Kalyana Karnataka Utsav 2023: ಫೆ.24ರಿಂದ ನಡೆಯುವ ಉತ್ಸವದಲ್ಲಿ ಕೇಂದ್ರ-ರಾಜ್ಯದ ಗಣ್ಯರು ಭಾಗಿ

By Suvarna News  |  First Published Feb 16, 2023, 7:46 PM IST

ಫೆಬ್ರವರಿ 24 ರಿಂದ‌ 26 ರವರೆಗೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ ಅವರಣದಲ್ಲಿ ಆಯೋಜಿಸಿರುವ ಮೂರು ದಿನಗಳ "ಕಲ್ಯಾಣ‌ ಕರ್ನಾಟಕ ಉತ್ಸವ"‌ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ ‌ಮತ್ತು ರಾಜ್ಯ ಸಚಿವರು ಭಾಗವಹಿಸಲಿದ್ದಾರೆ.


ಕಲಬುರಗಿ (ಫೆ.16): ಇದೇ ಫೆಬ್ರವರಿ 24 ರಿಂದ‌ 26 ರವರೆಗೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ ಅವರಣದಲ್ಲಿ ಆಯೋಜಿಸಿರುವ ಮೂರು ದಿನಗಳ "ಕಲ್ಯಾಣ‌ ಕರ್ನಾಟಕ ಉತ್ಸವ"‌ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ ‌ಮತ್ತು ರಾಜ್ಯ ಸಚಿವರು ಆಗಮಿಸಲಿದ್ದಾರೆ ಎಂದು‌ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ‌ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ಪೋಸ್ಟರ್, ಲಾಂಛನ, ಪ್ರೋಮೋ, ವೆಬ್ ಸೈಟ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇಂದ್ರ ಸಚಿವ ಭಗವಂತ ಖೂಬಾ ಬರಲಿದ್ದು, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಆಹ್ವಾನಿಸಿದ್ದೇವೆ ಎಂದರು.

ಅಮೃತ‌ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಲು ಮತ್ತು ಪ್ರದೇಶದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಸಿರಿವಂತಿಕೆ, ಜನಪದ, ಇತಿಹಾಸ ಪರಿಚಯಿಸಲು ಫೆಬ್ರವರಿ 24 ರಂದು ಮಂಡಳಿಯಿಂದ ಗುಲಬರ್ಗಾ ವಿ.ವಿ. ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.

Tap to resize

Latest Videos

undefined

ಉತ್ಸವದ ಅಂಗವಾಗಿ ಪ್ರಮುಖ ಮೂರು ವೇದಿಕೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಖ್ಯಾತ ಕಲಾವಿದರಿಂದ ಸಂಗೀತ ರಸಮಂಜರಿ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ, ಗಾಳಿಪಟ ಉತ್ಸವ, ಮಕ್ಕಳ ಉತ್ಸವ, ಮಹಿಳಾ ಉತ್ಸವ, ಶಿಲ್ಪಕಲೆ ಶಿಬಿರ, ಕಲಾ ಶಿಬಿರ, ವಸ್ತು ಪ್ರದರ್ಶನ, ಪರಂಪರೆ, ಜೀವ‌ ವೈವಿಧ್ಯತೆ ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಸಿರಿಧಾನ್ಯಗಳ ಮೇಳ, ಹಾಟ್ ಏರ್ ಬಲೂನ್ ಇರಲಿವೆ‌. ಜೊತೆಗೆ ಸರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಯ ಇಲಾಖಾ ಮಳಿಗೆಗಳನ್ನು ಸಹ ಹಾಕಲಾಗುತ್ತಿದೆ ಎಂದು ವಿವರಿಸಿದರು.‌

