ವಾಹನ ಸವಾರರೇ ಕುಡಿದು ರಸ್ತೆಗಿಳಿಯುವ ಮುನ್ನ ಎಚ್ಚರ: ಡ್ರಂಕ್‌ & ಡ್ರೈವ್‌ ತಪಾಸಣೆ ಶುರು

By Suvarna NewsFirst Published Sep 25, 2021, 8:00 PM IST
Highlights

* ಬೆಂಗಳೂರಿನಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ  ಶುರು
* ಒಂದೂವರೆ ವರ್ಷದ ಬಳಿಕ ಡ್ರಂಕ್ ಅಂಡ್ ಡ್ರೈವ್ ತಪಾಸಣೆ 
* ಕೊರೋನಾ ಕಾರಣದಿಂದಾಗಿ ಒಂದೂವರೆ ವರ್ಷ ಡ್ರಂಕ್ ಅಂಡ್ ಡ್ರೈವ್ ಸ್ಥಗಿತಗೊಳಿಸಲಾಗಿತ್ತು

ಬೆಂಗಳೂರು, (ಸೆ.25): ಒಂದೂವರೆ ವರ್ಷದ ಬಳಿಕ ಬೆಂಗಳೂರಿನಲ್ಲಿ ಇಂದಿನಿಂದ (ಸೆ.25) ಡ್ರಂಕ್ ಅಂಡ್ ಡ್ರೈವ್ (drunk and drive) ತಪಾಸಣೆ ಮಾಡಲಾಗುತ್ತದೆ. ಈ ಬಗ್ಗೆ  ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಖಚಿತಪಡಿಸಿದ್ದಾರೆ.

ಕೊರೋನಾ (Covid19) ಕಾರಣದಿಂದಾಗಿ ಒಂದೂವರೆ ವರ್ಷ ಡ್ರಂಕ್ ಅಂಡ್ ಡ್ರೈವ್ ಸ್ಥಗಿತಗೊಳಿಸಲಾಗಿತ್ತು. ಶನಿವಾರ ರಾತ್ರಿಯಿಂದಲೇ ರಸ್ತೆಗಿಳಿದು ಪೊಲೀಸರು ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಲಿದ್ದಾರೆ.

ಬ್ರಿಟನ್ ವಿರುದ್ಧ ಗರಂ ಆದ ಭಾರತ, ಇಂಧನ ಬೆಲೆ ಏರಿಕೆ ಆತಂಕ; ಸೆ.25ರ ಟಾಪ್ 10 ಸುದ್ದಿ!

ಇನ್ನು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ರವಿಕಾಂತೇಗೌಡ , ಇಷ್ಟು ದಿನ ಆಸ್ಪತ್ರೆಗೆ ಕರ್ಕೊಂಡು ಹೋಗಿ ತಪಾಸಣೆ ಮಾಡಲಾಗ್ತಾ ಇತ್ತು. ಶುಕ್ರವಾರ, ಶನಿವಾರ ಹಾಗೂ ಭಾನುವಾರ‌ ರಾತ್ರಿ ತಪಾಸಣೆ ಮಾಡಲಾಗುತ್ತದೆ. ಪ್ರತಿಯೊಂದು ಆಲ್ಕೋ‌ಮೀಟರ್ ನ ಈಗಾಗಲೇ ಸ್ಯಾನಿಟೈಸ್ (sanitize) ಮಾಡಲಾಗಿದೆ ಎಂದರು.

ಒಂದು ಠಾಣೆಗೆ 10 ಆಲ್ಕೋ‌ಮೀಟರ್ ಗಳನ್ನು ಕೊಡಲಾಗುತ್ತೆ. ಒಟ್ಟು ನಗರದಲ್ಲಿ 44 ಸಂಚಾರಿ ಪೊಲೀಸ್ ಸ್ಟೇಷನ್ ಗಳಿವೆ. ತಪಾಸಣೆ ವೇಳೆ ಪೊಲೀಸರು ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿ ಹಾಕಬೇಕು. ಹಾಲ್ಕೋ ಮೀಟರ್ ನಲ್ಲಿ ಶೇ 30 ರಷ್ಟು ಬಂದ್ರೆ ವಾಹನಗಳನ್ನು ಜಪ್ತಿ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

ಪ್ರತಿ ಠಾಣೆಗೆ ತಲಾ 10 ಅಲ್ಕೋಮೀಟರ್ ನೀಡಲಾಗಿದೆ. ತಜ್ಞರ ಸಲಹೆಯಂತೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಿದ್ದು, ಇತ್ತೀಚೆಗೆ ಕೆಲವು ಅಪಘಾತಗಳು ನಡೆದಿರುವುದನ್ನು ಗಮನಿಸಲಾಗಿದೆ. ಅಲ್ಲದೇ, ದೇಶದ ಕೆಲವು ನಗರಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ಶುರು ಮಾಡಲಾಗಿದೆ. ಇಲ್ಲಿಯೂ ತಜ್ಞರ ಸಲಹೆ ಪಡೆದು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಿದ್ದು, ಅನುಮಾನಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.

click me!