7 ವರ್ಷಗಳ ನಂತರ ಉದ್ಘಾಟನೆಗೆ ಸಿದ್ಧಗೊಂಡ ಕಲಾಸಿಪಾಳ್ಯ ಬಸ್‌ ಟರ್ಮಿನಲ್‌: ಹೆಚ್ಚುವರಿ ಸೌಲಭ್ಯ ಕಾಮಗಾರಿ ಬಾಕಿ

By Sathish Kumar KH  |  First Published Feb 8, 2023, 3:16 PM IST

ಕಲಾಸಿಪಾಳ್ಯ ಬಸ್‌ ನಿಲ್ದಾಣ ನಿರ್ಮಾಣ ಕಾರ್ಯ 7 ವರ್ಷಗಳ ನಂತರ ಪೂರ್ಣಗೊಂಡಿದೆ. ಕೆಲವು ಹೆಚ್ಚುವರಿ ಸೌಲಭ್ಯಗಳ ಕಾಮಗಾರಿಗಳು ಈಗ ಬಾಕಿಯಿದ್ದು, ಮುಂದಿನ ಮೂರು ತಿಂಗಳಲ್ಲಿ ಉದ್ಘಾಟನೆಯಾಗಲಿದೆ.


ಬೆಂಗಳೂರು (ಫೆ.08): ರಾಜ್ಯ ರಾಜಧಾನಿಯಿಂದ ತಮಿಳುನಾಡು ಸೇರಿ ರಾಜ್ಯದ ಹಲವು ಪ್ರದೇಶಗಳಿಗೆ ಹಾಗೂ ನಗರದ ಬಹುತೇಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕಲಾಸಿಪಾಳ್ಯ ಬಸ್‌ ನಿಲ್ದಾಣ ನಿರ್ಮಾಣ ಕಾರ್ಯ 7 ವರ್ಷಗಳ ನಂತರ ಪೂರ್ಣಗೊಂಡಿದೆ. ಕೆಲವು ಹೆಚ್ಚುವರಿ ಸೌಲಭ್ಯಗಳ ಕಾಮಗಾರಿಗಳು ಈಗ ಬಾಕಿಯಿದ್ದು, ಮುಂದಿನ ಮೂರು ತಿಂಗಳಲ್ಲಿ ಉದ್ಘಾಟನೆಯಾಗಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕೆಲವೊಂದು ಪ್ರಮುಖ ಕಾಮಗಾರಿಗಳು ಹಲವು ವರ್ಷಗಳು ಕಳೆದರೂ ಮುಗಿಯುವುದಿಲ್ಲ. ಇದಕ್ಕೆ ಹಲವು ಕಾರಣಗಳು ಇದ್ದರೂ ಕಾಮಗಾರಿ ನಡೆಸುವ ಸಂಸ್ಥೆಗಳ ನಿರ್ಲಕ್ಷ್ಯವೂ ಇಲ್ಲವೆಂದು ಹೇಳಾಗುವುದಿಲ್ಲ. ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹಾಗೂ ಇತರೆ ಸಾರ್ವಜನಿಕ ಆಡಳಿತ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಕಲಾಸಿಪಾಳ್ಯ ಬಸ್‌ ಟರ್ಮಿನಲ್‌ (Kalasipalya Bus Terminal)  ಕಾಮಗಾರಿ ಕಳೆದ 7 ವರ್ಷಗಳಿಂದ ನಡೆಯುತ್ತಿದ್ದು, ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಗದಿತ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಇನ್ನೂ ಕೆಲವೊಂದು ಹೆಚ್ಚುವರಿ ಸೌಲಭ್ಯಗಳ ಅಗತ್ಯವಿದ್ದ ಹಿನ್ನೆಲೆಯಲ್ಲಿ ಹೊಸದಾಗಿ ಟೆಂಡರ್‌ ಕೆರದು (Tender) ಕಾಮಗಾರಿ ಮಾಡಲು ಮುಂದಾಗಿದೆ. ಈ ಕಾಮಗಾರಿ ಮುಕ್ತಾಯಕ್ಕೆ ಇನ್ನೂ ಎರಡು ತಿಂಗಳು ಬೇಕಾಗಿದ್ದು, ನಂತರ ಅಧಿಕೃತ ಉದ್ಘಾಟನೆ ಆಗಲಿದೆ.

Tap to resize

Latest Videos

ಬಿಎಂಟಿಸಿ ನಿಗಮದಲ್ಲಿ ಆಡಿದ್ದೇ ಆಟ: ನ್ಯಾಯ ಕೇಳಿದ ಡ್ರೈವರ್ ಸಸ್ಪೆಂಡ್

ನಾಲ್ಕು ವರ್ಷ ತಡವಾಗಿ ಕಾಮಗಾರಿ ಪೂರ್ಣ: ಕಲಾಸಿಪಾಳ್ಯದಲ್ಲಿ ಬಸ್ ಟರ್ಮಿನಲ್ ನಿರ್ಮಿಸುವ ಪ್ರಸ್ತಾವನೆಯನ್ನು 2002 ರಲ್ಲಿ ಮತ್ತು 2010 ರಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಲಾಯಿತು. ಬಿಎಂಟಿಸಿ ಅಧಿಕಾರಿಗಳು 63 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಟರ್ಮಿನಲ್ ಕಾಮಗಾರಿ ನಿರ್ಮಾಣ ಕಾರ್ಯವನ್ನು 2016 ರಲ್ಲಿ ಪ್ರಾರಂಭಿಸಲಾಗಿತ್ತು. 2018ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಬೇಕಿದ್ದ ಕಲಾಸಿಪಾಳ್ಯ ಬಸ್‌ ಟರ್ಮಿನಲ್‌ ಕೊನೆಗೂ 2022ರ ಡಿಸೆಂಬರ್‌ನಲ್ಲಿ ಸಿದ್ಧಗೊಂಡಿತ್ತು. ಆದರೆ, ಬೀಗ ಜಡಿದಿದ್ದರಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಅಂತಾರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಅಕ್ಕಪಕ್ಕದ ರಸ್ತೆಗಳಲ್ಲಿ ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರು ಇತರ ವಾಹನಗಳಿಗೆ ಮುಗಿ ಬೀಳುವ ಭೀತಿ ಎದುರಾಗಿದೆ. 

