ಯಶವಂತಪುರ-ಗೋವಾ ರೈಲು ಆರಂಭ : ಇಲ್ಲಿದೆ ಒಂದು ವಿಶೇಷತೆ !

By Kannadaprabha NewsFirst Published Mar 8, 2020, 9:07 AM IST
Highlights

ಯಶವಂತಪುರ - ಗೋವಾ ನಡುವೆ ನೇರ ರೈಲು ಆರಂಭವಾಗಿದೆ. ದಶಕಗಳ ಬೇಡಿಕೆ ಈ ಮೂಲಕ ಈಡೇರಿದಂತಾಗಿದೆ. ಆದರೆ ಇಲ್ಲೊಂದು ವಿಶೇಷತೆ ಇದೆ. 

ಬೆಂಗಳೂರು [ಮಾ.08] :  ಕರಾವಳಿ ಜನರ ಬಹುದಿನಗಳ ಕನಸಾಗಿದ್ದ ಯಶವಂತಪುರ-ಕಾರವಾರ-ವಾಸ್ಕೋ (ಗೋವಾ) ನಡುವೆ ನೇರವಾಗಿ ಸಂಚರಿಸುವ ‘ಯಶವಂತಪುರ-ವಾಸ್ಕೋಡಗಾಮ’ ನೂತನ ಎಕ್ಸ್‌ಪ್ರೆಸ್‌ ರೈಲು ಶನಿವಾರದಿಂದ ಸಂಚಾರ ಆರಂಭಿಸಿತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ಸಂಸದೆ ಶೋಭಾ ಕರಂದ್ಲಾಜೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಈ ಹೊಸ ರೈಲು ಗಾಡಿಗೆ (ನಂ.06587/06588) ಹಸಿರು ನಿಶಾನೆ ತೋರಿದರು. ನಿತ್ಯವೂ ಸಂಚರಿಸುವ ಈ ರೈಲು ಗಾಡಿ ಆರಂಭದಿಂದ ಕಾರವಾರ ಜನರ 13 ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ಗೋವಾಗೆ ಯಶವಂತಪುರದಿಂದ ಡೈರೆಕ್ಟ್‌ ಟ್ರೈನ್, ಇಲ್ಲಿವೆ ಫೋಟೋಸ್...
 
ಇದೇ ವೇಳೆ ಯಶವಂತಪುರ-ವಿಜಯಪುರ-ಯಶವಂತಪುರ ರೈಲನ್ನು ಎಲ್‌ಎಚ್‌ಬಿ (ಲಿಂಕ್‌ ಹಾಫ್ಮಲ್‌ ಬುಷ್‌) ಕೋಚ್‌ಗಳಾಗಿ ಪರಿವರ್ತಿಸುವ ಕಾರ್ಯಕ್ಕೂ ಗಣ್ಯರು ಚಾಲನೆ ನೀಡಿದರು.

ಬೆಂಗಳೂರು-ಗೋವಾ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಎಲ್ಲೆಲ್ಲಿ..?..

ರೈಲು ಚಲಾಯಿಸಿದ್ದು ಮಹಿಳೆಯರು :   ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಆರಂಭಗೊಂಡ ಯಶವಂತಪುರ-ವಾಸ್ಕೋಡಗಾಮ ರೈಲು ಗಾಡಿಯನ್ನು ಮಹಿಳಾ ಲೋಕೋಪೈಲೆಟ್‌ಗಳಾದ ಅಭಿರಾಮಿ ಮತ್ತು ಬಾಲಾಶಿವ ಪಾರ್ವತಿ ಅವರು ಚಾಲನೆಗೊಳಿಸಿದ್ದು ವಿಶೇಷವಾಗಿತ್ತು.

click me!