ರಬಕವಿ-ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆ: ಮಗ್ಗಗಳ ಸದ್ದಿನ ನಡುವೆ ರೊಟ್ಟಿ ಸಪ್ಪಳ!

Published : Sep 28, 2026, 08:47 AM IST
Rabakavi Banahatti Jatre

ಸಾರಾಂಶ

ರಬಕವಿ-ಬನಹಟ್ಟಿಯ ಕಾಡಸಿದ್ಧೇಶ್ವರ ಜಾತ್ರೆಯ ನಿಮಿತ್ತ ಮಗ್ಗಗಳ ಸದ್ದಿನ ನಡುವೆ ರೊಟ್ಟಿ ಬಡಿಯುವ ಶಬ್ದ ಜೋರಾಗಿದೆ. ಭಕ್ತರು ವಿಶೇಷ ಹರಕೆಯಾಗಿ ಲಕ್ಷಾಂತರ ರೊಟ್ಟಿಗಳನ್ನು ದೇವರಿಗೆ ಅರ್ಪಿಸುತ್ತಿದ್ದು, ಮಾರುಕಟ್ಟೆಯಲ್ಲಿ ರೊಟ್ಟಿ ವ್ಯಾಪಾರ ಭರಾಟೆಯಿಂದ ಸಾಗಿದೆ. ಸೋಮವಾರದಿಂದ ಭಕ್ತರಿಗೆ ವಿಶೇಷ ರೊಟ್ಟಿ ಊಟದ ವ್ಯವಸ್ಥೆ ಮಾಡಲಾಗಿದೆ.

ಬಾಗಲಕೋಟೆ: ದಿನಂಪ್ರತಿ ಮಗ್ಗಗಳ ಸಪ್ಪಳದಲ್ಲಿಯೇ ಕಾಲ ನಿರ್ವಹಿಸುತ್ತಿದ್ದ ರಬಕವಿ-ಬನಹಟ್ಟಿ ಅವಳಿ ನಗರ ಇದೀಗ ಬನಹಟ್ಟಿ ಆರಾಧ್ಯದೈವ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಪ್ರಥಮ ಬಾರಿಗೆ ರೊಟ್ಟಿ ನೀಡುವ ಭರಾಟೆಯಲ್ಲಿ ಎಲ್ಲೆಂದರಲ್ಲಿ ರೊಟ್ಟಿಗಳ ಗುಡಿ ಕೈಗಾರಿಕೆ ಬಲು ಜೋರಾಗಿದ್ದು, ಮಗ್ಗಗಳಷ್ಟೇ ಸಪ್ಪಳ ರೊಟ್ಟಿ ಬಡಿಯುವ ಶಬ್ದ ಕಂಡು ಬರುತ್ತಿರುವದು ಸಾಮಾನ್ಯವಾಗಿದೆ.

ಮಾರುಕಟ್ಟೆಯಲ್ಲಿ ಹೊಸ ಹವಾ

ಅವಳಿ ನಗರಾದ್ಯಂತ ಮಾರುಕಟ್ಟೆಯಲ್ಲಿ ರೊಟ್ಟಿ ವ್ಯಾಪಾರ ಬಲು ಜೋರಾಗಿದೆ. ಅಷ್ಟಕಷ್ಟೇ ರೊಟ್ಟಿ ಮಾರಾಟವಾಗುತ್ತಿದ್ದ ವ್ಯಾಪಾರಿಗಳಿಗೆ ಇದೀಗ ಮೂಲ ವ್ಯಾಪಾರವನ್ನಾಗಿಸಿಕೊಂಡು ₹5 ದಿಂದ ₹12 ಗಳವರೆಗೆ ಮಾರಾಟ ಮಾಡುತ್ತಿದ್ದಾರೆ.

