ಹೊರ ರೋಗಿಗಳ ಸಮಸ್ಯೆ ನೀಗಿಸಲು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಡಿಜಿಟಲ್ ಓಪಿಡಿ ವ್ಯವಸ್ಥೆ

By Suvarna News  |  First Published Feb 16, 2023, 6:15 PM IST

ಸರ್ಕಾರಿ ಜಿಲ್ಲಾಸ್ಪತ್ರೆ ಅಂದ್ರೆ ಜಾನುವಾರುಗಳ ದೊಡ್ಡಿ, ಅಲ್ಲಿಗೆ ಹೋದ್ರೆ ಬೇಗ ಚಿಕಿತ್ಸೆ ಸಿಗೋಕೆ ಮೂರು ದಿನಗಳಾಗುತ್ತೆ ಅನ್ನೋ ಮಾತೊಂದಿದೆ. ಆದ್ರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿರುವ ವಿನೂತನ ಪ್ರಯೋಗ ರೋಗಿಗಳಿಗೆ ಜನಸ್ನೇಹಿಯಾಗಿದೆ. 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.16): ಸರ್ಕಾರಿ ಜಿಲ್ಲಾಸ್ಪತ್ರೆ ಅಂದ್ರೆ ಜಾನುವಾರುಗಳ ದೊಡ್ಡಿ, ಅಲ್ಲಿಗೆ ಹೋದ್ರೆ ಬೇಗ ಚಿಕಿತ್ಸೆ ಸಿಗೋಕೆ ಮೂರು ದಿನಗಳಾಗುತ್ತೆ ಅನ್ನೋ ಮಾತೊಂದಿದೆ. ಆದ್ರೆ ಇಲ್ಲೊಂದು  ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿರುವ ವಿನೂತನ ಪ್ರಯೋಗ ರೋಗಿಗಳಿಗೆ ಜನಸ್ನೇಹಿಯಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ ಆರು ತಾಲೂಕುಗಳ ರೋಗಿಗಳ ಪಾಲಿಗೆ  ಬೃಹತ್ ಆಸ್ಪತ್ರೆ ಎಂದೇ‌‌ ಪ್ರಖ್ಯಾತಿಯಾಗಿದೆ. ಉಚಿತ ಸರ್ಜರಿ, ಹೆರಿಗೆ ಹಾಗೂ ಎಂಆರ್ ಐ ಸೇರಿದಂತೆ ಸಿಟಿಸ್ಕ್ಯಾನಿಂಗ್ ಗಾಗಿ ಜಿಲ್ಲೆಯ ಎಲ್ಲಾ ರೋಗಿಗಳು ಈ ಜಿಲ್ಲಾಸ್ಪತ್ರೆಗೆ ಬರ್ತಾರೆ. ಹೀಗಾಗಿ ನಿತ್ಯವೂ ಜನ ಜಂಗುಳಿದ ಜಿಲ್ಲಾಸ್ಪತ್ರೆ‌ ಭರ್ತಿಯಾಗಿರಲಿದ್ದು, ಒಂದು‌ ಓಪಿಡಿ‌ ಚೀಟಿ ಪಡೆಯಲು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ‌ ನಿಲ್ಲಬೇಕಿತ್ತು. ಆದ್ರೆ ಈಗ ಚಿತ್ರದುರ್ಗ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಆರಂಭಿಸಿರುವ ಬಾರ್ ಕೋಡ್ ಸ್ಕ್ಯಾನರ್ ನಿಂದಾಗಿ ಕ್ಷಣ ಮಾತ್ರದಲ್ಲಿ ರೋಗಿಗಳು ಓಪಿಡಿ ಚೀಟಿ ಪಡೆಯ ಬಹುದಾಗಿದೆ. ಕಡಿಮೆ ಅವಧಿಯಲ್ಲೇ ವೈದ್ಯರಿಗೆ ತಮ್ಮ‌ ಸಮಸ್ಯೆ ತಿಳಿಸಿ ಚಿಕಿತ್ಸೆ ಪಡೆಯಲು ಈ ಡಿಜಿಟಲ್ ಓಪಿಡಿ ಸಹಕಾರಿಯಾಗಿದೆ ಅಂತ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Latest Videos

