ಕಲ್ಯಾಣ ಕರ್ನಾಟಕದಲ್ಲಿ ಎರಡನೇ Forensic Science Laboratory ಕೇಂದ್ರ ಸ್ಥಾಪನೆ

By Suvarna News  |  First Published May 3, 2022, 3:55 PM IST
  • ಇನ್ಮುಂದೆ ಶೀಘ್ರದಲ್ಲಿ ಕೈ ಸೇರಲಿದೆ ಎಫ್ಎಸ್ ಎಲ್ ವರದಿ
  • ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದ ಅಮಿತ್ ಶಾ
  • ಇನ್ಮುಂದೆ ತ್ವರಿತವಾಗಿ ಕೈ ಸೇರಲಿವೆ ಫೊರೇನ್ಸಿಕ್ ವರದಿಗಳು

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಳ್ಳಾರಿ(ಮೇ.3): ವಿಧಿ ವಿಜ್ಞಾನ ಪ್ರಯೋಗಾಲಯ (FSL -Forensic Science Laboratory) ವರದಿಗಾಗಿ ಕಲಬುರಗಿ (Kalaburagi), ಬೆಂಗಳೂರು, ಹೈದ್ರಾಬಾದ್ ಗೆ ಓಡಾಡೋ ಕಾಲ‌ ಮುಗಿತು. ಲ್ಯಾಬ್ ರಿಪೋರ್ಟ್ ಗಾಗಿ ತಿಂಗಳುಗಳು ಗಟ್ಟಲೇ ಕಾಯೋ ಕೆಲಸವೇ ಇಲ್ಲ. ಇನ್ನೇನಿದ್ರೂ ವಾರದಲ್ಲಿಯೇ ವರದಿ ನಿಮ್ಮ ‌ಕೈ ಸೇರಲಿದೆ. ಹೌದು ಬಳ್ಳಾರಿಯಲ್ಲಿಂದು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ವರ್ಚ್ಯುವಲ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಉದ್ಘಾಟನೆ ಮಾಡಿದ್ದಾರೆ. ಈ‌ ಮೂಲಕ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ಪೊಲೀಸರು ಫೋರೆನ್ಸಿಕ್ ರಿಪೋರ್ಟ್ (Forensic Report) ಗಾಗಿ ದೂರದ ಊರುಗಳಿಗೆ ಅಲೆದಾಡೋದು ತಪ್ಪಿದಂತಾಗಿದೆ. 

Tap to resize

Latest Videos

undefined

ಕಲಬುರಗಿಯೇ ಆಧಾರವಾಗಿತ್ತು. ಇದುವರೆಗೂ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಜನರು ಫೋರೆನ್ಸಿಕ್ ಸೈನ್ಸ್  ವರದಿಗಾಗಿ ಸಂಪೂರ್ಣವಾಗಿ ಕಲಬುರಗಿಯಲ್ಲಿರೋ ಲ್ಯಾಬ್ ಮೇಲೆ ಹೆಚ್ಚು ಅವಲಂಬನೆಯಾಗಿರಬೇಕಿತ್ತು. ಕಲಬುರಗಿ ಲ್ಯಾಬ್ ನಲ್ಲಿರುವ ಒತ್ತಡದಿಂದ ಕನಿಷ್ಠವೆಂದ್ರೂ‌‌ ಪ್ರಕರಣದ ವರದಿಗಳಿಗಾಗಿ ಎರಡು ತಿಂಗಳು ಕಾಯುವ ಸ್ಥಿತಿ ಇತ್ತು. ಕೆಲ ಪ್ರಕರಣದಲ್ಲಿ ಬೇಗ ವರದಿ ಬೇಕಿದ್ದಲ್ಲಿ ಹೈದ್ರಾಬಾದ್ ಬೆಂಗಳೂರು ಸೇರಿದಂತೆ ಇತರೆ ದೂರದ ಊರಿಗೆ ಹೋಗೋ ಅನಿವಾರ್ಯ ಇತ್ತು. ಆದ್ರೇ, ಬಳ್ಳಾರಿಯಲ್ಲಿ ‌ಇದೀಗ ಲ್ಯಾಬ್ ನಿರ್ಮಾಣದಿಂದ‌ ಕಲಬುರಗಿ ಎಫ್ಎಸ್ಎಲ್ ಕೇಂದ್ರದ ಮೇಲಿದ್ದ ಒತ್ತಡ ಕಡಿಮೆಯಾಗಲಿದೆ ಅಲ್ಲದೇ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ  ಫೋರೆನ್ಸಿಕ್ ವರದಿಗಳು ಬೇಗನೇ ಲಭ್ಯವಾಗಲಿದ್ದು ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

