ಕಲಬುರಗಿಯ ಖ್ವಾಜಾ ಬಂದೇ ನವಾಜ್ ದರ್ಗಾಗೆ ಭೇಟಿ ನೀಡಿದ್ಯಾಕೆ ಹಿಂದೂ ಸ್ವಾಮೀಜಿಗಳು ?

Published : Sep 28, 2026, 09:03 AM IST
Khwaja Bande Nawaz Dargah

ಸಾರಾಂಶ

ಕಲಬುರಗಿಯ ಪ್ರಸಿದ್ಧ ಖ್ವಾಜಾ ಬಂದೇ ನವಾಜ್ ದರ್ಗಾಗೆ ವಿವಿಧ ಮಠಗಳ ಹಿಂದೂ ಸ್ವಾಮೀಜಿಗಳು ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಈ ಭೇಟಿಯು ಸೌಹಾರ್ದತೆ ಮತ್ತು ಧಾರ್ಮಿಕ ಸಹಬಾಳ್ವೆಯ ಪರಂಪರೆಯನ್ನು ಎತ್ತಿಹಿಡಿದಿದೆ. ದರ್ಗಾದ ಪ್ರತಿನಿಧಿಗಳು ಸ್ವಾಮೀಜಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ದರ್ಗಾದ ಐತಿಹಾಸಿಕ ಮಹತ್ವವನ್ನು ವಿವರಿಸಿದರು.

ಕಲಬುರಗಿ: ಈ ಭಾಗದ ಸೌಹಾರ್ದತೆ ಮತ್ತು ಧಾರ್ಮಿಕ ಸಹಬಾಳ್ವೆಯ ಪರಂಪರೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ, ಸವಣೂರಿನ ದೊಡ್ಡ ಹುಣಸೆ ಕಲ್ಮಠದ ಪರಮಪೂಜ್ಯ ಚನ್ನಬಸವ ಮಹಾಸ್ವಾಮೀಜಿ, ಬೈಲೂರಿನ ನಿಜಗುಣಾನಂದ ಮಹಾಸ್ವಾಮೀಜಿ, ಅಕ್ಕಿಮಠದ ಗುರುಲಿಂಗ ಮಹಾಸ್ವಾಮೀಜಿ ಹಾಗೂ ಮುಗುಳಿಯ ಬಸವಲಿಂಗ ಸ್ವಾಮೀಜಿ ಅವರು ಕಲಬುರಗಿಯ ಸುಲ್ತಾನ್-ಎ-ದಕ್ಕನ್ ದರ್ಗಾ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾಗೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.

ಧಾರ್ಮಿಕ ಮುಖಂಡರಿಗೆ ಆತ್ಮೀಯ ಸ್ವಾಗತ

ದರ್ಗಾಕ್ಕೆ ಆಗಮಿಸಿದ ಸ್ವಾಮೀಜಿಗಳನ್ನು ದರ್ಗಾದ ಸಜ್ಜಾದಾ ನಶೀನ್ ಅವರ ಕಿರಿಯ ಸಹೋದರರಾದ ಜನಾಬ್ ಡಾ. ಸೈಯದ್ ಮುಸ್ತಫಾ ಅಲ್ ಹುಸೈನಿ ಸಾಹೇಬ್ ಹಾಗೂ ಜನಾಬ್ ಸೈಯದ್ ಅಖೀಬ್ ಹುಸೈನಿ ಸಾಹೇಬ್ ಅವರು ಆತ್ಮೀಯವಾಗಿ ಸ್ವಾಗತಿಸಿ, ದರ್ಗಾ ಶರೀಫ್‌ನ ಜಿಯಾರತ್‌ಗೆ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಸ್ವಾಮೀಜಿಗಳು ಪವಿತ್ರ ದರ್ಗಾದಲ್ಲಿ ಗುಲ್-ಎ-ಅಖೀದತ್ ಅರ್ಪಿಸಿ, ಫಾತೇಹಾ ಖ್ವಾನಿಯಲ್ಲಿ ಪಾಲ್ಗೊಂಡರು. ಬಳಿಕ ಡಾ. ಸೈಯದ್ ಮುಸ್ತಫಾ ಅಲ್ ಹುಸೈನಿ ಸಾಹೇಬ್ ಅವರು ನಾಲ್ವರು ಸ್ವಾಮೀಜಿಗಳಿಗೆ ಅಭಿನಂದನೆ ಹಾಗೂ ಶುಭಾಶಯಗಳನ್ನು ಸಲ್ಲಿಸಿ ತಬರ್ರುಕಾತ್ ನೀಡಿದರು.

ದರ್ಗಾದ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವ

ನಂತರ ಡಾ. ಸೈಯದ್ ಮುಸ್ತಫಾ ಅಲ್ ಹುಸೈನಿ ಸಾಹೇಬ್ ಅವರು, ಸ್ವಾಮೀಜಿಗಳಿಗೆ ದರ್ಗಾ ಶರೀಫ್‌ನ ವಿವಿಧ ಭಾಗಗಳನ್ನು ಪರಿಚಯಿಸಿ, ದರ್ಗಾದ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವ, ಅದರ ಪರಂಪರೆ ಹಾಗೂ ಪ್ರಮುಖ ವೈಶಿಷ್ಟ್ಯಗಳ ಕುರಿತು ವಿವರಿಸಿದರು.

ಸ್ವಾಮೀಜಿಗಳು ದರ್ಗಾ ಪ್ರತಿನಿಧಿಗಳು ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಡಾ. ಸೈಯದ್ ಮುಸ್ತಫಾ ಅಲ್ ಹುಸೈನಿ ಸಾಹೇಬ್ ಹಾಗೂ ಸೈಯದ್ ಅಖೀಬ್ ಹುಸೈನಿ ಸಾಹೇಬ್ ಅವರಿಗೆ ಶುಭಾಶಯ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಇದನ್ನೂ ಓದಿ: ಕಲಬುರಗಿ ಜಿಐ ತೊಗರಿ ಬೇಳೆ ಮೊದಲ ಬಾರಿ ವಿದೇಶಕ್ಕೆ ರಫ್ತು! ಮಾಲ್ಡೀವ್ಸ್‌ಗೆ 1 ಮೆಟ್ರಿಕ್ ಟನ್

ಈ ಸಂದರ್ಭದಲ್ಲಿ ಖ್ವಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮಿರ್ ವಿಲಾಯತ್ ಅಲಿ, ದರ್ಗಾ ಶರೀಫ್‌ನ ಕಾರ್ಯದರ್ಶಿ ಅಬ್ದುಲ್ ಬಸಿತ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಪುತ್ಥಳಿ ತೆಗೆದು ಕಸದ ಲಾರಿಗೆ ತುಂಬಿಕೊಂಡು ಹೋದ ಕಲಬುರಗಿ ಪಾಲಿಕೆ; 15 ದಿನದಲ್ಲಿ ಮರುಸ್ಥಾಪನೆಗೆ ಆಗ್ರಹ!

PREV
Read more Articles on
click me!

Recommended Stories

ರಬಕವಿ-ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆ: ಮಗ್ಗಗಳ ಸದ್ದಿನ ನಡುವೆ ರೊಟ್ಟಿ ಸಪ್ಪಳ!
Hassan: 45 ವರ್ಷಗಳ ಬಳಿಕ ಒಂದಾದ ಎ.ವಿ ಶಿವಲಿಂಗಮ್ಮ ಪ್ರೌಢಶಾಲೆಯ ಗುರುಗಳು ಶಿಷ್ಯರು