ರಾತ್ರಿ ಪ್ರವಚನ ನೀಡಿದ್ದ ವಿರಕ್ತ ಮಠದ ಸ್ವಾಮೀಜಿ ಬೆಳಗಾಗುವುದರೊಳಗೆ ನಿಧನ

By Gowthami KFirst Published Jul 8, 2024, 11:31 AM IST
Highlights

ರಾತ್ರಿ ಪ್ರವಚನ ನೀಡಿದ್ದ ಸ್ವಾಮೀಜಿ ಬೆಳಗಾಗುವುದರೊಳಗೆ ಹೃದಯಾಘಾತಕ್ಕೆ ಬಲಿಯಾಗಿರುವ ದುಖಃಕರ ಘಟನೆ ಕಲಬುರಗಿಯ ವಿರಕ್ತ ಮಠದಲ್ಲಿ ನಡೆದಿದೆ.  

ಕಾಳಗಿ (ಜು.8): ರಾತ್ರಿ ಪ್ರವಚನ ನೀಡಿದ್ದ ಸ್ವಾಮೀಜಿ ಬೆಳಗಾಗುವುದರೊಳಗೆ ಹೃದಯಾಘಾತಕ್ಕೆ ಬಲಿಯಾಗಿರುವ ದುಖಃಕರ ಘಟನೆ ಕಲಬುರಗಿಯ ವಿರಕ್ತ ಮಠದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಠಕಲ್ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (35) ವಿಧಿವಶರಾಗಿದ್ದಾರೆ.

ನಸುಕಿನ ಜಾವ ತೀವ್ರ ಹೃದಯಾಘಾತಕ್ಕೊಳಗಾಗಿ ಮಠದಲ್ಲೇ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಪ್ರಾಣ ಬಿಟ್ಟಿದ್ದಾರೆ. ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

Latest Videos

ದುಬೈನಲ್ಲಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡದ್ದಕ್ಕೆ ದರ್ಶನ್‌ ಜತೆ ಮಾತು ಬಿಟ್ಟಿದ್ದ ಪವಿತ್ರಾ ಗೌಡ!

ನಿನ್ನೆ ರಟಕಲ್ ಗ್ರಾಮದಲ್ಲಿ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿ ಪ್ರವಚನ ನೀಡಿದ್ದರು.  ರಟಕಲ್ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಅದ್ಧೂರಿ ವಚನ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್, ಶಾಸಕ ಬಿಆರ್ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ರಾಜ್ಯ ಸರ್ಕಾರದಿಂದ ಬೆಂಗಳೂರಿನಲ್ಲಿ 1.50 ಲಕ್ಷ ಆಟೋ ರಿಕ್ಷಾಗಳಿಗೆ ಪರ್ಮಿಟ್‌, ಷರತ್ತುಗಳು ಅನ್ವಯ!

ಗಣ್ಯರೊಂದಿಗೆ ರಾತ್ರಿ ವೇದಿಕೆ ಹಂಚಿಕೊಂಡು ಆಶೀರ್ವಚನ ನೀಡಿದ್ದ ಸ್ವಾಮಿಜಿ ಬೆಳಗಾಗುವುದರೊಳಗೆ ಹೃದಯಾಘಾತಕ್ಕೆ ಬಲಿಯಾಗಿರುವುದು ಮಠದ ಭಕ್ತರಿಗೆ ಬೇಸರ ತರಿಸಿದೆ.

