‘ಜನರ ದೂರಿಗೆ ಸ್ಪಂದಿಸದ ಪೊಲೀಸರ ವಿರುದ್ಧ ಕ್ರಮ’

Kannadaprabha News   | Asianet News
Published : Sep 26, 2021, 07:24 AM IST
‘ಜನರ ದೂರಿಗೆ ಸ್ಪಂದಿಸದ ಪೊಲೀಸರ ವಿರುದ್ಧ ಕ್ರಮ’

ಸಾರಾಂಶ

ಠಾಣೆಗಳಿಗೆ ಮಧ್ಯವರ್ತಿಗಳ ನೆರವಿಲ್ಲದೆ ಮುಕ್ತವಾಗಿ ಬಂದು ಜನರು ದೂರು ಕೊಡಬೇಕು.  ದೂರಿಗೆ ಸ್ಥಳೀಯ ಪೊಲೀಸರು ಸ್ಪಂದಿಸದಿದ್ದರೆ, ಈ ಬಗ್ಗೆ ಮಾಹಿತಿ ನೀಡಿದರೆ ಕ್ರಮ 

ಕನ್ನಡಪ್ರಭ ವಾರ್ತೆ  (ಸೆ.26): ಠಾಣೆಗಳಿಗೆ ಮಧ್ಯವರ್ತಿಗಳ ನೆರವಿಲ್ಲದೆ ಮುಕ್ತವಾಗಿ ಬಂದು ಜನರು ದೂರು ಕೊಡಬೇಕು. ದೂರಿಗೆ ಸ್ಥಳೀಯ ಪೊಲೀಸರು (police) ಸ್ಪಂದಿಸದಿದ್ದರೆ, ಈ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಜರುಗಿಸುವುದಾಗಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಭರವಸೆ ನೀಡಿದ್ದಾರೆ.

ಕೋರಮಂಗಲ ಠಾಣೆ ಪೊಲೀಸರು ಶನಿವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಪೊಲೀಸ್‌ ಠಾಣೆಗಳಲ್ಲಿ (station) ಜನ ಸ್ನೇಹಿ ಆಡಳಿತ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಕಾನೂನುಬಾಹಿರ ಕೃತ್ಯಗಳ ನಿಯಂತ್ರಣಕ್ಕೆ ಪೊಲೀಸರ ಜತೆ ನಾಗರಿಕರ ಸಹಕಾರ ಅಗತ್ಯವಿದೆ. ಠಾಣೆಗಳಿಗೆ ದೂರು ಕೊಡಲು ಅಥವಾ ಯಾವುದೇ ಕೆಲಸಗಳಿಗೆ ಮಧ್ಯವರ್ತಿಗಳನ್ನು ಜನರು ಆಶ್ರಯಿಸಬಾರದು. ಮಧ್ಯವರ್ತಿಗಳ ವ್ಯವಸ್ಥೆಯನ್ನು ಸಹಿಸುವುದಿಲ್ಲ. ಪೊಲೀಸರು ದಕ್ಷವಾಗಿದ್ದಾರೆ. ಜನರ ಸೇವೆಗೆ ಮುಕ್ತವಾಗಿದ್ದಾರೆ ಎಂದು ಆಯುಕ್ತರು ತಿಳಿಸಿದರು.

ಟ್ರಾಫಿಕ್ ಪೊಲೀಸರು ಈ ನಿಯಮಗಳ ಪ್ರಕಾರ ವಾಹನಗಳನ್ನ ಟೋಯಿಂಗ್ ಮಾಡ್ಬೇಕು!

ರಕ್ಷಣೆ ಕೋರಿದ ರೌಡಿ ಅತ್ತೆ: ಬೆಂಗಳೂರು: ಇತ್ತೀಚೆಗೆ ಬ್ಯಾಂಕ್‌ನಲ್ಲಿ ಭೀಕರವಾಗಿ ಹತ್ಯೆಗೀಡಾದ ರೌಡಿ ಜೋಸೆಫ್‌ ಅಲಿಯಾಸ್‌ ಬಬ್ಲಿ ಕುಟುಂಬಕ್ಕೆ ರಕ್ಷಣೆ ಕೋರಿ ಆಯುಕ್ತರಿಗೆ ಮೃತನ ಅತ್ತೆ ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿದ ಆಯುಕ್ತರು, ನಿಮಗೆ ತೊಂದರೆ ಉಂಟಾಗದಂತೆ ಎಚ್ಚರಿಕೆವಹಿಸುತ್ತೇವೆ ಎಂದರು. ಸಭೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಮಹದೇವ ಜೋಶಿ, ಎಸಿಪಿ ಸುಧಾಕರ್‌ ಹೆಗ್ಡೆ ಹಾಗೂ ಇನ್ಸ್‌ಪೆಕ್ಟರ್‌ ರವಿ ಉಪಸ್ಥಿತರಿದ್ದರು.

ಇನ್ನು ಟೋಯಿಮಗ್‌ಗು ಕೆಲ ನಿಯಮ ವಿಧಿಸಲಾಗಿದೆ.

ಪೊಲೀಸ್ರು ಅನುಸರಿಸಬೇಕಾದ ಟೋಯಿಂಗ್ ನಿಯಮಗಳು
* ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು
* ಓರ್ವ ಎಎಸ್‌ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು.
* ಟೋಯಿಂಗ್ ಆಪರೇಷನ್​ಗೂ ಮುನ್ನ ಮೈಕ್ ಮೂಲಕ ಅನೌನ್ಸ್ ಮಾಡಬೇಕು.
* ವಾಹನದ ನಾಲ್ಕೂ ಭಾಗದಿಂದ ಫೋಟೋ ಕ್ಲಿಕ್ಕಿಸಬೇಕು.
* ಟೋಯಿಂಗ್ ಮಾಡುವ ಮುನ್ನವೇ ಮಾಲೀಕ ಬಂದ್ರೆ ನೋ ಪಾರ್ಕಿಂಗಿಗೆ ದಂಡ ವಿಧಿಸಬೇಕು.
* ಟೋಯಿಂಗ್ ವಾಹನಕ್ಕೆ ಹಾಕಿದ ಬಳಿಕ ಬಂದ್ರೆ ಟೋಯಿಂಗ್ ಚಾರ್ಜ್ ಪಾವತಿಸಬೇಕು.
*ಟೋಯಿಂಗ್ ಮಾಡಿದ ವಾಹನಗಳನ್ನ ನಿಲ್ಲಿಸುವ ಜಾಗದಲ್ಲಿ ಸಂಚಾರಿ ಸಿಬ್ಬಂದಿ ಇರಬೇಕು.

 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC