ಕಾಣಿಯೂರು ಶ್ರೀಗಳ ಗೋವಂದನೆಗೆ ನೆಟ್ಟಿಗರು ಫಿದಾ

By Kannadaprabha News  |  First Published Jul 10, 2020, 8:16 AM IST

ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರು ಗೋ ಅಭಿವಾದನದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಶ್ರೀಗಳ ಗೋಪ್ರೇಮದ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.


ಉಡುಪಿ(ಜು.10): ಇಲ್ಲಿನ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರು ಗೋ ಅಭಿವಾದನದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಶ್ರೀಗಳ ಗೋಪ್ರೇಮದ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಶ್ರೀಗಳು ಅನೇಕ ವರ್ಷದಿಂದ ಪ್ರತಿದಿನ ತಮ್ಮ ಮಠದಲ್ಲಿ ಆರಾಧ್ಯದೇವರಾದ ಯೋಗಾನರಸಿಂಹ ದೇವರಿಗೆ ಪೂಜೆಯ ನಂತರ, ಮಠದ ಗೋವಿಗೆ ಪೂಜೆ ಸಲ್ಲಿಸಿ ಅದಕ್ಕೆ ಕಾಲಿಗೆ ಸಾಷ್ಟಾ್ರಂಗ ನಮಸ್ಕರಿಸುವುದು ಪದ್ಧತಿ ಮಾಡಿಕೊಂಡಿದ್ದಾರೆ.

Latest Videos

undefined

ಕೊರೋನಾ ಸೋಂಕಿತರ ಸಖತ್ ಟೈಗರ್ ಡ್ಯಾನ್ಸ್, ವಿಡಿಯೋ ವೈರಲ್

ಇತ್ತೀಚೆಗೆ ಶ್ರೀಗಳು ಭಕ್ತಿಯಿಂದ ಗೋವಿಗೆ ನಮಸ್ಕರಿಸುವುದು ಮತ್ತು ಗೋವು ಅಷ್ಟೇ ಪ್ರೀತಿಯಿಂದ ಶ್ರೀಗಳ ಮೈದಡಹುವ ಮನಸ್ಪರ್ಶಿ ಫೋಟೋವನ್ನು ಮಠದ ಉಸ್ತುವಾರಿ ಸುಧೀರ್‌ ಭಟ್‌ ಎನ್ನುವವರು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು. ಅದೀಗ ಗೋ ಭಕ್ತರ ಆಕರ್ಷಣೆಗೆ ಕಾರಣವಾಗಿದೆ.

ಶ್ರೀ ವಿದ್ಯಾವಲ್ಲಭ ತೀರ್ಥರಿಗೆ ಗೋವುಗಳೆಂದರೇ ಪಂಚಪ್ರಾಣ. ಕೃಷ್ಣಮಠದಲ್ಲಿ ತಮ್ಮ ಪರ್ಯಾಯದ ಸಂದರ್ಭ ಪ್ರಪ್ರಥಮ ಐತಿಹಾಸಿಕ ಗೋ ಸಮ್ಮೇಳನ ನಡೆಸಿದ್ದರು. ಮಾತ್ರವಲ್ಲದೇ ಕೃಷ್ಣಮಠದ ಗೋಶಾಲೆಗೆ ದೇಶಿಯ ಗೋತಳಿಗಳಾದ ಸಾಹಿವಾಲ್‌, ಗೀರ್‌, ಓಂಗೋಲ್, ಮಲೆನಾಡು ಗಿಡ್ಡ, ಹಳ್ಳಿಕಾರ್‌ ಇತ್ಯಾದಿ ಗೋವುಗಳನ್ನು ತಂದು ಸೇರಿಸಿ, ಅವುಗಳ ತಳಿ ಸಂವರ್ಧನೆಗೆ ಪ್ರಯತ್ನಿಸಿದ್ದರು.

click me!