ಮೈನ್‌ ಶಾಲೆಗೆ ಕಂಬಳ ವೀರನಿಂದ ಕ್ರೀಡಾ ಸಾಮಗ್ರಿಗಳ ಕೊಡುಗೆ

By Kannadaprabha News  |  First Published Mar 8, 2020, 9:07 AM IST

ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅವರಿಗೆ ಕ್ರೀಡೆಗೆ ಪೂರಕವಾದ ವಸ್ತುಗಳೂ ಅಗತ್ಯವಾಗಿ ಬೇಕೆಂಬುದನ್ನು ಅರಿತುಕೊಂಡಿರುವ ಕಂಬಳದ ಚಿನ್ನದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್‌ ಕೆಸರ್‌ಗದ್ದೆ ಇಲ್ಲಿಗೆ ವಾಲಿಬಾಲ್‌, ನೆಟ್‌ ಮತ್ತು ಶಟಲ್‌ ಬ್ಯಾಟ್‌ಗಳನ್ನು ಶುಕ್ರವಾರ ಕೊಡುಗೆಯಾಗಿ ನೀಡಿದ್ದಾರೆ.


ಉಡುಪಿ(ಮಾ.08): ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅವರಿಗೆ ಕ್ರೀಡೆಗೆ ಪೂರಕವಾದ ವಸ್ತುಗಳೂ ಅಗತ್ಯವಾಗಿ ಬೇಕೆಂಬುದನ್ನು ಅರಿತುಕೊಂಡಿರುವ ಕಂಬಳದ ಚಿನ್ನದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್‌ ಕೆಸರ್‌ಗದ್ದೆ ಇಲ್ಲಿಗೆ ವಾಲಿಬಾಲ್‌, ನೆಟ್‌ ಮತ್ತು ಶಟಲ್‌ ಬ್ಯಾಟ್‌ಗಳನ್ನು ಶುಕ್ರವಾರ ಕೊಡುಗೆಯಾಗಿ ನೀಡಿದ್ದಾರೆ.

ಸನ್ಮಾನ : ಶಾಲೆಯ ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ-ರಕ್ಷಕರ ಸಂಘ ವತಿಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ, ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಈ ವರೆಗೆ ದಾಖಲೆಯ 42 ಪದಕಗಳನ್ನು ಗಳಿಸಿಕೊಂಡಿರುವ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Tap to resize

Latest Videos

ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಂಕಿತ ರೋಗಿಗೆ ಕೊರೋನಾ ಇಲ್ಲ

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂಬಳ ವೀರ ಎಲ್ಲರಿಗೂ ಶಿಕ್ಷಣ ಅಗತ್ಯವಾಗಿ ಬೇಕು. ವಿದ್ಯಾಭ್ಯಾಸವಿಲ್ಲದಿದ್ದರೆ ಮುಂದೆ ಅದರಿಂದ ನಮಗೆ ತೊಂದರೆಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯೆ ಪಡೆದು ಸಾಧನೆಯನ್ನು ಮಾಡುವ ಮೂಲಕ ಉನ್ನತ ಮಟ್ಟಕ್ಕೇರಬೇಕು ಎಂದು ಸಲಹೆ ನೀಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಬೆಳುವಾಯಿ ಗ್ರಾ. ಪಂ. ಸದಸ್ಯೆ ಸುಶೀಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್‌ ಜೈನ್‌, ಕಾರ್ಯದರ್ಶಿ ಪ್ರವೀಣ್‌ ಭಂಡಾರಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸ್ನೇಹಲತಾ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ನಾರಾಯಣ ಕೋಟ್ಯಾನ್‌, ಕ್ರೀಡಾ ತರಬೇತುದಾರ ರಘು ಕೆಸರ್‌ಗದ್ದೆ ಅತಿಥಿಗಳಾಗಿ ಭಾಗವಹಿಸಿದ್ದರು.

ಕಂಬಳ ವೀರ ಶ್ರೀನಿವಾಸ್ ಗೌಡ ಸೆಲ್ಫಿಗೆ ಹೇಗ್ ಪೋಸ್ ಕೊಡ್ತಾರೆ ನೋಡಿ..!

ವಿದ್ಯಾರ್ಥಿನಿ ಪ್ರತೀಕ್ಷಾ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ರಾಜಶ್ರೀ ನಾಯಕ್‌ ಶಾಲಾ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ಸಪ್ನಾ ಮತ್ತು ರಿತಿಕಾ ಅನಿಸಿಕೆ ಹಂಚಿಕೊಂಡರು. ಶೋಭಾ ಕಾರ್ಯಕ್ರಮ ನಿರೂಪಿಸಿದರು.

click me!