* ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಳಿ ಸ್ವಾಮಿ ಏಕವಚನದಲ್ಲಿ ವಾಗ್ದಾಳಿ
* ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ನನಗೆ ಮನಸಿಲ್ಲ
* ಕೊಲೆ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು
ಗಂಗಾವತಿ(ಫೆ.27): ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೆ(Harsha Murder) ಕಾರಣರಾದ ಮುಸ್ಲಿಮರ ಓಲೈಕೆಯಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಸಿದ್ದರಾಮ ಮುಲ್ಲಾ ಆಗಿದ್ದಾರೆ ಎಂದು ಶಿವಮೊಗ್ಗದ ಋಷಿಕೇಶಿ ಕಾಳಿಮಠದ ಕಾಳಿ ಸ್ವಾಮೀಜಿ(Kali Swamy) ವಾಗ್ದಾಳಿ ನಡೆಸಿದರು.
ಹರ್ಷ ಕೊಲೆ ಖಂಡಿಸಿ ಹಿಂದೂಪರ ಸಂಘಟನೆಗಳು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಂ(Muslim) ಯುವಕರ ತಂಡ ಹರ್ಷ ಕೊಲೆ ಮಾಡಿದ್ದು ಇಡೀ ದೇಶವೇ ತಲ್ಲಣಗೊಂಡಿದೆ. ಇಂತಹ ಸಮುದಾಯಕ್ಕೆ ಸಿದ್ದರಾಮಯ್ಯ ಬೆಂಬಲ ನೀಡಿ ಓಲೈಸಿಕೊಳ್ಳಲು ಮುಂದಾಗಿದ್ದಾರೆ. ಪರೇಶ ಮೇಸ್ತಾ ಸತ್ತಾಗ ಸಿದ್ದರಾಮಯ್ಯಗೆ ಸಿದ್ದರಾಮ ಮುಲ್ಲಾ ಎಂದು ಕರೆದಿದ್ದೆ. ಈಗ ಅದೇ ಹೆಸರು ನಿಗದಿಯಾಗಿದೆ ಎಂದು ವ್ಯಂಗ್ಯವಾಡಿದರು. ಅವರ ಮಗ ವಿದೇಶದಲ್ಲಿ ಸತ್ತಾಗ ಅದರ ಮಾಹಿತಿಯನ್ನೇ ನೀಡಲಿಲ್ಲ. ಇದೀಗ ಹರ್ಷ ಕೊಲೆ ತನಿಖೆ ಬಗ್ಗೆ ಮಾತನಾಡುತ್ತಿದ್ದಾರೆ. ಅವನೋರ್ವ ರೌಡಿ ಶೀಟರ್ ಎಂದು ಹೇಳಿದ್ದಾರೆ, ನಿಮ್ಮ ಮಗ ಶ್ರೀರಾಮಚಂದ್ರ ಆದರೆ ನಮ್ಮ ಮಗ (ಹರ್ಷ) ರೌಡಿನಾ? ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.
Karnataka Politics: ಕಾಂಗ್ರೆಸ್‌ನವರು ವಚನ ಭ್ರಷ್ಟರು: ಸಚಿವ ಹಾಲಪ್ಪ ಆಚಾರ್
ಕುಟುಂಬದಲ್ಲಿ ಅಧಿಕ ಸದಸ್ಯರು ಇರುವ ಮುಸ್ಲಿಂರ ಓಲೈಕೆಗಾಗಿ ಮುಂದಿನ ಚುನಾವಣೆಯಲ್ಲಿ(Election) ಅಧಿಕಾರಕ್ಕೆ ಬಂದರೆ ೧೦ ಕೆಜಿ ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ದೂರಿದ ಶ್ರೀಗಳು, ಹಿಂದೂಗಳು ಒಂದಾಗದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ನೆರೆದಿದ್ದವರನ್ನು ಎಚ್ಚರಿಸಿದರು.
