Vijayanagara: ಹೊಸಪೇಟೆಯಲ್ಲಿ ಕಲ್ಯಾಣ ಕರ್ನಾಟಕ ಪ್ರೊ ಕಬಡ್ಡಿ ಮ್ಯಾಚ್‌ಗಳ ಕಲರವ

By Govindaraj S  |  First Published Mar 3, 2023, 11:29 PM IST

ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರ ಮನವೊಲಿಸಲು ಜನಪ್ರತಿನಿಧಿಗಳು ನಾನಾ ಕಸರತ್ತು ಮಾಡ್ತಿದ್ದಾರೆ. ಬಳ್ಳಾರಿಯಲ್ಲಿ ಕುಕ್ಕರ್, ಸೀರೆ ಕೊಟ್ರೇ  ಹೊಸಪೇಟೆಯಲ್ಲಿ ಕ್ರಿಕೆಟ್ ಕಬಡ್ಡಿ, ಕ್ರೀಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಮಾಡ್ತಿದ್ದಾರೆ. 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯನಗರ

ವಿಜಯನಗರ (ಮಾ.03): ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರ ಮನವೊಲಿಸಲು ಜನಪ್ರತಿನಿಧಿಗಳು ನಾನಾ ಕಸರತ್ತು ಮಾಡ್ತಿದ್ದಾರೆ. ಬಳ್ಳಾರಿಯಲ್ಲಿ ಕುಕ್ಕರ್, ಸೀರೆ ಕೊಟ್ರೇ  ಹೊಸಪೇಟೆಯಲ್ಲಿ ಕ್ರಿಕೆಟ್ ಕಬಡ್ಡಿ, ಕ್ರೀಡೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಮಾಡ್ತಿದ್ದಾರೆ. ಮೂರು ಬಾರಿ ಬಿಜೆಪಿ ಮತ್ತು ಒಮ್ಮೆ ಕಾಂಗ್ರೆಸ್‌ನಿಂದ ಗೆದ್ದಿರೋ ಸಚಿವ ಅನಂದ ಸಿಂಗ್ ಕೂಡ ಇದಕ್ಕೆ ಹೊರತಾಗಿಲ್ಲ. ವಿಶೇಷವೆಂದ್ರೇ ಆನಂದ ಸಿಂಗ್ ಏನೇ ಮಾಡಿದ್ರು ತಾವು ನೇರವಾಗಿ ಮಾಡದೇ ತಮ್ಮ ಮಗ ಮುಖಾಂತರ ಮಾಡಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಮಗನನ್ನು ಕಣಕ್ಕೆ ಇಳಿಸ್ತಾರಾ ಅನ್ನೋ ಅನುಮಾನ ಕಾಡುತ್ತಿದೆ.

Tap to resize

Latest Videos

undefined

ಚುನಾವಣೆ ಗಿಮಿಕ್ಸ್ ಅಲ್ಲವೆನ್ನುತ್ತಲೇ ಎಲ್ಲವನ್ನೂ ಮಾಡ್ತಿರೋ ಜನಪ್ರತಿನಿಧಿಗಳು: ವಡಕರಾಯ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೂ ಬೃಹತ್ ಆಟಗಾರರ ಮೆರವಣಿಗೆ. ಕ್ರೀಡಾಂಗಣದ ತುಂಬೆಲ್ಲ  ಜನಸಾಗರ. ಯುವಕರ ಮೇಲೆ ದೃಷ್ಟಿಯಿಂದ ಪ್ರೋ ಕಬಡ್ಡಿ ಆಯೋಜನೆ.. ಹೌದು, ಚುನಾವಣೆ ಹತ್ತಿರವಾಗ್ತಿದ್ದಂತೆ ಯುವಕರನ್ನು  ತಮ್ಮತ್ತ ಸೆಳೆಯಲು ಹೊಸಪೇಟೆ ಶಾಸಕ ಆನಂದ ಸಿಂಗ್ ತಮ್ಮ ಮಗನ ಮೂಲಕ ವಿವಿಧ ರೀತಿಯ ಕಸರತ್ತು ಮಾಡ್ತಿದ್ದಾರೆ. 

