
ಕಲಬುರಗಿ: ಇಂದು ನಮಗೆ ಹಳ್ಳಿ ಹಳ್ಳಿಯಲ್ಲಿಯೂ ವ್ಲಾಗರ್‌ಗಳು ಸಿಗುತ್ತಾರೆ. ಈ ವ್ಲಾಗರ್‌ಗಳಿಂದ ಅಲ್ಲಿನ ಸ್ಥಳ ಮತ್ತು ಸಂಸ್ಕೃತಿಯ ಮಾಹಿತಿ ಸಿಗುತ್ತದೆ. ಇಂದು ಉತ್ತರ ಕರ್ನಾಟಕ ಭಾಗದ ಯುವಕ ಪ್ರಸಾದ್ ಗೋಗಿ ಎಂಬವರು ತಮ್ಮ 300 ವರ್ಷದ ಹಳೆಯ ಮನೆಯನ್ನು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ತಿಳಿಸಿದ್ದಾರೆ. ಸದ್ಯ ಈ ಸುಂದರವಾದ ಮನೆ ವಿಡಿಯೋ ವೈರಲ್ ಅಗುತ್ತಿದೆ. ಕಲಬುರಗಿ ಜಿಲ್ಲೆಯವರಾದ ಪ್ರಸಾದ್ ಗೋಗಿ ಅವರ ವಿಡಿಯೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ತಮ್ಮ ಮನೆಯಲ್ಲಿರುವ ಪೆಟ್ಟಿಗೆಯನ್ನು ಓಪನ್ ಮಾಡಿರುವ ವಿಡಿಯೋವನ್ನು ಪ್ರಸಾದ್ ಗೋಗಿ ಶೇರ್ ಮಾಡಿಕೊಂಡಿದ್ದಾರೆ.
ಪ್ರಸಾದ್ ಗೋಗಿ ಅವರು 300 ವರ್ಷಗಳಷ್ಟು ಹಳೆಯದಾದ ಸುಂದರ ಮನೆಯಲ್ಲಿ ವಾಸವಾಗಿದ್ದಾರೆ. ಇದು 16 ಕಂಬಗಳವುಳ್ಳ ತೊಟ್ಟಿ ಮನೆಯಾಗಿದ್ದು, ಕಲರ್‌ಫುಲ್ ಆಗಿದೆ. ಪ್ರಸಾದ್ ಗೋಗಿ ಅವರ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಮನೆಯ ಹಲವು ವಿಡಿಯೋಗಳನ್ನು ನೋಡಬಹುದಾಗಿದೆ. ಹಾಗೆಯೇ ಪ್ರಸಾದ್ ಅವರ ಅಜ್ಜಿಯವರ ರೆಸಿಪಿಗಳನ್ನು ಸಹ ನೋಡಬಹುದಾಗಿದೆ.
ಇಂದು ನಾವು ಪ್ರಸಾದ್ ಅವರು ತಮ್ಮ ಅಜ್ಜಿಯ ಪೆಟ್ಟಿಗೆಯನ್ನು ಓಪನ್ ಮಾಡಿ, ಅದರಲ್ಲಿರುವ ವಸ್ತುಗಳೇನು ಎಂಬುದನ್ನು ತಮ್ಮ ವೀಕ್ಷಕರಿಗೆ ತೋರಿಸಿದ್ದಾರೆ. ವಿಡಿಯೋ ಆರಂಭದಲ್ಲಿ ವರ್ಷಕ್ಕೆ ಕೇವಲ ಎರಡು ಬಾರಿ ಮಾತ್ರ ಈ ಪೆಟ್ಟಿಗೆ ಓಪನ್ ಮಾಡಲಾಗುತ್ತದೆ. ಎಷ್ಟೇ ಕೇಳಿದ್ರೂ ನಮ್ಮ ಅಜ್ಜಿಯ ಈ ಕೀಲಿಯನ್ನು ಕೊಟ್ಟಿರಲಿಲ್ಲ. ಈಗ ಕೀಲಿ ಸಿಕ್ಕಿದ್ದು, ಪೆಟ್ಟಿಗೆ ಓಪನ್ ಮಾಡುತ್ತಿರೋದಾಗಿ ಪ್ರಸಾದ್ ಗೋಗಿ ತಿಳಿಸಿದ್ದಾರೆ.
