15 ಸಾವಿರಕ್ಕೆ ಚೂರು ಕಮ್ಮಿ..  ಭಯ ಬೀಳಿಸುತ್ತಿದೆ  ಕರ್ನಾಟಕದ ಲೆಕ್ಕ

By Suvarna News  |  First Published Apr 16, 2021, 9:55 PM IST

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಬ್ಬರ/ 4,859 ಪಾಸಿಟಿವ್ ಪ್ರಕರಣಗಳು / ಬೆಂಗಳೂರಿನಲ್ಲಿ ಇಂದು 9917 ಮಂದಿಗೆ ಸೋಂಕು ದೃಢ/ ರಾಜಧಾನಿಯಲ್ಲಿ ಸೋಂಕಿಗೆ 57 ಮಂದಿ ಬಲಿ


ಬೆಂಗಳೂರು  (ಏ. 16)  ಶುಕ್ರವಾರವೂ ಕರ್ನಾಟಕದಲ್ಲಿ ದಾಖಲೆಯ ಕೊರೋನಾ ಸೋಂಕು.   ಬರೋಬ್ಬರಿ 14,859 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 11,24,509ಕ್ಕೆ ಏರಿಕೆಯಾಗಿದ್ದು ಆತಂಕ ಹೆಚ್ಚಿಸುತ್ತಲೇ ಇದೆ.

ಕೊರೋನಾ ಸೋಂಕಿನಿಂದ 78 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 13,190ಕ್ಕೆ ಏರಿಕೆಯಾಗಿದೆ.  ಬೆಂಗಳೂರಿನಲ್ಲಿ ಇಂದು 9917 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 5,22,438ಕ್ಕೆ ಏರಿಕೆಯಾಗಿದೆ. ರಾಜಧಾನಿಯಲ್ಲಿ ಸೋಂಕಿಗೆ 57 ಮಂದಿ ಬಲಿಯಾಗಿದ್ದಾರೆ.

Latest Videos

undefined

ಟಫ್ ರೂಲ್ಸ್ ಅಧಿಕೃತ; ಮದುವೆಗೆ 100, ಅಂತ್ಯಕ್ರಿಯೆಗೆ 25 ಜನ ಮಾತ್ರ!

4031 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 10,03,985ಕ್ಕೆ ಏರಿಕೆಯಾಗಿದೆ. ಇನ್ನು 1,07315 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 577 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರಿದೆ ಇದೆ. ಸಿಎಂ ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು  ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಪಚುನಾವಣೆ ಪ್ರಚಾರದಲ್ಲಿ  ತೊಡಗಿಕೊಂಡಿದ್ದ ಅವರಿಗೆ ಕೊರೋನಾ ಅಂಟಿದೆ. ಈ ಕಾರಣಕ್ಕೆ ಅವರ ಸಂಪುಟ ಸಚಿವರು ಐಸೋಲೇಶನ್ ಗೆ ಒಳಗಾಗಿದ್ದಾರೆ. 

 

ಇಂದಿನ 16/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/AbvwnPAeOl pic.twitter.com/b8qj8d25nz

— K'taka Health Dept (@DHFWKA)
click me!