Kalyana Karnataka : ಕಲಬುರಗಿ - ಕೊಲ್ಹಾಪುರ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

Published : Sep 17, 2022, 02:07 PM IST
Kalyana Karnataka : ಕಲಬುರಗಿ - ಕೊಲ್ಹಾಪುರ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

ಸಾರಾಂಶ

ಕಲಬುರಗಿ ಭಾಗದ ಜನತೆಗೆ ಸಿಹಿ ಸುದ್ದಿ. ಭಾರತೀಯ ರೈಲ್ವೇ ಸೊಲ್ಲಾಪುರ- ಕೊಲ್ಹಾಪೂರ ನಡುವೆ ಓಡುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನ ಸೇವೆಯನ್ನು ಕಲಬುರಗಿವರೆಗೂ ವಿಸ್ತರಿಸಿ ಈ ಭಾಗದ ಜನತೆಗೂ ಕೊಲ್ಹಾಪೂರ ಮಹಾಲಕ್ಷ್ಮೇ, ಪಂಢಪುರ ವಿಠ್ಠಲ- ರುಕ್ಮಿಣಿ ಸನ್ನಿಧಾನಕ್ಕೆ ಹೋಗಿ ಬರಲು ಅನುಕೂಲ ಮಾಡಿಕೊಟ್ಟಿದೆ

ಕಲಬುರಗಿ (ಸೆ.17) : ಕಲಬುರಗಿ ಭಾಗದ ಜನತೆಗೆ ಸಿಹಿ ಸುದ್ದಿ. ಭಾರತೀಯ ರೈಲ್ವೇ ಸೊಲ್ಲಾಪುರ- ಕೊಲ್ಹಾಪೂರ ನಡುವೆ ಓಡುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನ ಸೇವೆಯನ್ನು ಕಲಬುರಗಿವರೆಗೂ ವಿಸ್ತರಿಸಿ ಈ ಭಾಗದ ಜನತೆಗೂ ಕೊಲ್ಹಾಪೂರ ಮಹಾಲಕ್ಷ್ಮೇ, ಪಂಢಪುರ ವಿಠ್ಠಲ- ರುಕ್ಮಿಣಿ ಸನ್ನಿಧಾನಕ್ಕೆ ಹೋಗಿ ಬರಲು ಅನುಕೂಲ ಮಾಡಿಕೊಟ್ಟಿದೆ. ಈ ವಿಸ್ತೃತ ರೈಲು ಸೇವೆಗೆ ಕಲಬುರಗಿಯಲ್ಲಿ ಶುಕ್ರವಾರ ಚಾಲನೆ ನೀಡಲಾಗಿದೆ. ಕಲಬುರಗಿಯಿಂದ ಛತ್ರಪತಿ ಶಾಹು ಮಹಾರಾಜ್‌ ಟರ್ಮಿನಸ್‌ ಕೊಲ್ಹಾಪುರ ನಡುವೆ ನೂತನ ಚೇರ್‌ಕಾರ್‌ ಎಕ್ಸ್‌ಪ್ರೆಸ್‌ (ಸಿಟ್ಟಿಂಗ್‌) ರೈಲಿಗೆ ಇಲ್ಲಿನ ರೈಲು ನಿಲ್ದಾಣಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಾಲನೆ ನೀಡಲಾಯಿತು.

Yadgir: ಸೆ.17ಕ್ಕೆ ವಿಜೃಂಭಣೆಯ ಕಲ್ಯಾಣ ಕರ್ನಾಟಕ ಉತ್ಸವ

ಕೇಂದ್ರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಅವರು ಹುಬ್ಬಳಿಯಿಂದ ವರ್ಚುವಲ್‌ ವೇದಿಕೆ ಮೂಲಕ ಸೋಲಾಪುರ-ಮಿರಜ್‌ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಕಲಬುರಗಿ-ಕೊಲ್ಹಾಪೂರ ವಿಸ್ತರಣೆಗೊಂಡ ಮೊದಲ ದಿನದ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾಮ್‌ರ್‍ 1ರಲ್ಲಿ ನೂತನ ರೈಲಿನ ಆರಂಭಿಕ ಸಂಚಾರದ ಸಾಂಕೇತಿಕ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಸಂಸದ ಡಾ.ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಸ್ಥಳೀಯವಾಗಿ ಹಸಿರು ನಿಶಾನೆ ತೋರಿದರು.

ಎಕ್ಸ್‌ಪ್ರೆಸ್‌ ರೈಲು ಮಾರ್ಗ ಹೀಗಿದೆ ನೋಡಿ:

ಕಲಬುರಗಿ-ಕೊಲ್ಲಾಪೂರ ಎಕ್ಸ್‌ಪ್ರೆಸ್‌ ರೈಲು (ಸಂ.22155) ದತ್ತನ ಕ್ಷೇತ್ರ ಗಾಣಗಾಪುರ, ಸ್ವಾಮೀ ಸಮರ್ಥರ ಕ್ಷೇತ್ರ ಅಕ್ಕಲಕೋಟ ಮೂಲಕ ಕುರ್ಡವಾಡಿ, ವಿಠ್ಠಲನ ಕ್ಷೇತ್ರ ಪಂಢರಾಪೂರ, ಮೀರಜ್‌ ಜಂಕ್ಷನ್‌, ಜಯಸಿಂಗ್‌ ಪೂರ, ಹಕ್ತಂಗಳೆ ಮೂಲಕ ಮಹಾಲಕ್ಷ್ಮಿ ತಾಣ ಕೊಲ್ಹಾಪುರ ತಲುಪಲಿದೆ. ಕಲಬುರಗಿ ಹಾಗೂ ಕೊಲ್ಹಾಪೂರ ನಡುವಿನ ಅಂತರ 428 ಕಿ.ಮೀ ಕ್ರಮಿಸಲು ಈ ರೈಲಿಗೆ 7 ಗಂಟೆ ತಗುಲಲಿದೆ. 'ಕ​-ಕ ಅಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಲಿ'

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