ವರ್ಷಕ್ಕೆ ಎರಡು ಬಾರಿ ತೆಗೆಯುವ ಪೆಟ್ಟಿಗೆಯಲ್ಲಿ ಉತ್ತರ ಕರ್ನಾಟಕದ ಜನಪ್ರಿಯತೆಯ ಕೌದಿಗಳನ್ನು ಜೋಡಿಸಲಾಗಿತ್ತು. ಸಾಮಾನ್ಯವಾಗಿ ಹಳೆ ಕೌದಿಗಳೆಲ್ಲವನ್ನು ಒಂದೆಡೆ ಕಟ್ಟಿ ಇಡಲಾಗುತ್ತದೆ. ದೀಪಾವಳಿ, ಯುಗಾದಿ ಸಂದರ್ಭದಲ್ಲಿ ಕೌದಿಗಳನ್ನು ತೆಗೆದು ತೊಳೆದು ಶುಚಿಗೊಳಿಲಾಗುತ್ತದೆ. ಬಳಕೆಯಲ್ಲಿ ಇಲ್ಲದಿದ್ರೂ ಇಂದಿಗೂ ಎಷ್ಟೋ ಜನರು ತಮ್ಮ ಬಾಲ್ಯ ಮತ್ತು ಹಿರಿಯರ ನೆನಪಿಗಾಗಿ ಕೌದಿಗಳನ್ನು ಜೋಪಾನದಿಂದ ಎತ್ತಿಟ್ಟುಕೊಂಡಿರುತ್ತಾರೆ. ಈ ಕೌದಿಗಳನ್ನು ಮನೆಯಲ್ಲಿನ ಹಳೆ ಸೀರೆ ಮತ್ತು ಇನ್ನಿತರ ಬಟ್ಟೆಗಳನ್ನು ಬಳಸಿ ಕೌದಿಗಳನ್ನು ಸಿದ್ಧಪಡಿಸಲಾಗುತ್ತದೆ.
ಒಮ್ಮೆ ಈ ಕೌದಿಗಳನ್ನು ತೆರೆದಾಗ ಅಲ್ಲಿ ತಮ್ಮ ಬಾಲ್ಯದ ಬಟ್ಟೆಗಳನ್ನು ನೋಡಿ ಆನಂದಿಸುತ್ತಾರೆ. ಪ್ರಸಾದ್ ಗೋಗಿಯವರು ತೋರಿಸಿರುವ ಕೌದಿಗಳನ್ನು ವಿವಿಧ ವಿನ್ಯಾಸಗಳಲ್ಲಿ ಹೊಲೆಯಲಾಗಿದೆ. ಈ ಹಿಂದೆ ಮನೆಯಲ್ಲಿ ಮಗುವೊಂದು ಜನಿಸಿದ್ರೆ ಅದಕ್ಕಾಗಿಯೇ ಕೌದಿಯೊಂದನ್ನು ಸಿದ್ಧಪಡಿಸಲಾಗುತ್ತಿತ್ತು.
300 ವರ್ಷದ ಮನೆ ಎಲ್ಲಿದೆ?
ಪ್ರಸಾದ್ ಗೋಗಿಯವರು ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿಯಾಗಿದ್ದಾರೆ. ಆದ್ರೆ ಈ 300 ವರ್ಷದ ಮನೆ ಎಲ್ಲಿದೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ನೀಡಿಲ್ಲ. ಒಂದು ಬಾರಿ ಇಡೀ ಮನೆಯನ್ನು ಹೋಮ್‌ಟೂರ್ ಮಾಡುವಂತೆ ಹಲವು ಬಳಕೆದಾರರು ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಈ ಮನೆಯನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.