ ಕೊಡೋಕೆ ಪರದಾಡ್ಬೇಡಿ, ಪತ್ರಿಕೆಯಲ್ಲೇ QR Code!
ಕನ್ನಡದ ಮೊದಲುಗಳು:
ವಿಶೇಷವಾಗಿ ವಿನ್ಯಾಸಗೊಳಿಸಿರುವ ಲಗ್ನ ಪತ್ರಿಕೆಯಲ್ಲಿ ತ್ರಪದೊ ಛಂಧಸ್ಸಿನ ಮೊದಲ ಬಳಕೆ, ಕನ್ನಡದ ಮೊದಲ ದೊರೆ, ಕವಿ, ಕವಿಯಿತ್ರಿ, ಶಾಸನ, ಗ್ರಂಥ, ನಾಟಕ, ಪತ್ತೆದಾರಿ ಕಾದಂಬರಿ, ಛಂಧೋಗ್ರಂಥ, ಸಾಮಾಜಿಕ ನಾಟಕ, ಜ್ಯೋತಿಷ್ಯ ಗ್ರಂಥ, ಗಣಿತ ಶಾಸ್ತ್ರ ಗ್ರಂಥ, ಕಾವ್ಯ, ಗದ್ಯ ಕೃತಿ, ಪತ್ರಿಕೆ, ಕಥೆಗಾರರು, ಮೊದಲ ಪ್ರೇಮ ಗೀತೆಗಳ ಸಂಕಲನ, ಕಸಾಪ ಮೊದಲ ಅಧ್ಯಕ್ಷರ ಹೆಸರು, ಮೊದಲ ಸ್ನಾತ್ತಕೋತ್ತರ ಪದವೀಧರ, ವಚನಕಾರ, ಮಹಾಕಾವ್ಯ, ವಿವಿಧ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು(Kannadigas), ಮೊಟ್ಟಮೊದಲ ಸಂಕಲನ ಗ್ರಂಥ, ವಿಶ್ವ ಕೋಶ, ವೈದ್ಯಗ್ರಂಥ, ಮೊದಲ ಪ್ರಾಧ್ಯಾಪಕರು, ಕನ್ನಡದಲ್ಲಿ ರಚನೆಗೊಂಡ ಮೊದಲ ರಗಳೆ, ಹಾಸ್ಯಪತ್ರಿಕೆ, ಮೊದಲ ವೀರಗಲ್ಲು... ಹೀಗೆ ನಾನಾ ರೀತಿಯ ಕನ್ನಡದ ಮೊದಲುಗಳನ್ನು ಲಗ್ನ ಪತ್ರಿಕೆಯಲ್ಲಿ ನಮೂದಿಸಿ, ಜಾಗರತಿ ಮೂಡಿಸಲಾಗಿದೆ. ಇದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ(Competitive Exam) ಬೇಕಾದ ಅಗತ್ಯ ಮಾಹಿತಿಯೊಳಗೊಂಡಿದ್ದು, ಸಂಗ್ರಹಯೋಗ್ಯವಾಗಿದೆ.