ಇತ್ತ ಹಲವು ಭಕ್ತರು ರೊಟ್ಟಿ ಖರೀದಿ ಮುಗಿ ಬಿದ್ದಿದ್ದು, ಜಾತ್ರೆಗೆ ವಿಶೇಷವಾಗಿ ದೇವರಿಗೆ ಅರ್ಪಿಸುತ್ತಿರುವದರಿಂದ ಒಂದು ವಾರ ಮೊದಲೇ ಜಾತ್ರೆಗೆ ಮೆರಗು ನೀಡಿದೆ. ಪಟಾಕಿಯಷ್ಠೇ ಮಹತ್ವ ಪಡೆದ ರೊಟ್ಟಿ: ಜಾತ್ರೆಯಲ್ಲಿ ಸುಮಾರು 70 ರಿಂದ 80 ಲಕ್ಷದವರೆಗೆ ಪಟಾಕಿ ಮದ್ದು ಸುಡುವ ಕಾರ್ಯಕ್ರಮದಿಂದ ಉತ್ತರ ಕರ್ನಾಟಕದಲ್ಲಿಯೇ ವಿಶೇಷತೆ ಪಡೆದಿದ್ದು, ಪ್ರಸಕ್ತ ವರ್ಷ ಒಂದುವರೆ ಲಕ್ಷದಷ್ಟು ರೊಟ್ಟಿ ಸಂಗ್ರಹವಾಗಿರುವುದು ವಿಶೇಷವಾಗಿದೆ.

ಮಹಿಳೆಯರಿಂದ ರೊಟ್ಟಿ ಬುತ್ತಿ

ಕಳೆದೊಂದು ವಾರದಿಂದ ಸರದಿಯಲ್ಲಿ ಗುಂಪು-ಗುಂಪಾಗಿ ಸಾವಿರಾರು ಮಹಿಳೆಯರು ತಲೆ ಮೇಲೆ ರೊಟ್ಟಿ ಬುತ್ತಿಗಳನ್ನು ಹೊತ್ತು ದೇವಾಲಯ ಆವರಣದೊಳಗೆ ತಂದು ಕೊಡುತ್ತಿದ್ದಾರೆ. ಈ ಬಾರಿ ಪ್ರಥಮ ಬಾರಿಗೆ ವಿಶೇಷ ಹರಕೆ ಹೊತ್ತುಕೊಂಡವರು ಸಾವಿರಾರು ರೊಟ್ಟಿಗಳನ್ನು ತರುತ್ತಿರುವದು ಗಮನೀಯ ಅಂಶ.

ಇದನ್ನೂ ಓದಿ: ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್‌ಗೇಟ್‌ಗಳ ಬದಲಾವಣೆಗೆ ₹42 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದ ರಾಜ್ಯ ನೀರಾವರಿ ನಿಗಮ!

ಇಂದಿನಿಂದ ರೊಟ್ಟಿ ಊಟ

ಸೋಮವಾರ ಬೆಳಗ್ಗೆ 9ಗಂಟೆಗೆ ಊರಿನ ಕಾಡಸಿದ್ಧೇಶ್ವರ ದೇವಾಲಯದಿಂದ ಸಾವಿರಾರು ಮಹಿಳೆಯರೊಂದಿಗೆ ಮತ್ತೇ ರೊಟ್ಟಿ ಬುತ್ತಿ ಹೊತ್ತು ಆರಾಧ್ಯದೈವ ಕಾಡಸಿದ್ಧೇಶ್ವರ ದೇವಾಲಯದವರೆಗೆ ಮೆರವಣಿಗೆ ಜರುಗಲಿದ್ದು, ಮಧ್ಯಾಹ್ನದಿಂದಲೇ ರೊಟ್ಟಿ ಊಟ ಶುರುವಾಗಲಿದೆ ಎಂದು ಜಾತ್ರಾ ಕಮಿಟಿಯ ಶ್ರೀಶೈಲ ದಭಾಡಿ ತಿಳಿಸಿದರು.

ಇದನ್ನೂ ಓದಿ: ನಿಲ್ದಾಣದ ಉಳಿವಿಗಾಗಿ ಬಾಗಲಕೋಟೆಯಿಂದ ಲೋಕಾಪುರದವರೆಗೆ ಪ್ಯಾಸೆಂಜರ್‌ ರೈಲು ಆರಂಭಿಸಿ

PREV
Read more Articles on
click me!

Recommended Stories

Hassan: 45 ವರ್ಷಗಳ ಬಳಿಕ ಒಂದಾದ ಎ.ವಿ ಶಿವಲಿಂಗಮ್ಮ ಪ್ರೌಢಶಾಲೆಯ ಗುರುಗಳು ಶಿಷ್ಯರು
ಕೇರಳದ ಮಾದರಿಯಲ್ಲಿ ಕರ್ನಾಟಕ ಕರಾವಳಿಗೂ ವಾಟರ್ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