ಕಲ್ಯಾಣ‌ ಕರ್ನಾಟಕ ಭಾಗವು ಶರಣರ ನಾಡಾಗಿರುವುದರಿಂದ ಈ ಭಾಗದ ಸಾಹಿತಿ, ಕವಿಗಳು, ವಚನಗಾರರಿಗೆ ವೈವಿಧ್ಯಮಯ ಪರಂಪರೆಯ ವೇದಿಕೆ ಕಲ್ಪಿಸಲು " ಕಲ್ಯಾಣ ದರ್ಶನ" ಎಂಬ ಶೀರ್ಷಿಕೆಯಡಿಯಲ್ಲಿ ಕವಿ ಗೋಷ್ಟಿ ಆಯೋಜಿಸಿದೆ ಎಂದು ಉತ್ಸವದ ಕುರಿತು ದತ್ತಾತ್ರೇಯ ಪಾಟೀಲ ರೇವೂರು ವಿವರಿಸಿದರು.

ಅಪ್ಪನ ಕೆರೆಯಲ್ಲಿ ಬೋಟಿಂಗ್, ಏರ್ ಪೋರ್ಟ್ ನಲ್ಲಿ ಹೆಲಿರೈಡ್:
ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಅಪ್ಪನ ಕೆರೆಯಲ್ಲಿ ಬೋಟಿಂಗ್ ಸೇರಿದಂತೆ ಜಲ ಕ್ರೀಡೆ  ಆಯೋಜಿಸಲಾಗುತ್ತಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹೆಲಿ ರೈಡ್, ಪ್ಯಾರಾ ಮೋಟರಿಂಗ್  ಆಯೋಜಿಸಿದ್ದು, ಇದಕ್ಕಾಗಿ ಎ.ಎ.ಐ.ನವರಿಗೆ ಸಾರ್ವಜನಿಕರು ಭಾಗವಹಿಸಲು ವಿಶೇಷ ಅನುಮತಿ ಪಡೆಯಲಾಗುತ್ತದೆ. ಇದಲ್ಲದೆ‌ ಗುಲಬರ್ಗಾ‌ ವಿ.ವಿ ಆವರಣದಲ್ಲಿ ಸಾಹಸ ಕ್ರೀಡೆಗಳಾದ ಜಿಪ್ ಲೈನಿಂಗ್, ರೆಪಲ್ಲಿಂಗ್, ವಾಲ್‌ ಕ್ಲೈಂಬಿಂಗ್ ಇರಲಿದೆ ಎಂದರು.

2023 ರ ಈಶ ಮಹಾಶಿವರಾತ್ರಿಗೆ ಸಿದ್ಧರಾಗಿ..! ಫೆಬ್ರವರಿ 18 ರಂದು ನಡೆಯಲಿರುವ ಪ್ರಮುಖ ಉತ್ಸವಗಳು ಹೀಗಿದೆ..

ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಮಾತನಾಡಿ, ಉತ್ಸವದ ಸಂಪೂರ್ಣ ಮಾಹಿತಿ ಪ್ರದೇಶದ ಜನರಿಗೆ ತಿಳಿಯಲೆಂದೆ kalyankarnataka.utsav.com ವೆಬ್ ಸೈಟ್ ಇಂದು ಬಿಡುಗಡೆ ಮಾಡಿದ್ದು, ಉತ್ಸವದ ಸಂಪೂರ್ಣ ಮಾಹಿತಿ ಇದರಲ್ಲಿ ಸಿಗಲಿದೆ ಎಂದರು.

Kalyana Karnataka Utsava: ಕಲಬುರಗಿಯಲ್ಲಿ ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನಗಳ ಉತ್ಸವ

ಕಲಬುರಗಿ‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಕೆ..ಕೆ.ಆರ್.ಟಿ.ಸಿ. ಎಂ.ಡಿ. ಎಂ.ರಾಚಪ್ಪ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಮಂಡಳಿ ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಜಂಟಿ ನಿರ್ದೇಶಕಿ ಪ್ರವೀಣಪ್ರಿಯಾ ಸೇರಿದಂತೆ ಉತ್ಸವದ ವಿವಿಧ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು ಇದ್ದರು.

click me!