ಬಸ್‌ ಟರ್ಮಿನಲ್‌ಗಳಲ್ಲಿ ಇರುವ ಸೌಲಭ್ಯಗಳು: ಕಲಾಸಿಪಾಳ್ಯ ಬಸ್‌ ಟರ್ಮಿನಲ್‌ನಲ್ಲಿ ಒಟ್ಟು 18 ಬಿಎಂಟಿಸಿ, 6 ಕೆಎಸ್‌ಆರ್‌ಟಿಸಿ ಮತ್ತು 6 ಖಾಸಗಿ ಬಸ್‌ಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದು. ಇತ್ತೀಚೆಗೆ ಸಣ್ಣಪುಟ್ಟ ಕೆಲಸಗಳಿಗೆ ಟೆಂಡರ್‌ ಕರೆಯಲಾಗಿಯತ್ತು. ಯೋಜನೆಯ ವೆಚ್ಚವನ್ನು ಹೆಚ್ಚಿಸುವ ಕುರಿತು ನಾವು ರಾಜ್ಯ ಸಚಿವ ಸಂಪುಟದಿಂದ ಅನುಮೋದನೆಯನ್ನು ಸಹ ಪಡೆಯಲಾಗಿದೆ. ಈ ಟರ್ಮಿನಲ್‌ನಲ್ಲಿ ಬಸ್‌ಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಉದ್ಘಾಟನೆಗಾಗಿ ಕಾಯುತ್ತಿದ್ದೇವೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದರು.

ಉದ್ಘಾಟನೆಯಾಗದೇ ಬಿಟಿಎಂ ಲೇಔಟ್‌ ಟರ್ಮಿನಲ್‌ ಕಾರ್ಯ: ಮತ್ತೊಂದೆಡೆ ಬಿಟಿಎಂ ಲೇಔಟ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಬಸ್ ಟರ್ಮಿನಲ್ ಔಪಚಾರಿಕ ಉದ್ಘಾಟನೆಯೊಂದಿಗೆ ಯಾವುದೇ ಸಂಭ್ರಮವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಬಿಟಿಎಂ ಲೇಔಟ್ ಟರ್ಮಿನಲ್ ಉದ್ಘಾಟನೆಯಾಗದೆ ಕಾರ್ಯಾರಂಭ ಮಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು,  ಬಿಟಿಎಂ ಲೇಔಟ್ ಶಾಸಕ ವಿರೋಧ ಪಕ್ಷದವರು. ಆದರೆ ಚಿಕ್ಕಪೇಟೆಯ ಶಾಸಕ ಆಡಳಿತ ಪಕ್ಷದವರೇ ಆಗಿದ್ದು,  ಚುನಾವಣಾ ನೀತಿ ಸಂಹಿತೆ ಜಾರಿ ಆಗುವುದಕ್ಕೂ ಮುನ್ನ ಮಾರ್ಚ್‌ನೊಳಗೆ ಉದ್ಘಾಟನೆ ಆಗಲಿದೆ.

ಬಿಎಂಟಿಸಿ ಗುಜರಿ ವಸ್ತು ಮಾರಾಟದಲ್ಲಿ 10 ಕೋಟಿ ರೂ. ಭ್ರಷ್ಟಾಚಾರ..!: ನೋಟಿಸ್‌ ನೀಡಿ ಸುಮ್ಮನಾದ ನಿಗಮ

ಸಂಕಷ್ಟದಲ್ಲಿಯೇ ಪ್ರಯಾಣಿಕರ ಪರದಾಟ: ಪ್ರತಿದಿನ, ನೂರಾರು ಬಸ್‌ಗಳು ಕಲಾಸಿಪಾಳ್ಯದಿಂದ ಹತ್ತಿರದ ನಗರಗಳು ಮತ್ತು ನೆರೆಯ ರಾಜ್ಯಗಳಿಗೆ ಕಾರ್ಯನಿರ್ವಹಿಸುತ್ತವೆ. ಸ್ವಚ್ಛ ಶೌಚಾಲಯ, ಕಾಯುವ ಸ್ಥಳ, ವಾಹನ ನಿಲುಗಡೆ ಹಾಗೂ ಬಸ್ ಬೇಗಳಂತಹ ಮೂಲ ಸೌಕರ್ಯಗಳಿಲ್ಲದೇ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಬಿಸಿಲು ಮತ್ತು ಮಳೆಗೆ ಹೆದರಿ, ಅನೇಕ ಇಂಟ್ರಾ ಮತ್ತು ಇಂಟರ್-ಸಿಟಿ ಬಸ್ ಬಳಕೆದಾರರು ದಟ್ಟಣೆ, ದುರ್ವಾಸನೆ ಮತ್ತು ಕತ್ತಲು ಪ್ರದೇಶಗಳಲ್ಲಿ ಬಸ್‌ಗಳಿಗಾಗಿ ಕಾಯುವುದು ಅನಿವಾರ್ಯವಾಗಿದೆ.

click me!