ಗಾಂಧಿ ಪ್ರತಿಮೆಗೆ ಹಾರ:
ಮಹಾತ್ಮ ಗಾಂಧೀಜಿ(Mahatma Gandhiji) ದೇಶ ಇಬ್ಭಾಗ ಮಾಡಿದ ಪರಿಣಾಮ ಈಗ ನಾವು ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ. ಮೆರವಣಿಗೆ ಸಂದರ್ಭದಲ್ಲಿ ಗಾಂಧಿ ಪ್ರತಿಮೆಗೆ ಹಾರ ಹಾಕಲು ಕರೆದರು. ನನಗೆ ಮನಸ್ಸು ಇಲ್ಲದೆ ಇದ್ದರೂ ಅನಿವಾರ್ಯವಾಗಿ ಹಾರ ಹಾಕಬೇಕಾಯಿತು. ಮುಸ್ಲಿಂ ರಕ್ಷಣೆಗೆ ಬಿ.ಕೆ. ಹರಿಪ್ರಸಾದ(BK Harirpasad) ಸೇರಿ ಹಲವರು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ಹಡಗಲಿಯ ಹಾಲಸ್ವಾಮಿಗಳು ಮಾತನಾಡಿ, ಹರ್ಷ ಕೊಲೆ ಹಾಗೂ ಹಾವೇರಿಯ ಜಿಲ್ಲೆಯ ಯರಗುಪ್ಪಿಯ ಯುವತಿ ಮೇಲಿನ ಅತ್ಯಾಚಾರ(Rape) ಮತ್ತು ಕೊಲೆ ಪ್ರಕರಣ ಇಡೀ ರಾಜ್ಯವೇ ತಲ್ಲಣಗೊಂಡಿದೆ. ಹರ್ಷ ಕೊಲೆ ಗಮಿಸಿದರೆ ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಮುಸ್ಲಿಂರನ್ನು ನಾವು ಚಿಕ್ಕಪ್ಪ, ದೊಡ್ಡಪ್ಪ ಎಂದು ಕರೆದರೂ ಅವರು ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕೇಸರಿ(Saffron) ಶಾಲು ಹಿಡಿದು ಅಧಿಕಾರಕ್ಕೆ ಬಂದವರು ಚರಂಡಿ ಕಾಮಗಾರಿಯ ಪರ್ಸಂಟೇಜ್ ಪಡೆಯುತ್ತಿದ್ದಾರೆ ಹೊರತು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಮೊದಲು ಹಿಂದೂಗಳ(Hindu) ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಕೊಲೆ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಹೆಬ್ಬಾಳ ಮಠದ ನಾಗಭೂಷಣ ಸ್ವಾಮೀಜಿ ಮಾತನಾಡಿದರು. ಸಭೆ ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೆ ಶಾಸಕ ಪರಣ್ಣ ಮುನವಳ್ಳಿ, ವಿಠಾಪುರ ಯಮನಪ್ಪ ಮನವಿ ಸಲ್ಲಿಸಿದರು.
Karnataka Politics: 'ಬಿಜೆಪಿಯು ತತ್ವ- ಸಿದ್ಧಾಂತ ಇಲ್ಲದ ಬರೀ ಸುಳ್ಳಿನ ಪಕ್ಷ'
ಆರೋಪಿಗಳನ್ನು ಬಂಧಿಸಿ
ಸಭೆಗೂ ಮೊದಲು ನಗರದಲ್ಲಿ ಹರ್ಷ ಕೊಲೆ ಮತ್ತು ಯರಗುಪ್ಪಿಯಲ್ಲಿ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಮಾಡಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆ(Hindu Organization) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಆರಂಭವಾದ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತದವರೆಗೂ ಸಾಗಿತು. ಈ ವೇಳೆ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಘೋಷಣೆ ಕೂಗಿದರು. ಶಾಸಕ ಪರಣ್ಣ ಮುನವಳ್ಳಿ ನೇತೃತ್ವ ವಹಿಸಿದ್ದರು.
ಮೆರವಣಿಗೆಯಲ್ಲಿ ಹೆಬ್ಬಾಳ ಮಠದ ನಾಗಭೂಷಣ ಸ್ವಾಮೀಜಿ, ಹಡಗಲಿಯ ಹಾಲಸ್ವಾಮೀಜಿ, ಶಿವಮೊಗ್ಗದ ಋಷಿಕೇಶ್ವರ ಕಾಳಿಮಠದ ಕಾಳಿಸ್ವಾಮಿ, ಹುಸೇನಪ್ಪ ಸ್ವಾಮಿ, ಹೊಸಮನಿ ಮಲ್ಲಿಕಾರ್ಜುನ, ಕಲ್ಗುಡಿ ಚಂದ್ರಪ್ಪ ಹಿರೇಜಂತಗಲ್, ಸಣ್ಣಕ್ಕಿ ನೀಲಪ್ಪ, ಯಮನಸಾ ಜರತ್ಕಾರ, ತಿಪ್ಪಣ್ಣ ಜಗದಂಬಾ, ರಾಘವೇಂದ್ರ ಮೇಗೂರು, ರಾಘವೇಂದ್ರಶೆಟ್ಟಿ, ಗುರುರಾಜ ಕುಲಕರ್ಣಿ ಚಿರ್ಚನಗುಡ್ಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಮೆರವಣಿಗೆ ವೇಳೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.