Gadag ಎರಡು ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ಬೀರಲಿಂಗನ ಜಾತ್ರೆ

ಬಹುದಿನಗಳ ಪ್ರಯತ್ನಕ್ಕೆ ಸಿಕ್ಕ ಫಲ: ಇನ್ನೂ  ಲ್ಯಾಬ್ ನಿರ್ಮಾಣ ಕುರಿತಂತೆ ಬಳ್ಳಾರಿಯ ಪೊಲೀಸರು ‌ಬಹಳ ಶ್ರಮಪಟ್ಟಿದ್ದಾರೆ. ಲ್ಯಾಬ್ ನಿರ್ಮಾಣ ಕುರಿತು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸೋದ್ರ ಜೊತೆಗೆ ನಿರಂತರವಾಗಿ ನಡೆದ ಪ್ರಯತ್ನದಿಂದ ಇಂದು ಬಳ್ಳಾರಿಯಲ್ಲಿ ‌ಲ್ಯಾಬ್ ನಿರ್ಮಾಣವಾಗಿದೆ.  ಬಿಎಸ್ಎನ್ ಎಲ್ ಕಚೇರಿಯ ಆವರಣದಲ್ಲಿರುವ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಬೆಂಗಳೂರಿನಿಂದ ವರ್ಚುವಲ್ ಮೂಲಕ ಉದ್ಘಾಟಿಸಿದರು. ಇದರ ಜೊತೆಗೆ ಬೆಂಗಳೂರಿನಲ್ಲಿ ಪೊಲೀಸ್ ಗಸ್ತು ನಿರ್ವಹಣೆಗಾಗಿ ನವೀನ ತಂತ್ರಜ್ಞಾನದ ಸ್ಮಾರ್ಟ್ ಇ-ಬಿಟ್ ಗೆ ಚಾಲನೆ ನೀಡಿದ್ರು.  

ಎಸ್ಪಿ - ಡಿಸಿ ಯಿಂದ ಅಧಿಕೃತ ಪ್ರಾರಂಭಗೊಂಡ ಲ್ಯಾಬ್: ಇನ್ಮುಂದೆ ಎಫ್ಎಸ್ಎಲ್ ವರದಿ ಬೇಗ ಬರೋದ್ರಿಂದ ಪ್ರಕರಣಗಳಲ್ಲಿ ಅರೋಪಗಳ ದೃಢಪಡುವಿಕೆ ಪ್ರಮಾಣ ಹೆಚ್ಚಾಗಲಿದೆ. ಎಫ್ಎಸ್ಎಲ್ ಬಲಪಡಿಸಿದರೇ ಪೊಲೀಸರ ಸಾಕ್ಷ್ಯಾಧಾರಗಳು ಸ್ಟ್ರಾಂಗ್ ಆಗಲು ಮತ್ತು ಶಿಕ್ಷೆ ಪ್ರಮಾಣ ಹೆಚ್ಚಾಗಲು ಸಾಧ್ಯ ಮತ್ತು ಅಪರಾಧಗಳ ಪ್ರಮಾಣ ಕಡಿಮೆಯಾಗಲು ಸಹಕಾರಿಯಾಗಲಿದೆ ಎಂದು ‌ಜಿಲ್ಲಾಧಿಕಾರಿ ಪವನ್ ಮಾಲ್ಪಾಟಿ ಹೇಳಿದ್ರು.  ಅಲ್ಲದೇ ರಾಜ್ಯ ಸರ್ಕಾರ ಈ ಎಫ್ಎಸ್ಎಲ್ ಕೇಂದ್ರಕ್ಕೆ ವಿಜ್ಞಾನಿಗಳು, ಸಿಬ್ಬಂದಿ ಹಾಗೂ ಅಗತ್ಯ ಸೌಕರ್ಯ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು,ಇನ್ನೂ ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ಜಿಲ್ಲಾಡಳಿತ ಒದಗಿಸಲಿದೆ ಎಂದರು.

PROFESSOR RECRUITMENT SCAM ಪ್ರೊ. ನಾಗರಾಜ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ

ಎಸ್ಪಿ ಸೈದುಲು ಅಡಾವತ್ ಅವರು ಮಾತನಾಡಿ, ಇದುವರೆಗೆ ಒಂದು ವರದಿ ಬರಬೇಕಾದರೇ ಎರಡು ತಿಂಗಳಾಗುತ್ತಿತ್ತು. ಇನ್ಮೂಂದೆ ಹದಿನೈದು ದಿನಗಳಿಂದ ತಿಂಗಳೊಳಗೆ ವರದಿ ಕೈಸೇರಲಿದೆ. ಬಜೆಟ್ ನಲ್ಲಿ ಘೋಷಣೆಯಾದ ಎರಡು ತಿಂಗಳಲ್ಲಿಯೇ ಎಫ್ಎಸ್ಎಲ್ ಕೇಂದ್ರವನ್ನು ಬಳ್ಳಾರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಈಗಿನಿಂದಲೇ  ಈ ಲ್ಯಾಬ್ ಕಾರ್ಯನಿರ್ವಹಿಸಲಿದೆ.  ಎಲ್ಲ ಅಗತ್ಯ ಸಿಬ್ಬಂದಿ ಹಾಗೂ ಸೌಕರ್ಯಗಳನ್ನು ಸರ್ಕಾರ ಒದಗಿಸಿದೆ ಎಂದರು.

click me!