ಶ್ರೀಗಳು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ್‌ ಗ್ರಾಮದವರು. ಪೂರ್ವಾಶ್ರಮದಲ್ಲಿ ಕೋಕಟನೂರ್‌ ಗ್ರಾಮದ ಮೂಲದವರಾಗಿದ್ದ ಶ್ರೀಗಳು ಕಳೆದ 8 ವರ್ಷಗಳಿಂದ ಸ್ವಾಮೀಜಿಗಳಾಗಿ ರಟಕಲ್‌ ಹಿರೇಮಠಕ್ಕೆ ಬಂದು ನೆಲೆಸಿದ್ದರು. ಕಳೆದ 8 ವರ್ಷದಿಂದ ರಟಕಲ್‌ನಲ್ಲಿರುವ ವಿರಕ್ತ ಮಠದ ಸಾರಥ್ಯ ವಹಿಸಿ ಅನೇಕ ಸುಧಾರಣೆಗಳನ್ನು ಮಾಜಿ ಹೆಸರು ಪಡೆದಿದ್ದರು.
ಶ್ರೀಗಳ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹುಲಸೂರಿನ ಶಿವಾನಂದ ಸ್ವಾಮೀಜಿ, ನಾಗೂರಿನ ಅಲ್ಲಮಪ್ರಭು ಸ್ವಾಮೀಜಿ, ಸ್ಥಳೀಯ ಹಿರೇಮಠದ ರೇವಣಸಿದ್ದ ಶಿವಾಚಾರ್ಯರು, ಗೌರಿಗಣೇಶ ಗುಡ್ಡದ ರೇವಣಸಿದ್ದ ಶರಣರು, ಭರತನೂರ್‌ ಗುರುನಂಜೇಶ್ವರ ಮಠದ ಸ್ವಾಮೀಜಿಗಳು ಸೇರಿದಂತೆ ಅನೇಕ ಮಠಗಳ ಸ್ವಾಮೀಜಿಗಳು, ಹಿರಿಯರು, ರಟಕಲ್‌ ಹಾಗೂ ಸುತ್ತಲಿನ ಸಾವಿರಾರು ಭಕ್ತರು ಮಠದಲ್ಲಿಯೇ ಸೇರಿದ್ದು ಸ್ವಾಮೀಜಿಗಳ ನಿಧನಕ್ಕೆ ಕಂಬನಿ ಹಾಕುತ್ತಿದ್ದಾರೆ.

ಭಾನುವಾರ ವಚನ ಸಂಗಮ ಆಯೋಜಿಸಿದ್ದರು: ಕಾಳಗಿ ತಾಲೂಕಿನಲ್ಲಿ ರಟಕಲ್‌ನಲ್ಲಿ ಸಿದ್ದರಾಮ ಸ್ವಾಮೀಜಿ ಭಾನುವಾರವಷ್ಟೆ ಮಠದ ವತಿಯಿಂದಲೇ ಬಸವಾದಿ ಶರಣರ ವಚನ ಸಂಗಮ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿದ್ದರು.

ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌, ಸಿಎಂ ಸಲಹೆಗಾರರಾದ ಬಿಆರ್‌ ಪಾಟೀಲ್‌, ಎಂಎಲ್‌ಸಿ ಜಗದೇವ ಗುತ್ತೇದಾರ್‌, ಕೆಪಿಸಿಸಿ ಮುಖಂಡರಾದ ಸುಭಾಸ ರಾಠೋಡ, ಸುತ್ತಲಿನ ಮಠಗಳ ಗುರುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸ್ವಾಮೀಜಿಗಳು ಸನ್ಮಾನಿಸಿ ಹರಸಿದ್ದರು.

ಈ ಸಮಾರಂಭದ ನಂತರ ವಿಶ್ರಾಂತಿಗೆ ತೆರಳಿದ್ದ ಗುರುಗಳು ಇಹಲೋಕವನ್ನೇ ತ್ಯಜಿಸಿರೋ ಸುದ್ದಿ ರಟಕಲ್‌ನ ಈ ವಿರಕ್ತ ಮಠದ ಭಕ್ತರ ಪಾಲಿಗೆ ಅರಗಿಸಿಕೊಳ್ಳಲಾರದಂತಹ ಸುದ್ದಿಯಾಗಿ ಪರಿಣಮಿಸಿದೆ. ಸೋಮವಾರ ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಸ್ವಾಮೀಜಿ ಇಹಲೋಕ ತ್ಯಜಿಸಿರೋ ಪ್ರಸಂಗ ಮಠದ ಭಕ್ತರನ್ನು ಶೋಕಸಾಗರಕ್ಕೆ ತಳ್ಳಿದೆ.

click me!