ಕೊರೋನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹಲವೆಡೆ ಸೋಂಕಿನ ಪ್ರಮಾಣ ಮಿತಿ ಮೀರಿದ್ದು ಈ ನಿಟ್ಟಿನಲ್ಲಿ ಇಲ್ಲಿ ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಕಲಬುರಗಿ (ಏ.17): ಕೊರೋನಾ ಸೋಂಕಿನ ಆರ್ಭಟದಿಂದಾಗಿ ಅಫಜಲ್ಪುರ ತಾಲೂಕಿನ ಬಂದರವಾಡಾ ಗ್ರಾಮ ಕಳೆದ 3 ದಿನದಿಂದ ಸೀಲ್‌ಡೌನ್ ಮಾಡಲಾಗಿದೆ.
ಕಳೆದ 2 ವಾರದಿಂದ ಊರಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತ ಸಾಗಿದ್ದವು. ಕಳೆದ ಸೋಮವಾರ ಒಂದೇದಿನ 46 ಮಂದಿಗೆ ಸೋಂಕು ತಗುಲಿರೋದು ಪತ್ತೆಯಾಗಿತ್ತು. ಇದಾದ ನಂತರ ನಿತ್ಯ ಸೋಂಕಿನ ಪ್ರಕರಣಗಳು ಊರಿಂದ ವರದಿಯಾಗುತ್ತಿರೋದರಿಂದ ಅಲ್ಲಿನ ಪಂಚಾಯ್ತಿಯವರು ಇಡೀ ಊರಿನ ಜನದಟ್ಟಣೆಯ ಅಂಗಡಿ ಮುಂಗಟ್ಟು, ಸಂತೆಮಾಳ ಸೇರಿದಂತೆ ಎಲ್ಲವನ್ನು ಬಂದ್ ಮಾಡಿ ಸೀಲ್‌ಡೌನ್ ಘೋಷಿಸಿದ್ದಾರೆ.
ಇನ್ನಷ್ಟು ಜಿಲ್ಲೆಗೆ ಕರ್ಫ್ಯೂ ವಿಸ್ತರಣೆ : ಸಿಎಂ
ಕೊರೋನಾ ಸೋಂಕಿನ ಸ್ಫೋಟವಾಗಿದೆ ಎಂದು ಅನೇಕ ಕುಟುಂಬಗಳು ಈ ಊರನ್ನೇ ತೊರೆಯುತ್ತಿದ್ದಾರೆ. ಅಣ್ಣಾರಾವ ಬಡಾವಣೆಯಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರಿಂದ ಇಲ್ಲಿನ 8 ಕುಟುಂಬಸ್ಥರು ಗ್ರಾಮ ತೊರೆದಿದ್ದಾರೆ. ಸೋಸಂಯಂದಿರು, ಮಕ್ಕಳು ತವರೂರಿಗೆ ಹೋದರೆ, ಹಿರಿಯರು ಮನೆಯಲ್ಲೇ ಉಳಿದಿದ್ದಾರೆ. ಹೊರಗಡೆ ಎಲ್ಲೂ ಬಾರದೆ ತಮ್ಮ ಸುರಕ್ಷತೆಯಲ್ಲಿದ್ದಾರೆಂದು ಊರವರು ಹೇಳಿದ್ದಾರೆ.
ಊರಲ್ಲಿ ಹಿರಿಯರೊಬ್ಬರು ಸಾವನ್ನಪ್ಪಿದ್ದರು. ಇವರ ಅಂತ್ಯ ಸಂಸ್ಕಾರಕ್ಕೆ ತೆರಳಿ ಬಂದ ನಂತರವೇ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಾಣಲಾರಂಭಿಸಿದೆ. ಈಗಾಗಲೇ ಸೋಂಕಿನಿಂದ 3 ಸಾವುನೋವು ಸಂಭವಿಸಿವೆ. ಅದೆಲ್ಲ ಸೋಂಕು ಹಾಗೇ ಉಲ್ಬಮಿಸುವುದೋ ಎಂದು ಹೆದರಿ ಗ್ರಾಮಸ್ಥರು ತಾವೇ ಸ್ವಯಂ ಇಂತಹ ಕಟ್ಟುಪಾಡಿಗೆ ಒಳಗಾಗಿದ್ದಾರೆ.