undefined

ನೀರು ತುಂಬಿದ ವಾಶಿಂಗ್ ಮಶೀನ್‌ನಲ್ಲಿ ಬಿದ್ದು 15 ನಿಮಿಷ ಒದ್ದಾಡಿದ ಮಗು, 1 ತಿಂಗಳ ಚಿಕಿತ್ಸೆ ಬಳಿಕ ಚೇತರಿಕೆ!

ಇನ್ನೂ ಡಿಜಿಟಲ್ ಓಪಿಡಿ ವ್ಯವಸ್ಥೆಯಲ್ಲಿ‌ ರೋಗಿಯ ಮೊಬೈಲ್ ನಿಂದ ಅಲ್ಲಿನ ಬಾರ್ ಕೋಡ್ ಸ್ಕ್ಯಾನ್ ಮಾಡಿದ್ರೆ, ಆ  ರೋಗಿಯ ವೈಯುಕ್ತಿಕ ವಿವರ ಹಾಗೂ  ಕುಟುಂಬದ ಸದಸ್ಯರ ಸಂಪೂರ್ಣ ವಿವರ ಸಿಗಲಿದೆ. ಅಲ್ಲದೇ  ರೋಗಿಯಲ್ಲಿನ ಸಮಸ್ಯೆ ಹಾಗು ಅಗತ್ಯ ಮಾಹಿತಿ ಸೇವ್ ಆಗಲಿದೆ. ಇದನ್ನು ಒಮ್ಮೆ ಸೇವ್ ಮಾಡಿದ್ರೆ, ಶಾಶ್ವತವಾಗಿರಲಿದ್ದು, ಜಿಲ್ಲಾಸ್ಪತ್ರೆಗೆ ಆ ರೋಗಿಯು ಯಾವುದೇ ಚಿಕಿತ್ಸೆಗೆ ರೋಗಿಗಳು ಬಂದರೂ, ಸುಲಭವಾಗಿ  ಎಲ್ಲಾ ದಾಖಲೆಗಳು ಈ ಡಿಜಿಟಲ್ ಓಪಿಡಿಯಲ್ಲಿ ದೊರಕಿಸಲು‌ ಈ ತಂತ್ರಜ್ಞಾನ ಅನುಕೂಲವಾಗಿದೆ. ಈ ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ಬರುವ ರೋಗಿಗಳು ಓಪಿಡಿ ಚೀಟಿ ಪಡೆಯಲು ಸಮಸ್ಯೆ ಅನುಭವಿಸುತ್ತಿದ್ದರು. ಅದನ್ನು ತಗ್ಗಿಸಲೆಂದೇ ಈ ವ್ಯವಸ್ಥೆ ರಾಜ್ಯದಲ್ಲಿ ತರಲಾಗಿದೆ ಅಂತಾರೆ   ಜಿಲ್ಲಾಸ್ಪತ್ರೆ ಸರ್ಜನ್.

ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ಇರೋ ವ್ಯವಸ್ಥೆ ಮೈಸೂರಲ್ಲೂ ಇದೆ-ಡಾ.ಸಿ.ಎನ್ ಮಂಜುನಾಥ್‌

ಒಟ್ಟಾರೆ ಯಾಂತ್ರಿಕ ಯುಗದಲ್ಲಿ ಓಪಿಡಿ‌ ಚೀಟಿ‌ ಸಹ ಡಿಜಿಟಲೀಕರಣವಾಗಿದೆ. ಹೀಗಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರೋಗಿಗಳ ಪಾಲಿಗೆ ಡಿಜಿಟಲ್ ಓಪಿಡಿ‌ ವರವಾಗಿದ್ದು, ಬಾರಿ ಜನ ಮನ್ನಣೆ ಗಳಿಸಿದೆ.

click me!