Kodagu: ಲೋಕಾಯುಕ್ತ ದಾಳಿಗೆ ಸರ್ಕಾರವೇ ಸೂಚನೆ ನೀಡಿತ್ತಾ?: ಶಾಸಕ ಬೋಪಯ್ಯ

ಈಗಾಗಲೇ ಒಮ್ಮೆ ಗ್ರಾಮ ವಾಸ್ತವ್ಯ ಮಾಡಿರೋ ಆನಂದ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಕಳೆದ ತಿಂಗಳು ಕ್ರಿಕೆಟ್ ಟೂರ್ನಮೆಂಟ್ ಅಯೋಜನೆ ಮಾಡಿದ್ರು. ಇದೀಗ ಇಂದಿನಿಂದ ಮೂರು ದಿನಗಳ ಕಾಲ ಪ್ರೋ ಕಬಡ್ಡಿ ಟೂರ್ನಮೆಂಟ್ ಆಯೋಜನೆ ಮಾಡಿದ್ದಾರೆ ‌. ಕೇವಲ ಹೊಸಪೇಟೆ ಕ್ಷೇತ್ರಕ್ಕೆ ಸೀಮಿತವಾಗದೇ, ವಿಜಯನಗರ ಪ್ರೋ ಕಬಡ್ಡಿ ಲೀಗ್ ಹೆಸರಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯ ಐವತ್ತಕ್ಕೂ ಹೆಚ್ಚು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಇನ್ನೂ ಇಷ್ಟೇಲ್ಲ ಮಾಡ್ತಿರೋ ಸಿದ್ದಾರ್ಥ ಸಿಂಗ್ ಚುನಾವಣೆ ನಿಲ್ತಾರಾ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಅಪ್ಪನ ಕೆಲಸಕ್ಕೆ ಸಾಥ್ ನೀಡ್ತಿದ್ದೇನೆ ಚುನಾವಣೆ ಬಗ್ಗೆ ಅಪ್ಪನನ್ನೆ ಕೇಳಿ‌ ಎನ್ನುತ್ತಾರೆ.

ಆನಂದ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ನೇತೃತ್ವದಲ್ಲಿ ಭರ್ಜರಿ ಮ್ಯಾಚ್: ಇನ್ನೂ ಗ್ರಾಮೀಣ ಪ್ರತಿಭೆಗಳನ್ನು ಹೊರಗೆ ತರೋ ನಿಟ್ಟಿನಲ್ಲಿ ಈ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎನ್ನಲಾಗ್ತಿದೆ.‌ಆದ್ರೇ ಇಲ್ಲಿ ಸ್ವಾಮಿ ಕಾರ್ಯ ಸ್ವಕಾರ್ಯದ ಲಾಭವಿದೆ. ಅಚ್ಚುಕಟ್ಟಾಗಿ ಆಯೋಜನೆ ಮಾಡಿರೋ ಪಂದ್ಯಾವಳಿ ಮೂರು ದಿನಗಳ ಕಾಲ ನಡೆಯಲಿವೆ. ಇನ್ನೂ ಪಂದ್ಯಾವಳಿ ಆರಂಭಕ್ಕೂ ಮುನ್ನ ಐವತ್ತಕ್ಕೂ ಹೆಚ್ಚು ತಂಡದ ಸದಸ್ಯರು ವಡಕರಾಯಸ್ವಾಮಿ ದೇವಸ್ಥಾನ ದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಭರ್ಜರಿ ಮೆರವಣಿಗೆ ಮಾಡಲಾಯ್ತು.

ಕಾಂಗ್ರೆಸ್‌ ಅಂದರೆ ಜಾತಿ ಮಧ್ಯೆ ಒಡೆದಾಳುವ ಪಕ್ಷ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ: ರಾಜಕೀಯ ಲಾಭಕ್ಕೋ ಚುನಾವಣೆ ಗಿಮಿಕ್ಸ್ ಮಾಡ್ತಿದ್ದಾರೋ ಗೊತ್ತಿಲ್ಲ. ಒಂದೊಳ್ಳೆ ಟೂರ್ನಮೆಂಟ್ ಆಯೋಜನೆ ಮಾಡೋ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಈ ಟೂರ್ನಮೆಂಟ್ ಉತ್ತಮ ವೇದಿಕೆ ಯಾಗಿರೋದು ಮಾತ್ರ ಸುಳ್ಳಲ್ಲ.

click me!