ಮಂಗಳೂರಲ್ಲಿ ಕೊರೋನಾ ಸರಣಿ ಸಾವು, 167 ಮಂದಿಗೆ ಸೋಂಕು

By Kannadaprabha NewsFirst Published Jul 10, 2020, 7:39 AM IST
Highlights

ಕಳೆದ ಕೆಲವು ದಿನಗಳಿಂದ ದ. ಕ. ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ವರದಿಗಳು ಪ್ರತಿದಿನ ನೂರಕ್ಕೂ ಮಿಕ್ಕಿ ಬರುತ್ತಲೇ ಇದ್ದು, ಪ್ರತಿ ಬಾರಿಯೂ ಕೊರೋನಾ ಆತಂಕದತ್ತಲೇ ಸಾಗುತ್ತಿದೆ.

ಮಂಗಳೂರು(ಜು.10): ಕಳೆದ ಕೆಲವು ದಿನಗಳಿಂದ ದ. ಕ. ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ವರದಿಗಳು ಪ್ರತಿದಿನ ನೂರಕ್ಕೂ ಮಿಕ್ಕಿ ಬರುತ್ತಲೇ ಇದ್ದು, ಪ್ರತಿ ಬಾರಿಯೂ ಕೊರೋನಾ ಆತಂಕದತ್ತಲೇ ಸಾಗುತ್ತಿದೆ.

ಗುರುವಾರ ಬಂದ ಲ್ಯಾಬ್‌ ವರದಿಯಲ್ಲಿ 167 ಮಂದಿಯಲ್ಲಿ ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 1, 709 ತಲುಪಿದ್ದು, ಎರಡು ಸಾವಿರದತ್ತ ಸಾಗುವ ಭೀತಿ ಎದುರಾಗಿದೆ. ಇದೇ ವೇಳೆ ಕೋವಿಡ್‌ನ ಸಾವಿನ ಸರಣಿ ಮುಂದುವರಿಯುತ್ತಿದೆ. ಗುರುವಾರ ಇಬ್ಬರು ಸಾವಿಗೀಡಾಗಿದ್ದು, ಈ ಸಂಖ್ಯೆ 30ಕ್ಕೆ ತಲುಪಿದೆ.

ಆಶಾ ಕಾರ್ಯಕರ್ತೆಗೆ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ

ಕೋವಿಡ್‌ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 64 ಮಂದಿಯಲ್ಲಿ ಸೋಂಕು ಕಾಣಿಸಿದೆ. ಜ್ವರ, ಕೆಮ್ಮಿ ಬಾಧೆಯಿಂದ 42 ಮಂದಿಗೆ, ಶ್ವಾಸಕೋಶ ಸೋಂಕಿನಿಂದ 6 ಮಂದಿಗೆ, ಬೆಂಗಳೂರಿನಿಂದ ಬಂದ ಓರ್ವರಲ್ಲಿ, ಕತಾರ್‌ ಮತ್ತು ದುಬೈನಿಂದ ಆಗಮಿಸಿದ ಮೂವರಲ್ಲಿ, ಶಸ್ತ್ರಚಿಕಿತ್ಸೆಗೂ ಮುನ್ನ ನಡೆಸಿದ ಸ್ಯಾಂಪಲ್‌ ತಪಾಸಣೆಯಲ್ಲಿ 13 ಮಂದಿಗೆ ಸೋಂಕು ತಟ್ಟಿದೆ. ಸೋಂಕು ಕಾಣಸಿದ 38 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದರೆ ಇಲ್ಲಿನ ಕೊರೋನಾ ಸೋಂಕಿನ ಪ್ರಮಾಣ 0.081ಕ್ಕೆ ಏರಿಕೆಯಾಗಿದೆ. ಗುರುವಾರ 7 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದು, ಒಟ್ಟು 702 ಮಂದಿ ಡಿಸ್ಚಾರ್ಜ್‌ ಆದಂತಾಗಿದೆ. ಪ್ರಸಕ್ತ ಒಟ್ಟು 977 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 7 ಮಂದಿ ತೀವ್ರ ನಿಗಾದಲ್ಲಿ ಇದ್ದಾರೆ.

ಆತಂಕ ಬೇಡ, ಗಾಳಿಯಲ್ಲಿ ಕೊರೋನಾ ಹರಡುವಿಕೆಗೆ ತಜ್ಞರ ಸಲಹೆ!

ಮತ್ತೆ ಇಬ್ಬರು ಸಾವು: ಕೋವಿಡ್‌ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. 62 ವರ್ಷದ ಭಟ್ಕಳ ನಿವಾಸಿ ಶ್ವಾಸಕೋಶ ಸೋಂಕಿನಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜು. 7ರಂದು ಮೃತಪಟ್ಟಿದ್ದರು. ಮಂಗಳೂರಿನ 49ರ ಸೋಂಕಿತ ವ್ಯಕ್ತಿ ನ್ಯುಮೋನಿಯಾ ಮತ್ತು ಯಕೃತ್‌ ತೊಂದರೆಯಿಂದ ಬಳಲಿ ಜು. 7ರಂದು ವೆನ್ಲಾಕ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮರುದಿನ ಮೃತಪಟ್ಟಿದ್ದರು. ಇವರ ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್‌ ಪಾಸಿಟಿವ್‌ ಬಂದಿತ್ತು.

ದ.ಕ. -09 - 07- 2020

ಒಟ್ಟು ಸೋಂಕಿತರು- 1,709

ಗುಣಮುಖರಾದವರು- 702

ಸಾವಿಗೀಡಾದವರು- 30

ಚಿಕಿತ್ಸೆ ಪಡೆಯುತ್ತಿರುವವರು- 977

ತೀವ್ರ ನಿಗಾದಲ್ಲಿ- 7

click me!