ಸಂವಿಧಾನ ಸಾಕ್ಷಿಯಾಗಿ ಮದುವೆ
ಕನ್ನಡದ ಜ್ಞಾನ ಬಿತ್ತರಿಸುವ ಮೂಲಕ ವಿಶೇಷ ಮದುವೆ ಆಹ್ವಾನ ನೀಡಿರುವುದು ವಿಶೇಷವಾದರೆ, ಸಂವಿಧಾನ(Constitution) ಸಾಕ್ಷಿಯಾಗಿ ಮದುವೆ ಮಾಡುತ್ತಿರುವುದು ಮತ್ತೊಂದು ವಿಶೇಷ. ಸಂವಿಧಾನದ ಪುಸ್ತಕದ ಮೇಲೆ ದೀಪವನ್ನಿರಿಸಿ, ಈ ಮೂಲಕ ಪ್ರಮಾಣ ಮಾಡುವ ಮೂಲಕ ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿವೆ. ಕನ್ನಡ ಕಟ್ಟಿ, ಉಳಿಸಿ ಬೆಳೆಸುವಲ್ಲಿ ಇದೊಂದು ಪ್ರಯತ್ನ. ಹಿರೇಮಠ ಕುಟುಂಬ ವರ್ಗದವರು ಕನ್ನಡ ಭಾಷೆಯ ಮೇಲೆ ಇಟ್ಟಿರುವ ಅಭಿಮಾನಕ್ಕೆ ಇದು ಉತ್ತಮ ಸಾಕ್ಷಿಯಾಗಿದೆ ಎಂದು ಭೈರನಹಟ್ಟಿ ಶಾಂತಲಿಂಗ ಶ್ರೀಗಳು ತಿಳಿಸಿದ್ದಾರೆ.
ಮುಸ್ಲಿಂ ಲಗ್ನಪತ್ರಿಕೆಯಲ್ಲಿ ಗಣೇಶ, ರಾಧಾಕೃಷ್ಣರ ಫೋಟೋ!
ಹಿಂದೂಗಳ(Hindu) ಮದುವೆ ಕರೆಯೋಲೆಯಲ್ಲಿ ದೇವರ(God) ಫೋಟೋಗಳನ್ನು ಹಾಕುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ(Uttara Pradesh) ಮೇರಠ್‌ನಲ್ಲಿ ಮುಸ್ಲಿಂ(Muslim) ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಗಣೇಶ(Lord Ganesh)ಮತ್ತು ರಾಧಾಕೃಷ್ಣ(Lord Radha Krishna) ಮತ್ತು ಚಾಂದ್ ಮುಬಾರಕ್(Chand Mubarak) ಫೋಟೋಗಳನ್ನು(Photos) ಮುದ್ರಿಸಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
150 ಪುಟದ ಲಗ್ನ ಪತ್ರಿಕೆ ಮುದ್ರಿಸಿದ ವಕೀಲ : ಅದರಲ್ಲಿರುವ ಮಾಹಿತಿ ಏನು..?
ಹಸ್ತಿನಾಪುರ ಪ್ರದೇಶದ ನಿವಾಸಿ ಮೊಹದ್ ಸರಾಫತ್ ಎಂಬಾತ ಕಳೆದ ವರ್ಷ ಮಾ.4ರಂದು ನಡೆದ ತನ್ನ ಮಗಳ ಮದುವೆಗೆ ಇಂಥದ್ದೊಂದು ವಿಶಿಷ್ಟ ಮಂಗಳಪತ್ರವನ್ನು ಸಿದ್ಧಪಡಿಸಿದ್ದ. ಈ ಮದುವೆಗೆ ಹಿಂದುಗಳಿಗೂ ಆಮಂತ್ರಣ ನೀಡಿದ್ದರು.
ನಮ್ಮ ಸುತ್ತಮುತ್ತ ಕೋಮು ಸಾಮರಸ್ಯ ಹದಗೆಟ್ಟಿರುವಾಗ ಹಿಂದೂ - ಮುಸ್ಲಿಂ ಸಾಮರಸ್ಯ ಮೆರೆಯಲು ಇದೊಂದು ಒಳ್ಳೆಯ ಐಡಿಯಾ. ನನ್ನ ಸ್ನೇಹಿತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನನ್ನ ಸಂಬಂಧಿಕರಿಗೆ ಹಿಂದಿ(Hindi) ಓದಲು ಬರುವುದಿಲ್ಲ. ಅವರಿಗಾಗಿ ಉರ್ದುನಲ್ಲಿ(Urdu) ಕಾರ್ಡ್ ಮಾಡಿಸಿದ್ದೇವೆ ಅಂತ ಹೇಳಿದ್ದರು.